ಎಲ್ಲರಿಗೂ ನಮಸ್ಕಾರ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಬೇಕೆ..? Crop Insurance 2025 ಅರ್ಜಿ ಸಲ್ಲಿಸಲು ಯಾವೇಲ್ಲಾ ದಾಖಲೆಗಳು ಬೇಕಾಗುತ್ತವೆ ಎಂದು ತಿಳಿದಿಲ್ಲವೆ..? ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಯಾವಾಗ..? ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿರಿ.
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಸೇರಿದಂತೆ ಮುಂತಾದ ಪ್ರಕೃತಿ ವಿಕೋಪಗಳಿಂದ ರೈತರು ಬೆಳೆದಿರುವ ಬೆಳೆಗಳು ಸರಿಯಾದ ಸಮಹಕ್ಕೆ ಬರದೆ ರೈತರು ನಷ್ಟ ಅನುಭವಿಸುವಂತಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬೆಳೆ ವಿಮೆಯ ಮೊತ್ತವು ರೈತರಿಗೆ ಸಹಾಯವಾಗುತ್ತದೆ. ಆಸಕ್ತ ರೈತರು ಫಸಲ್ ಬೀಮಾ ಯೋಜನೆಯಡಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಸಬಹುದು.
2025-26 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆಯ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅತಿವೃಷ್ಟಿ, ಅನಾವೃಷ್ಟಿ, ಅಂತಹ ಸಂದರ್ಭದಲ್ಲಿ ಆಗುವ ಬೆಳೆ ನಷ್ಟದ ಸಮಹದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ
ಬೆಳೆವಾರು ಪ್ರೀಮಿಯಂ ಮೊತ್ತ ಹಾಗೂ ಕೊನೆಯ ದಿನಾಂಕಗಳು ಈ ನೀಡಲಾಗಿದೆ.
- ಸೂರ್ಯಕಾಂತಿ- 16 ಆಗಸ್ಟ್ 2025
- ಮುಸುಕಿನ ಜೋಳ- 31 ಜುಲೈ 2025
- ಭತ್ತ – 31 ಜುಲೈ 2025
- ಜೋಳ – 31 ಜುಲೈ 2025
- ನೆಲಗಡಲೆ – 31 ಜುಲೈ 2025
- ನವಣೆ – 31 ಜುಲೈ 2025
- ಸಜ್ಜೆ – 31 ಜುಲೈ 2025
- ತೊಗರಿ – 31 ಜುಲೈ 2025
- ರಾಗಿ – 31 ಜುಲೈ 2025
- ಈರುಳ್ಳಿ – 15 ಜುಲೈ 2025
- ಹತ್ತಿ – 15 ಜುಲೈ 2025
- ಟೊಮೆಟೊ – 30 ಜೂನ್ 2025
- ಎಳ್ಳು – 30 ಜೂನ್ 2025
Crop Insurance 2025 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಜಮೀನಿನ ಪಹಣಿ/ ಉತಾರ್/RTC
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ರೈತರು ನೋಂದಣಿಗಾಗಿ ಕಡ್ಡಾಯವಾಗಿ FRUITS ID (FID) ಹೊಂದಿರಬೇಕು.
Kharif Crop Insurance 2025 ಅರ್ಜಿ ಸಲ್ಲಿಸುವುದು ಹೇಗೆ..?
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಇತರೆ ಮಾಹಿತಿಗಳು:

