ಎಲ್ಲರಿಗೂ ನಮಸ್ಕಾರ, ಜುಲೈ 1 ರಿಂದ ಇ-ಖಾತಾ (E Khata) ಕಡ್ಡಯವಾಗಿದ್ದು, BBMP ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಕರಡು ಇ-ಖಾತಾಗಳಿದ್ದು. ಸದ್ಯ 5 ಲಕ್ಷದಷ್ಟು ಇ-ಖಾತಾವನ್ನು ಆಸ್ತಿ ಮಾಲೀಕರಿಗೆ ವಿತರಣೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಇ- ಖಾತಾ ಕಡ್ಡಾಯಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಯಾವುದೇ ಆಸ್ತಿಯನ್ನು ತೆಗೆದುಕೊಳ್ಳುವವರು ಇ-ಖಾತೆಯನ್ನು ಕಡ್ಡಾಯವಾಗಿ ಮಾಡಿಸಬೇಕಿದೆ. ಮಾರಾಟವಾಗುವ ಪ್ರತಿಯೊಂದು ಆಸ್ತಿಗೂ ನೋಂದಾವಣಿ ಸಂದರ್ಭದಲ್ಲಿ ಇ-ಖಾತೆ (E-Khata) ಮಾಡಿಸಬೇಕಿದ್ದು, ಪ್ರತಿಯೊಂದು ಇ-ಖಾತೆಗೂ ಒಂದು ನಿರ್ದಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಆ ಸಂಖ್ಯೆಯನ್ನು ಈಗ ನೋಂದಾವಣಿಯಾಗುತ್ತಿರುವ ಕಾವೇರಿ – 2 ಸಾಫ್ಟ್ ವೇರ್ ಅಡಿಯಲ್ಲೇ ನೀಡಲಾಗುತ್ತದೆ.
E Khata ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು:
- ಮಾಲಕರ ಆಧಾರ್ ಕಾರ್ಡ್
- ಆಸ್ತಿ ತೆರಿಗೆ ಎಸ್.ಎ.ಎಸ್ ಸಂಖ್ಯೆ
- ಮಾರಾಟ ಅಥವಾ ನೋಂದಾಯಿತ ಪತ್ರ
- ಸ್ವತ್ತಿನ ಛಾಯಾಚಿತ್ರ
ಕಟ್ಟಡ ಮಾಲೀಕರು ಈ ಮೇಲಿನ ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ https://bbmp.karnataka.gov.in/newkhata/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿಬೇಕು. ಅಂತಿಮ ಇ-ಖಾತಾವನ್ನು ಕೆಲವೇ ದಿನಗಳಲ್ಲಿ ಪಡೆದುಕೊಳ್ಳಿ. ಅಥವಾ 080-4920 3888 ಸಹಾಯವಾಣಿಯ ಮೂಲಕ ಮನೆಯಲ್ಲೇ ಕುಳಿತು ಜನಸೇವಕರಿಂದ ಅರ್ಜಿ ಸಲ್ಲಿಸಿಕೊಳ್ಳಬಹುದು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಜುಲೈ 1 ರಿಂದ ಇ-ಖಾತಾ ಕಡ್ಡಾಯವಾಗಿರುತ್ತದೆ.
ಇತರೆ ಮಾಹಿತಿಗಳು:

