ಅನ್ನಭಾಗ್ಯ: ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ ಯಾವಾಗ?, DBT Status ಚೆಕ್‌ ಮಾಡಿ | Annabhagya DBT Status Check Online September 2023 @ahara.kar.nic.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ.. ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಯಾವಾಗ ಬಿಡುಗಡೆ ಮಾಡಲಾಗುತ್ತದೆ. ನಿಮ್ಮ ರೇಷನ್‌ ಕಾರ್ಡ್‌ಗೆ ಹಣ ಎಂದು ವರ್ಗಾವಣೆ ಆಗಿಲಿದೆ..? ಎಂಬುದನ್ನು ಚೆಕ್‌ ಮಾಡುವ (September Month Annabhagya DBT Status Check) ಸುಲಭ ವಿಧಾನನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಓದಿ ನಿಮ್ಮ ರೇಷನ್‌ ಕಾರ್ಡ್‌ Amount ಬಗ್ಗೆ ಮಾಹಿತಿ ತಿಳಿಯಿರಿ.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ಕೆ.ಜಿಗೆ 34 ರೂ. ರಂತೆ BPL ಕಾರ್ಡ್‌ ಮತ್ತು ಅಂತ್ಯೋದಯ ಪಡಿತರ ಚೀಟಿದಾರರ ಬ್ಯಾಂಕ್‌ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತಿದೆ. ಅದರಂತೆ ಜುಲೈ ಮತ್ತು ಆಗಸ್ಟ್ ತಿಂಗಳ‌ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.

Ration Card Amount ಲೆಕ್ಕಾಚಾರ

ಕಾಂಗ್ರೇಸ್ ಪಕ್ಷ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಕುಟುಂಬದ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಅದರಂತೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 170 ರೂ. ರಂತೆ ದುಡ್ಡು ಕೊಡಲಾಗುತ್ತದೆ.

BPL Card ಕುಟುಂಬದ ಲೆಕ್ಕ:

ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದಲ್ಲಿ ಎಷ್ಟು ಜನರು ಇರುತ್ತಾರೆ ಪ್ರತಿಯೊಬ್ಬರಿಗೆ ಪ್ರತಿ ಸದಸ್ಯರಿಗೆ 170 ರೂ. ರಂತೆ ಈ ಕೇಳಗಿನಂತೆ ಮೊತ್ತವನ್ನು ನೀಡುತ್ತಾರೆ.

  1. ಒಬ್ಬ ಸದಸ್ಯರಿದ್ದರೆ – 170 ರೂ.
  2. ಇಬ್ಬರಿಗೆ – 340 ರೂ.
  3. ಮೂವರಿಗೆ – 510 ರೂ.
  4. ನಾಲ್ಕು ಜನ ಸದಸ್ಯರಿದ್ದರೆ – 680 ರೂ.
  5. ಐದು ಜನ ಸದಸ್ಯರಿದ್ದರೆ – 850 ರೂ.
  6. ಆರು ಜನ ಸದಸ್ಯರಿದ್ದರೆ – 1,020 ರೂ.

ಈ ರೀತಿಯಾಗಿ ರೇಷನ್‌ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರೆಂದು ಗುರುತಿಸಿಕೊಂಡವರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುತ್ತಾರೆ.

ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಮಾಡಲುಗುತ್ತಿದ್ದು, ನಿಮ್ಮ ಪಡಿತರ ಚೀಟಿಯ ಹಣ ಬಿಡುಗಡೆಯಾಗಿದೆಯಾ ಚೆಕ್‌ ಮಾಡಿ.

September Month Annabhagya DBT Status Check Online

ಅನ್ನಭಾಗ್ಯ ಯೋಜನೆಯ (ahara kar nic in dbt status) ಸೆಪ್ಟೆಂಬರ್ ತಿಂಗಳ ದುಡ್ಡು ನಿಮ್ಮ ಖಾತೆಗೆ ಬಂದಿದೆಯಾ ಅಥವಾ ಎಷ್ಟು ಬರಲಿದೆ ಎಂಬುದನ್ನು ತಿಳಿಯಲು ಈ ಸುಲಭ ವಿಧಾನವನ್ನು ಫಾಲೋ ಮಾಡಿ.

  • Step-1: ಮೊದಲಿಗೆ ಕೇಳಗೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ (ahara.kar.nic.in/lpg) ಮೇಲೆ ಕ್ಲಿಕ್‌ ಮಾಡಿ.
  • Step-2: ಅಲ್ಲಿ ಮೂರು ಲಿಂಕ್‌ಗಳಿರುವ ಇಂದು ಪೆಜ್‌ ಒಪನ್‌ ಆಗುತ್ತದೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಉದಾ. ONLY FOR BENGALURU DISTRICTS CLICK HERE ಎಂದಿರುತ್ತದೆ.
Annabhagya DBT Status Check Online 2023 @ahara.kar.nic.in
Annabhagya DBT Payment Status Check
  • Step-3: ನೇರ ನಗದು ವರ್ಗಾವಣೆಯ ಸ್ಥಿತಿ (Status Of DBT) ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ( ಕೇಳಗಿನ ಚಿತ್ರದಲ್ಲಿ ಕೊನೆಯ Option ಇದೆ ಗಮನಿಸಿ)
ahara kar nic in dbt status
  • Step-4: Status of DBT ಪುಟ ಓಪನ್‌ ಆಗುತ್ತದೆ ಅದರಲ್ಲಿ Select Year, Select Month ಅಂತ ಇರುತ್ತದೆ. ನೀವು ಯಾವ ತಿಂಗಳ DBT Status ಬಯಸುತ್ತಿರಿ ಆ ತಿಂಗಳನ್ನು ಆಯ್ಕೆ ಮಾಡಿ. ನಂತರ Enter RC Number/RC No. ಎಂದಿರುತ್ತದೆ ಅಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. GO ಬಟನ್‌ ಮೇಲೆ ಕ್ಲಿಕ್‌ ಮಾಡಿ.
Annabhagya DBT Status Check Online
Anna Bhagya Amount Status
  • Step-5: ಅಂತಿಮವಾಗಿ ನಿಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಅಲ್ಲಿ ಕಾಣುತ್ತದೆ, ಅವರ ಆಧಾರ ಸಂಖ್ಯೆಯ ಕೊನೆಯ 4 ಸಂಖ್ಯೆ, ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ, ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಮೊತ್ತದ ವಿವರ ಅಲ್ಲಿ ಇರುತ್ತದೆ. ನೀವು Annabhagya DBT Status Check ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಬರಲಿದೆ ನೋಡಬಹುದು.
Annabhagya DBT Status Check Online 2023 @ahara.kar.nic.in
September Month Annabhagya DBT Status Check
  • Step-6: ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಮುಖ್ಯಸ್ಥರ ಆಧಾರ ಕಾರ್ಡ್‌ ಲಿಂಕ್‌ ಇರುವ ಅವರ ಬ್ಯಾಂಕ್‌ ಖಾತೆಗೆ ಸರ್ಕಾರ ಹಣ ವರ್ಗಾವಣೆ ಮಾಡಿರುವ ಮಾಹಿತಿ ಈ ಕೇಳಗಿನಂತೆ ಲಭ್ಯವಾಗುತ್ತದೆ.
September 2023 Annabhagya DBT Status Check Online

ಪ್ರಮುಖ ಲಿಂಕ್‌ಗಳು:
Anna Bhagya Payment Status Link:‌
Check Online
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/, ahara.kar.nic.in/status2/status_of_dbt.aspx

ಕೊನೆಯ ಮಾತು: ಅನ್ನಭಾಗ್ಯ ಯೋಜನೆಯ Anna Bhagya DBT Status ಅನ್ನು ನೀವು ಪರಿಶೀಲಿಸಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ Subscribe ಆಗಿರಿ. ಧನ್ಯವಾದಗಳು.

ಇತರೆ ಮಾಹಿತಿಗಳನ್ನು ಓದಿ

ಸ್ವಂತ ವಾಹನ ಖರೀದಿಸಲು 3 ಲಕ್ಷ ಸಬ್ಸಿಡಿ

ಅನ್ನಭಾಗ್ಯ ಯೋಜನೆ: ಸೆಪ್ಟೆಂಬರ್ ತಿಂಗಳ DBT Status Check ಮಾಡಿ

ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ 2023

ಗೃಹಲಕ್ಷ್ಮಿ: 2ನೇ ಕಂತಿನ 2,000 ರೂ. ಹಣ ಬಿಡುಗಡೆ ಯಾವಾಗ?

ಗೃಹಲಕ್ಷ್ಮಿ ಯೋಜನೆಯ DBT Status Check ಮಾಡಿ

Education Loan: ವಿದ್ಯಾರ್ಥಿಗಳಿಗೆ 3 ಲಕ್ಷದವರೆಗೆ ಶೈಕ್ಷಣಿಕ ಸಾಲ ಯೋಜನೆ

ವಾಹನ ಖರೀದಿಸಲು 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಸಲ್ಲಿಸಿ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ

ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಮುಹೂರ್ತ ಫಿಕ್ಸ್, ಹೊಸ ದಿನಾಂಕ ನಿಗದಿ

ರೇಷನ್ ಕಾರ್ಡ್ Status ಅನ್ನು ಮೊಬೈಲ್‌ನಲ್ಲೇ ಚೆಕ್‌ ಮಾಡಿ

ಗೃಹ ಲಕ್ಷ್ಮಿ ಯೋಜನೆ ಅರ್ಜಿ Status check ಮಾಡಿ

Telegram Group Join Now
WhatsApp Group Join Now

Leave a Comment