ಎಲ್ಲರಿಗೂ ನಮಸ್ಕಾರ.. ಈ ಲೇಖನದಲ್ಲಿ ಕರ್ನಾಟಕ ಸರ್ಕಾರದ ಯೋಜನೆಗಳಲ್ಲಿ ಒಂದಾಗಿರುವ (Karnataka Govt Schemes) ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ (Micro Credit Prerana Scheme) ಯ ಮಾಹಿತಿಯನ್ನು ನೀಡಲಾಗಿದೆ. ಮಾಹಿತಿ ಪಡೆದು ಆರ್ಥಿಕ ಸ್ವಾವಲಂಬನೆ ಯೋಜನೆಯ ಲಾಭ ಪಡೆಯಿರಿ.
ಮಹಿಳೆಯರಲ್ಲಿ ಗುಂಪು ಚಟುವಟಿಕೆಗೆ ಉತ್ತೇಜನ ನೀಡಿ ಆದಾಯಗಳಿಸುವ ಉತ್ಪಾದನಾ ಅಥವಾ ಸೇವಾ ಘಟಕಗಳನ್ನು ಪ್ರಾರಂಭಿಸಲು ಮಹಿಳಾ ಸ್ವ-ಸಹಾಯ ಸಂಘದ ಮೂಲಕ ಮೈಕ್ರೋ ಕ್ರೆಡಿಟ್ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. “ಕನಿಷ್ಟ 10 ಮಹಿಳೆಯರು ಇರುವ ಸ್ವ ಸಹಾಯ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಉತ್ತಮ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ನೆರವನ್ನು ಕಲ್ಪಿಸಲಾಗುವುದು.”
Micro Credit Prerana Scheme 2025 ಮಾಹಿತಿ:
ಯೋಜನೆಯ ಹೆಸರು: ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ
ಸಹಾಯಧನ ಮೊತ್ತ: ರೂ.2.50 ಲಕ್ಷ ಸಹಾಯಧನ
ಅರ್ಜಿದಾರರ ವಯಸ್ಸು: 21 ವರ್ಷ ಮೇಲ್ಪಟ್ಟವರು
ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯ ವೈಶಿಷ್ಟ್ಯಗಳು:
- ಕನಿಷ್ಟ 10 ಮಹಿಳಾ ಸದಸ್ಯರಿರುವ ಸ್ವ ಸಹಾಯ ಗುಂಪಿನ ಪ್ರತಿ ಸದಸ್ಯರಿಗೆ 50,000 ರೂ. ರಂತೆ ಒಟ್ಟು ರೂ.5 ಲಕ್ಷ ಹಣವನ್ನು ನಿಗಮದಿಂದ ಮಂಜೂರು ಮಾಡುತ್ತಾರೆ.
- ಮೈಕ್ರೋ ಕ್ರೆಡಿಟ್ ಯೋಜನೆಯಡಿ ಘಟಕ ವೆಚ್ಚದ ಪೈಕಿ ಪ್ರತಿ ಫಲಾನುಭವಿಗೆ ರೂ. 25 ಸಾವಿರ ಸಹಾಯಧನ ಮತ್ತು ರೂ. 25 ಸಾವಿರ ಸಾಲದ ಮೊತ್ತವಾಗಿರುತ್ತದೆ.
- ಸಾಲದ ಮೊತ್ತವನ್ನು ಶೇ.4 ರ ಬಡ್ಡಿ ದರದಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ.
Micro Credit Scheme 2025 Karnataka ಬೇಕಾಗುವ ದಾಖಲೆಗಳು:
- ಎಲ್ಲಾ ಅರ್ಜಿದಾರರ ಆಹಾರ ಪಡಿತರ ಚೀಟಿ
- ಎಲ್ಲಾ ಅರ್ಜಿದಾರರ ಆಧಾರ್ ಕಾರ್ಡ್
- ಎಲ್ಲಾ ಅರ್ಜಿದಾರರ ಚುನಾವಣಾ ಗುರುತಿನ ಚೀಟಿ
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಎಲ್ಲಾ ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಯಡಿಲ್ಲಿ ಸೌಲಭ್ಯ ಪಡೆದಿಲ್ಲವೆಂದು ಎಲ್ಲಾ ಅರ್ಜಿದಾರರ ಸ್ವಯಂ ಘೋಷಣೆ
- ಎಲ್ಲಾ ಅರ್ಜಿದಾರರ ಇತ್ತೀಚಿನ ಭಾವಚಿತ್ರ
- ಸಂಘದ ಬ್ಯಾಂಕ್ ಪಾಸ್ ಪುಸ್ತಕ (ಮುಖಪುಟ ಸಹಿತ)
- ಚಾಲ್ತಿಯಲ್ಲಿರುವ ಸಂಘದ ನೊಂದಣಿ ಪತ್ರ
- ಇತ್ತೀಚಿನ ಕನಿಷ್ಠ 3 ತಿಂಗಳ ಸಂಘದ ನಡವಳಿ ಪುಸ್ತಕದ ಪ್ರತಿ
- ಜಾತಿ ಪ್ರಮಾಣಪತ್ರ (Caste Certificate)
- ಆದಾಯ ಪ್ರಮಾಣಪತ್ರ (Income Certificate)
ಯಾರು ಅರ್ಜಿ ಸಲ್ಲಿಸಬಹುದು?
ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
- ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.
- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
- ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ
Micro Credit Prerana Scheme 2025 ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.
2025-2026 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಯ ಮಾನದಂಡಗಳು:
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
- ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರಬೇಕು
- ಅರ್ಜಿದಾರರ ವಯಸ್ಸು 21 ರಿಂದ 60 ವರ್ಷದೊಳಗಿರಬೇಕು
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು, ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರಬಾರದು
- ಅರ್ಜಿದಾರರ ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗಕ್ಕೆ ರೂ 1.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿರುವವರಿಗೆ ರೂ 2.00 ಲಕ್ಷ ಮೀರಿರಬಾರದು
- ವಿಕಲಚೇತನರಾಗಿದ್ದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಸಲ್ಲಿಸುವುದು
- ಚಾಲ್ತಿಯಲ್ಲಿರುವ ಸಂಘದ ನೊಂದಣಿ ಪತ್ರ
- ಸಂಘದ ಶೇ 60 ರ ಪರಿಶಿಷ್ಟ ಜಾತಿಯ ಸದಸ್ಯರುಗಳ ಪೈಕಿ ಶೇ 40 ರಷ್ಟು ಸದಸ್ಯರು ನಿಗಮಕ್ಕೆ ಸೇರಿದ ಉಪ ಜಾತಿಯವರಾಗಿರಬೇಕು
- ಸಂಘದ ಸದಸ್ಯರು ಪಡಿತರ ಚೀಟಿಯನ್ನು ಹೊಂದಿರಬೇಕು
ಪ್ರಮುಖ ದಿನಾಂಕಗಳು:
- ಸಮಾಜ ಕಲ್ಯಾಣ ಇಲಾಖೆ ಅರ್ಜಿ ಸಲ್ಲಿಕೆ ಆರಂಭ: 07-08-2025
- ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅರ್ಜಿ ಸಲ್ಲಿಕೆ ಆರಂಭ: 18-08-2025
- ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-09-2025
- ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಯೋಜನೆಗಳ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-09-2025
Micro Credit Prerana Scheme 2025 Karnataka Application Link:
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sevasindhu.karnataka.gov.in
ವಿಷೇಶ ಸೂಚನೆಗಳು:
- ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೊರ್ಟಲ್ ಮೂಲಕವೇ ಸಲ್ಲಿಸುವುದು.
- ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
- ಫಲಾಪೇಕ್ಷಿಗಳು ‘ಗ್ರಾಮ ಒನ್ʼ, ʼಬೆಂಗಳೂರು ಒನ್ʼ, ʼಕರ್ನಾಟಕ ಒನ್ʼ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
2023-24 ಮತ್ತು 2024-25 ಸಾಲಿನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಸಹಾಯವಾಣಿ ಸಂಖ್ಯೆ 9482-300-400 ಗೆ ಸಂಪರ್ಕಿಸಬಹುದು.
ಇತರೆ ಮಾಹಿತಿಗಳನ್ನು ಓದಿ
ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ

