ನಮಸ್ಕಾರ ಸ್ನೇಹಿತರೇ… ನೀವು ಸ್ವಂತಃ ವಾಹನ ಖರೀದಿ ಮಾಡಬೇಕೆ? ಕರ್ನಾಟಕ ಸರ್ಕಾರ ನೀಡುವ 4 ಲಕ್ಷ ರೂ. ಸಬ್ಸಿಡಿ ಪಡೆಯಬೇಕೇ? ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Karnataka) ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಯೋಜನೆಯ ಬಗ್ಗೆ ಮಾಹಿತಿ ಪಡೆದು ಚಾಲಕ ವೃತ್ತಿಯಿಂದ ಉದ್ಯಮ ಆರಂಭಿಸಿ.
ಸ್ನೇಹಿತರೇ.. ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ದೇಶದಾದ್ಯಂತ ಇಗಾಗಲೇ ಚರ್ಚೆ ನಡೆಯುತ್ತಿದೆ. ರಾಜ್ಯ ಸರ್ಕಾರದ ವಿವಿಧ ನಿಗಮಗಳ ಮೂಲಕ ವಿವಿಧ ಸಮೂದಾಯಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿರುತ್ತದೆ. ಅದರಂತೆ ಸ್ವಾವಲಂಬಿ ಸಾರಥಿ ಯೋಜನೆಯು ಅದರಲ್ಲಿ ಒಂದು.
Swavalambi Sarathi Karnataka ಮಾಹಿತಿ:
ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
ಸಹಾಯಧನ ಮೊತ್ತ: ವಾಹನದ ಮೌಲ್ಯದ ಶೇ 75 ರಷ್ಟು ಅಥವಾ ಗರಿಷ್ಠ ರೂ. 4 ಲಕ್ಷದ ವರೆಗೆ
ಅರ್ಜಿದಾರರ ವಯಸ್ಸು: 18 ರಿಂದ 55 ವರ್ಷ
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ಈ ಯೋಜನೆಯನ್ನು ಬ್ಯಾಂಕ್ ಸಹಯೋಗದೊಂದಿಗೆ ಅನುಷ್ಟಾನ ತರಲಾಗುತ್ತದೆ.
- ಸ್ವಾವಲಂಬಿ ಸಾರಥಿ: ಸರಕು ವಾಹನ/ಬ್ಯಾಕ್ಸಿ ಹಳದಿ ಬೋರ್ಡ್ ವಾಹನದ ವೆಚ್ಚದ ಶೇ.75 ರಷ್ಟು ಸಹಾಯಧನ ಗರಿಷ್ಟ ರೂ.4 ಲಕ್ಷ
Udyama Sheelata Abhivruddi Yojane: ಬೇಕಾಗುವ ದಾಖಲೆಗಳು:
- ಜಾತಿ ಪ್ರಮಾಣಪತ್ರ (Caste Certificate)
- ಆದಾಯ ಪ್ರಮಾಣಪತ್ರ (Income Certificate)
- ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
- ವಾಹನ ಚಾಲನಾ ಪರವಾನಗಿ (Driving Licence) ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ವಾಹನದ ಅಂದಾಜು ದರಪಟ್ಟಿ
- ಸ್ವಯಂ ಘೋಷಣೆ ಪತ್ರ
- ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ
- ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ
Taxi Subsidy Scheme Karnataka 2024: ಯಾರು ಅರ್ಜಿ ಸಲ್ಲಿಸಬಹುದು?
ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
- ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.
- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ
Swavalambi Sarathi Karnataka ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.
2024-2025 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಸ್ವಾವಲಂಬಿ ಸಾರಥಿ ಯೋಜನೆಯ ಅರ್ಜಿ ಆಹ್ವಾನಿಸಲಾಗುತ್ತಿದೆ.
Car Loan Subsidy For SC/ST ಪ್ರಮುಖ ದಿನಾಂಕಗಳು:
ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-10-2024
Swawalambi Sarathi Yojana Karnataka Application Link:
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sevasindhu.karnataka.gov.in
ವಿಷೇಶ ಸೂಚನೆಗಳು:
- ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೊರ್ಟಲ್ ಮೂಲಕವೇ ಸಲ್ಲಿಸುವುದು.
- ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
- ಫಲಾಪೇಕ್ಷಿಗಳು ‘ಗ್ರಾಮ ಒನ್ʼ, ʼಬೆಂಗಳೂರು ಒನ್ʼ, ʼಕರ್ನಾಟಕ ಒನ್ʼ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ನಿಯಮಗಳು: ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.
ಇತರೆ ಮಾಹಿತಿಗಳನ್ನು ಓದಿ
ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