ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ವಿವೋ ತನ್ನ ಇತ್ತೀಚಿನ V-ಸರಣಿಯ ಸ್ಮಾರ್ಟ್‌ಫೋನ್ Vivo V60 5G ಅನ್ನು ಇಂದು (ಆಗಸ್ಟ್ 12, 2025) ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. V50 ಸರಣಿಯ ಉತ್ತರಾಧಿಕಾರಿ ಈ ಫೋನ್ ಫೋಟೋಗ್ರಫಿ, ಗೇಮಿಂಗ್ ಮತ್ತು ದೈನಂದಿನ ಬಳಕೆಗೆ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳಿಂದ ಮಧ್ಯಮ-ಶ್ರೇಣಿಯ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತದೆ. ಫೋಟೋಗ್ರಫಿ ಉತ್ಸಾಹಿಗಳಿಗೆ, ಗೇಮರ್‌ಗಳಿಗೆ, ಮತ್ತು ಸ್ಟೈಲಿಶ್ ಫೋನ್‌ಗಾಗಿ ಹುಡುಕುವವರಿಗೆ ಇದು ಆಕರ್ಷಕ ಆಯ್ಕೆಯಾಗಿದೆ.
Vivo V60 5G launch date:
ವಿವೋ V60 5G ಆಗಸ್ಟ್ 12, 2025 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಿದೆ, ಮತ್ತು ಕಾರ್ಯಕ್ರಮವನ್ನು ವಿವೋದ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಲಾಗಿದೆ. ಫೋನ್ ಭಾರತ, ಇಂಡೋನೇಷಿಯಾ, ಥೈಲ್ಯಾಂಡ್‌ನಂತಹ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, Amazon India, ಫ್ಲಿಪ್‌ಕಾರ್ಟ್, ವಿವೋ ಇ-ಸ್ಟೋರ್, ಮತ್ತು ಆಫ್‌ಲೈನ್ ವಿತರಕರ ಮೂಲಕ ಮಾರಾಟವಾಗುತ್ತಿದೆ.

Vivo V60 Specifications:
ವಿವೋ V60 5G ಈ ಕೇಳಗೆ ನೀಡಲಾಗಿರುವ Specifications ಗಳನ್ನು ಹೊಂದಿದೆ.
ಕ್ಯಾಮೆರಾ ಮಾಹಿತಿ:
- 50MP ZEISS ಸೂಪರ್ ಟೆಲಿಫೋಟೊ ಕ್ಯಾಮೆರಾ (OIS, 3x ಆಪ್ಟಿಕಲ್ ಜೂಮ್, 100x ಡಿಜಿಟಲ್ ಜೂಮ್)
- 8MP ಅಲ್ಟ್ರಾ-ವೈಡ್ ಕ್ಯಾಮೆರಾ (106° FOV, distortion correction)
- 50MP ಫ್ರಂಟ್ ಕ್ಯಾಮೆರಾ (ಆಟೋಫೋಕಸ್)
- AI ವೈಶಿಷ್ಟ್ಯಗಳು: AI Four-Season Portrait, AI Magic Move, ಭಾರತ-ವಿಶೇಷ Wedding vLog Mode, ZEISS ಮಲ್ಟಿಫೋಕಲ್ ಪೋರ್ಟ್ರೇಟ್ (85mm, 100mm).

ಡಿಸ್‌ಪ್ಲೇ ಮತ್ತು ವಿನ್ಯಾಸ:
- 6.67-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್‌ಪ್ಲೇ: 1.5K ರೆಸಲ್ಯೂಷನ್, 120Hz ರಿಫ್ರೆಶ್ ರೇಟ್, 1600 ನಿಟ್ಸ್ ಬ್ರೈಟ್‌ನೆಸ್, HDR10+.
- IP68/IP69 ರೇಟಿಂಗ್: 1.5m ಆಳದಲ್ಲಿ 120 ನಿಮಿಷಗಳವರೆಗೆ ನೀರು ಮತ್ತು ಧೂಳು ನಿರೋಧಕ.
- ವಿನ್ಯಾಸ: 0.753 cm ದಪ್ಪ, ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆ, ಪ್ಲಾಸ್ಟಿಕ್ ಫ್ರೇಮ್.
- ಬಣ್ಣಗಳು: ಆಸ್ಪಿಷಿಯಸ್ ಗೋಲ್ಡ್, ಮೂನ್‌ಲಿಟ್ ಬ್ಲೂ, ಮತ್ತು ಮಿಸ್ಟ್ ಗ್ರೇ ಈ ಮೂರು ಬಣ್ಣಗಳಲ್ಲಿ V60 ಬಿಡುಗಡೆಯಾಗಲಿದೆ.
ಕಾರ್ಯಕ್ಷಮತೆ:
- ಪ್ರೊಸೆಸರ್: ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 4 (27% ವೇಗವಾದ CPU, 30% ಶಕ್ತಿಶಾಲಿ GPU, 26% ಗೇಮಿಂಗ್ ದಕ್ಷತೆ).
- RAM/ಸಂಗ್ರಹಣೆ: 8GB+128GB, 8GB+256GB, 12GB+512GB (UFS 2.2).
- OS: ಆಂಡ್ರಾಯ್ಡ್ 15 ಆಧಾರಿತ Funtouch OS 15, AI Captions, ಗೂಗಲ್ ಜೆಮಿನಿ AI, ವಿವೋ V-ಅಸಿಸ್ಟೆಂಟ್, 3 ವರ್ಷಗಳ OS ಅಪ್‌ಡೇಟ್‌ಗಳು, 4 ವರ್ಷಗಳ ಭದ್ರತಾ ಅಪ್‌ಡೇಟ್‌ಗಳು.

