ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್. ಗೃಹಲಕ್ಷ್ಮೀ ಹಣ (Gruhalakshmi Amount) ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಿದ್ದೀರಾ..? ಹಾಗಿದ್ದರೇ ಚಿಂತೆ ಬಿಡಿ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಅರ್ಹ ಮಹಿಳೆಯರಿಗೆ ತಿಂಗಳಿಗೆ 2,000 ರೂ. ರಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಸಂದಾಯ ಮಾಡುತ್ತಾರೆ.
ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರ ಸಭಲೀಕರಣಕ್ಕಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಹಣದಿಂದ ಮಹಿಳೆಯರು ತಮ್ಮ ಅಗತ್ಯದ ವಸ್ತುಗಳನ್ನು ಖರೀದಿ ಮಾಡಿದ್ದಾರೆ.
Gruhalakshmi Amount DBT Check 2025:
ಗೃಹಲಕ್ಷ್ಮೀ ಯೋಜನೆಯ ಹಣವು ಇಂದು (18-08-2025) ಅರ್ಹ ಫಲಾನುಭವಿಗಳ ಖಾತೆಗೆ ಸಂದಾಯವಾಗಿದ್ದು, ಹಂತ ಹಂತವಾಗಿ ಇನ್ನೂಳಿದ ಜಿಲ್ಲೆಗಳ ಫಲಾನುಭವಿಗಳ ಖಾತೆಗೂ ಜಮಾ ಆಗಲಿದೆ. ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣವು ವರ್ಗಾವಣೆ ಆಗಿದೆಯಾ ಅಂತ DBT Status ಚೆಕ್ ಮಾಡಿಕೊಳ್ಳಬಹುದು.

ಗೃಹಲಕ್ಷ್ಮೀ ಯೋಜನೆಯ ಹಣವು ನಿಮಗೆ ಸಂದಾಯವಾಗದಿದ್ದರೆ ಕೂಡಲೇ ನಿಮ್ಮ ಹತ್ತಿರದ ಸಿಡಿಪಿಓ ಕಚೇರಿ ತೆರಳಿ Status ಪರಿಶೀಲನೆ ಮಾಡಿಸಿ NPCI Failure/ E-KYC Failure ಎಂದು ಬಂದ ಕೂಡಲೇ ಅಗತ್ಯ ದಾಖಲೆಗಳಾದ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ತೆಗೆದುಕೊಂಡು ಹೋಗಿ ಸರಿಪಡಿಸಿಕೊಳ್ಳಬಹುದು.
Gruhalakshmi Scheme DBT Status Check 2025: ಚೆಕ್ ಮಾಡಿ
ಇತರೆ ಮಾಹಿತಿಗಳನ್ನು ಓದಿ:
ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ

