ಪಿಎಂ ಕಿಸಾನ್‌ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ | PM Kisan 13th Installment Date Kannada

ರೈತರಿಗೆ ಆರ್ಥಿಕವಾಗಿ ಸಹಾಯವಾಗುವ ನಿಟ್ಟಿನಲ್ಲಿ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ (PM Kisan 13th Installment Date Kannada) ಅಡಿ ನೀಡಲಾಗುವ 13 ನೇ ಕಂತಿನ 2,000 ರೂ. ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. ಈ ಕಂತಿನಲ್ಲಿ ಸುಮಾರು 8 ಕೋಟಿ ರೈತರ ಖಾತೆಗಳಿಗೆ 16,800 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆ (Pradhan Mantri Kisan Samman Nidhi) ಯಡಿಯಲ್ಲಿ ವಾರ್ಷಿಕ ರೂ. 6,000 ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ಫಲಾನುಭವಿ ಕೃಷಿಕರಿಗೆ ವರ್ಗಾವಣೆ ಮಾಡಲಾಗಿದೆ. (PM Kisan 13th Installment Date Kannada) 13 ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಅವರು ಬೆಳಗಾವಿಯಲ್ಲಿ 27 ಫೆಬ್ರವರಿ, 2023 ರಂದು ಮಧ್ಯಾಹ್ನ 3.30 ರಿಂದ 4.30 ನಡೆಯುವ ಕಾರ್ಯಕ್ರಮದಲ್ಲಿ ವರ್ಗಾಯಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ (Govt Schemes) ಯೋಜನೆಯಾಗಿದ್ದು, ಶೇಕಡಾ 100 ರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ಭರಿಸುತ್ತದೆ. 2018 ರ ಡಿಸೆಂಬರ್ 1 ರಂದು ಈ ಯೋಜನೆಯನ್ನು ಆರಂಭಿಸಲಾಗಿದ್ದು, ಈ ಯೋಜನೆಯಡಿ 2 ಹೆಕ್ಟೇರ್​ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿ ರೈತರ ಬ್ಯಾಂಕ್​ ಖಾತೆಗೆ ಸರ್ಕಾರ ವರ್ಗಾವಣೆ ಮಾಡುತ್ತದೆ.

PM Kisan 13th Installment Date Kannada ಪರಿಶೀಲನೆ ಮಾಡುವ ವಿಧಾನ

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – pmkisan.gov.in
  2. ‘Beneficiary Status’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  3. ಇಲ್ಲಿ ಹೊಸ ಪುಟ ತೆರೆಯುತ್ತದೆ.
  4. ನಿಮ್ಮ Mobile Number ಅಥವಾ Registration Number ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ.
  5. ನಿಮ್ಮ ಖಾತೆಗೆ ಹಣ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಈ 2 ಸಂಖ್ಯೆಗಳ ಮೂಲಕ ಪರಿಶೀಲಿಸಬಹುದು.
  6. ಈ ಎರಡರ ಸಂಖ್ಯೆಯನ್ನು ನಮೂದಿಸಿ, ನೀವು ‘Get Data’ ಮೇಲೆ ಕ್ಲಿಕ್ ಮಾಡಿ
  7. ಅಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು
  8. “Beneficiary List” ಆಯ್ಕೆ ಮಾಡಿ ನಿಮ್ಮ ಊರಿನ ಹೆಸರು ನಮೂದಿಸಿ ನಿಮ್ಮ ಊರಿನ PM Kisan 13th installment List ಪಡೆಯಬಹುದು.
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment