ಸಬ್ಸಿಡಿ: ವೃತ್ತಿ ಪ್ರೋತ್ಸಾಹ ಯೋಜನೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿ | 50% Subsidy: Vrutti Protsaha Loan Scheme Apply Online @kmdconline.karnataka.gov.in

Telegram Group Join Now
WhatsApp Group Join Now

ನಮಸ್ಕಾರ, ಹೊಸ ವೃತ್ತಿ ಆರಂಭಿಸಲು ಅಥವಾ ಅಭಿವೃದ್ಧಿಪಡಿಸಲು ನೀವು ಸರ್ಕಾರದಿಂದ ಸಹಾಯಧನ ಪಡೆಯಬೇಕಾ? ಹಾಗಾದರೆ ಈ ಲೇಖನವನ್ನು ಓದಿ ಸರ್ಕಾರದಿಂದ ಸಿಗುವ (Vrutti Protsaha Loan Scheme and Subsidy) ಸಬ್ಸಿಡಿ ಮಾಹಿತಿಯನ್ನು ಪಡೆಯಿರಿ.

2023-24 ನೇ ಸಾಲಿನಲ್ಲಿ ವೃತ್ತಿ ಪ್ರೋತ್ಸಾಹ ಯೋಜನೆಯೊಂದಿಗೆ ಒಟ್ಟು 1,00,000/- ಸಾಲದೊಂದಿಗೆ ಬದಲಾಯಿಸಿದೆ. ಇದರಲ್ಲಿ 50% ಸಾಲ ಮತ್ತು 50% ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡಲಾಗುತ್ತದೆ.

Vrutti Protsaha Loan Scheme 2023 ಸಂಕ್ಷಿಪ್ತ ವಿವರ

ಯೋಜನೆಯ ಹೆಸರು: ವೃತ್ತಿ ಪ್ರೋತ್ಸಾಹ ಸಾಲ ಯೋಜನೆ
ಸಹಾಯಧನ ಮೊತ್ತ: ಶೇ.50% ಸಹಾಯಧನದೊಂದಿಗೆ 1 ಲಕ್ಷ ರೂ. ಸಾಲ
ಅರ್ಜಿದಾರರ ವಯಸ್ಸು: 18 ರಿಂದ 55 ವರ್ಷ
ನಿಗಮದ ಹೆಸರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ

ವೃತ್ತಿ ಪ್ರೋತ್ಸಾಹ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ಹಣ್ಣು, ಹಂಪಲು, ಕೋಳಿ ಮತ್ತು ಮೀನು ಮಾರಾಟ, ಎಳನೀರು, ಕಬ್ಬಿನ ಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲ್ಯಾಂಡರಿ, ಡ್ರೈ ಕ್ಲೀನಿಂಗ್, ಹೇರ್ ಡೈಸಿಂಗ್ ಸಲೂನ್, ಬ್ಯೂಟಿ ಪಾರ್ಲರ್, ವಾಟರ್ ವಾಶ್, ಪಂಕ್ಚರ್, ಮೆಕ್ಯಾನಿಕ್ ಶಾಪ್, ದ್ವಿಚಕ್ರ, ತ್ರಿಚಕ್ರ ವಾಹನ ರಿಫೇರಿ, ಬಿದರಿವೇರ್ ಕೆಲಸ, ರೇಷ್ಮೆ ರೀಲಿಂಗ್ ಮತ್ತು ಟ್ವಿಸ್ಟಿಂಗ್, ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಪಡಿಸಲು ನಿಗಮದಿಂದ ಶೇ.50% ಸಹಾಯಧನದೊಂದಿಗೆ 1 ಲಕ್ಷ ರೂ. ಸಾಲವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾಗುವುದು.

Vrutti Protsaha Loan Scheme 2023 ಅರ್ಹತೆ:

 1. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
 2. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
 3. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
 4. ಎಲ್ಲಾ ಮೂಲಗಳಿಂದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ನಗರ ಪ್ರದೇಶದಲ್ಲಿ ರೂ.1,03,000/- ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.81,000/- ಗಿಂತ ಕಡಿಮೆಯಿರಬೇಕು.
 5. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು.
 6. ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

Vrutti Protsaha Loan Scheme 2023 ದಾಖಲೆಗಳು:

 • ಯೋಜನಾ ವರದಿ
 • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
 • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
 • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
 • ಬ್ಯಾಂಕ್ ಪಾಸ್ ಬುಕ್ ಪ್ರತಿ
 • ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ
 • ಸ್ವಯಂ ಘೋಷಣೆ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.

Vrutti Protsaha Loan Scheme 2023 Online Application Link:
ಆನ್‌ಲೈನ್‌ ಅರ್ಜಿ ಲಿಂಕ್‌:
ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ kmdc.karnataka.gov.in, kmdconline.karnataka.gov.in

Arivu Education Loan Yojana ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 03-10-2023

ಇತರೆ ಮಾಹಿತಿಗಳನ್ನು ಓದಿ

ಸಣ್ಣ ವ್ಯಾಪಾರ ಆರಂಭಿಸಲು 50,000 ರೂ. ಸಾಲ ಮತ್ತು ಸಹಾಯಧನ

ವಾಹನ ಖರೀದಿಸಲು 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಸಲ್ಲಿಸಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

Education Loan: ವಿದ್ಯಾರ್ಥಿಗಳಿಗೆ 3 ಲಕ್ಷದವರೆಗೆ ಶೈಕ್ಷಣಿಕ ಸಾಲ ಯೋಜನೆ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ

Telegram Group Join Now
WhatsApp Group Join Now

Leave a Comment