ಬ್ಯಾಟರಿ:
- 6,500mAh ಬ್ಯಾಟರಿ, 90W ವೇಗದ ಚಾರ್ಜಿಂಗ್ (25 ನಿಮಿಷಗಳಲ್ಲಿ 50% ಚಾರ್ಜ್).
ಇತರೆ ವೈಶಿಷ್ಟ್ಯಗಳು:
- ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, Hi-Res ಆಡಿಯೊ, Bluetooth 5.4 (aptX HD, LDAC), 5G, Wi-Fi 6, ಡ್ಯುಯಲ್-ಸಿಮ್, NFC, ಮತ್ತು ಇನ್‌ಫ್ರಾರೆಡ್ ಬ್ಲಾಸ್ಟರ್, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್.

Vivo V60 5G Price: ವಿವೋ V60 5G ಭಾರತದಲ್ಲಿ ₹36,999 ರಿಂದ ₹45,999 ರವರೆಗಿನ ಬೆಲೆಯಲ್ಲಿ ಈ ಕೇಳಗಿನಂತೆ RAM ಮತ್ತು Storage ತಕ್ಕಂತೆ ಲಭ್ಯವಿದೆ.
- 8GB RAM +128GB Storage: ₹36,999
- 8GB RAM +256GB Storage: ₹38,999
- 12GB RAM +512GB Storage: ₹40,999
- 16GB RAM + 512GB Storage: ₹45,999
ಲಭ್ಯತೆ: Amazon India, ಫ್ಲಿಪ್‌ಕಾರ್ಟ್, ವಿವೋ ಇ-ಸ್ಟೋರ್, ಆಫ್‌ಲೈನ್ ವಿತರಕರಲ್ಲಿ ಈ ಮೊಬೈಲ್ ಲಭ್ಯವಿದ್ದು, ವಿವಿಧ Credit Card, Debit Card ರಿಯಾಯಿತಿಗಳು ಮತ್ತು ನೋ-ಕಾಸ್ಟ್ EMI ಆಫರ್‌ಗಳು ನೀಡಲಾಗುತ್ತಿದೆ, ಹೆಚ್ಚಿನ ಮಾಹಿತಿಗಾಗಿ Amazon ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಸದ್ಯಕ್ಕೆ PreBooking ನಡೆಯುತ್ತಿದ್ದು, ಆಗಸ್ಟ್ 19, 2025 ರಂದು ಮಾರುಕಟ್ಟೆಯಲ್ಲಿ ಲಭವಾಗಲಿದೆ.
ವಿಶೇಷತೆಗಳು: Vivo V60 5G ತನ್ನ ZEISS ಕ್ಯಾಮೆರಾಗಳು, ಸ್ನಾಪ್‌ಡ್ರಾಗನ್ 7 Gen 4, 6,500mAh ಬ್ಯಾಟರಿ, ಮತ್ತು AI-ಆಧಾರಿತ ವೈಶಿಷ್ಟ್ಯಗಳೊಂದಿಗೆ ಮಧ್ಯಮ-ಶ್ರೇಣಿಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನಾರ್ಹವಾಗಿದೆ. ಭಾರತ-ವಿಶೇಷ Wedding vLog Mode ಮತ್ತು AI Four-Season Portrait ಫೋಟೋಗ್ರಫಿ ಉತ್ಸಾಹಿಗಳಿಗೆ ಆಕರ್ಷಕವಾಗಿದೆ.
ಇತರೆ ಮಾಹಿತಿಗಳನ್ನು ಓದಿ
ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ

