Education Loan: ವಿದ್ಯಾರ್ಥಿಗಳಿಗೆ 3 ಲಕ್ಷದವರೆಗೆ ಶೈಕ್ಷಣಿಕ ಸಾಲ ಯೋಜನೆ | Arivu Education Loan Scheme Apply Online @kmdconline.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಅರಿವು ಶೈಕ್ಷಣಿಕ ಸಾಲ ಪಡೆಯಬೇಕೆ? ನಿಮ್ಮ ಅಥವಾ ನಿಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ 3 ಲಕ್ಷದವರೆಗೆ ಸರ್ಕಾರದ ವತಿಯಿಂದ ಸಾಲ ನೀಡಲಾಗುತ್ತದೆ. Arivu Education Loan Scheme 2023 ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಓದಿ ವಿವರ ಪಡೆದು ಅರ್ಜಿ ಸಲ್ಲಿಸಿ.

ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯ ಅಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ಬಿ ಆಯುಷ್/ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬ್ಯಾಚುಲರ್ ಆಫ್ ಇಂಜಿನಿಯರಿಂಗ್/ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಗಮದ ವತಿಯಿಂದ ಸಾಲವನ್ನು ನೀಡಲಾಗುತ್ತದೆ.

Arivu Education Loan Scheme 2023 ಸಂಕ್ಷಿಪ್ತ ಮಾಹಿತಿ

ಯೋಜನೆಯ ಹೆಸರು: ಅರಿವು ವಿದ್ಯಾಭ್ಯಾಸ ಸಾಲ ಯೋಜನೆ
ಮೊತ್ತ: ಪ್ರತಿ ವರ್ಷಕ್ಕೆ 50,000 ರೂ. ದಿಂದ 3,00,000 ರೂ. ವರೆಗೆ ಸಾಲ
ನಿಗಮದ ಹೆಸರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ

ಅರಿವು ಯೋಜನೆಯಡಿಯಲ್ಲಿ ವೃತ್ತಿಪರ ಶಿಕ್ಷಣ ಅಂದರೆ MBBS, MD, MS, B.E, B.Tech, M.E, M.Tech, BDS, MDS, B.Ayush, M.Ayush, MBA, MCA, LLB, B.Arch, M.Arch, B.Sc in Horticulture, Agriculture, Dairy Technology, Forestry, Veterinary, Animal sciences, Food Technology, Bio Technology, Fisheries, Sericulture, Home/community Sciences, Food Nutrition and Dietetics, B.Pharma, M.Pharma, Pharma.D,and D.Pharma ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ 50,000 ರೂ. ದಿಂದ 3,00,000 ರೂ. ವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ.

ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ಅಂತಹ ವಿದ್ಯಾರ್ಥಿಯು ಶೇ2ರ ಸೇವಾ ಶುಲ್ಕದೊಂದಿಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.8 ಲಕ್ಷಗಳು ಮೀರಿರಬಾರದು.

Arivu Education Loan Scheme 2023 ಅರ್ಹತೆಗಳು

 1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 3,00,000/- ವನ್ನು ನೀಡಲಾಗುತ್ತದೆ.
 2. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬಿ. ಡಿ. ಎಸ್, ಎಂ.ಡಿ.ಎಸ್ ಕೋರ್ಸುಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 1,00,000 ವರೆಗೆ ಮತ್ತು ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 50,000 ಗಳನ್ನು ಬಿಡುಗಡೆ ಮಾಡುವುದು.
 3. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬ್ಯಾಚುಲಾರ್ ಆಫ್ ಆರ್ಕಿಟೆಕ್ಟ/ಇಂಜಿನಿಯರಿಂಗ್/ಟೆಕ್ನಾಲಜಿ (ಬಿ.ಇ./ಬಿ.ಟೆಕ್), ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್ ವ್ಯಾಸಾಂಗ ಮಾಡುತ್ತಿರುವ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 50,000 ಗಳನ್ನು ಬಿಡುಗಡೆ ಮಾಡುವುದು.
 1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ ಬಿ ಎ, ಎಂ ಸಿ ಎ, ಎಲ್ ಎಲ್ ಬಿ ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಠ ರೂ.50,000/-ಗಳನ್ನು ಸಾಲವಾಗಿ ನೀಡಲಾಗುವುದು.
 2. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Sc. in Horticulture, Agriculture, Dairy Technology, Forestry, Veterinary, Animal science, Food Technology, Bio Technology, Fisheries, Sericulture, Home/community Sciences, Food Nutrition and Dietetics, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
 3. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Pharma, M.Pharma, Pharma.D,and D.Pharma, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
 4. ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 8,00,000/- ಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿಯು ಪಡೆದ ಸಾಲವನ್ನು ಕೋರ್ಸ್ ಮುಗಿದ 1 ವರ್ಷದ ನಂತರ 48 ತಿಂಗಳ ಅವಧಿಯಲ್ಲಿ 2% ಬಡ್ಡಿದರದೊಂದಿಗೆ ಮರುಪಾವತಿ ಮಾಡಬೇಕು.

Arivu Education Loan Scheme 2023 ಬೇಕಾಗುವ ದಾಖಲೆಗಳು:

 • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
 • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
 • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
 • CET ಪ್ರವೇಶ ಪತ್ರ
 • NEET ಪ್ರವೇಶ ಪತ್ರ
 • SSLC/10 ನೇ ತರಗತಿಯ ಅಂಕಪಟ್ಟಿ
 • ಡಿಪ್ಲೋಮ/ಪಿ.ಯು.ಸಿ ಅಂಕಪಟ್ಟಿ
 • ಇಂಡೆಮ್ನಿಟೀ (ನಷ್ಟ ಪರಿಹಾರ) ಬಾಂಡ್
 • ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
 • ಪೋಷಕರ ಸ್ವಯಂ ಘೋಷಣೆ ಪತ್ರ

Student Loan Scheme ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.

Arivu Education Loan Scheme Online Application Link:
ಆನ್‌ಲೈನ್‌ ಅರ್ಜಿ ಲಿಂಕ್‌: ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ kmdc.karnataka.gov.in, kmdconline.karnataka.gov.in

Arivu Education Loan Yojana ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:

ಇತರೆ ಮಾಹಿತಿಗಳನ್ನು ಓದಿ

ಶೇ.50% ಸಬ್ಸಿಡಿ: ವೃತ್ತಿ ಪ್ರೋತ್ಸಾಹ ಯೋಜನೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿ

ಸಣ್ಣ ವ್ಯಾಪಾರ ಆರಂಭಿಸಲು 50,000 ರೂ. ಸಾಲ ಮತ್ತು ಸಹಾಯಧನ

ವಾಹನ ಖರೀದಿಸಲು 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now

Leave a Comment