ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಆಯವ್ಯಯದಡಿ ಅನುಷ್ಠಾನಗೊಳ್ಳುವ ಕಲ್ಯಾಣ ಕಾರ್ಯಕ್ರಮಗಳಿಗೆ (Free Sewing Machine Scheme) ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರು, SC / ST, ಆರ್ಥಿಕವಾಗಿ ಹಿಂದುಳಿದವರು, ಅಲ್ಪಸಂಖ್ಯಾತರು, ವಿಶೇಷ ಚೇತನರು, ತೃತೀಯ ಲಿಂಗಿಗಳು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಿ ಈ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಳ್ಳಬಹುದು.
Free Sewing Machine Scheme 2025 ಮತ್ತು ಕಲ್ಯಾಣ ಕಾರ್ಯಕ್ರಮಗಳು:
- ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ.
- ಒಂಟಿ ಮನೆ ನಿರ್ಮಾಣ ಮತ್ತು ಅಮೃತ ಮಹೋತ್ಸವ ಯೋಜನೆಯಡಿ ಫ್ಲಾಟ್ ಖರೀದಿಗೆ ಧನ ಸಹಾಯ.
- ಶಾಲಾ ಶುಲ್ಕ ಮರುಪಾವತಿ, ಉನ್ನತ / ವಿದೇಶ ವ್ಯಾಸಂಗಕ್ಕೆ ಸಹಾಯಧನ.
- ಪೌರ ಕಾರ್ಮಿಕರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿತರಣೆ (ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಪ್ರಥಮ ಆದ್ಯತೆ).
- ಗಂಭೀರ ಕಾಯಿಲೆ, ಹಿರಿಯ ನಾಗರಿಕರ ಆರೋಗ್ಯ ತಪಾಸಣೆ, ಅಂಗ ವೈಫಲ್ಯ ಶಸ್ತ್ರ ಚಿಕಿತ್ಸೆಗೆ ಧನಸಹಾಯ.
- ವಿಶೇಷ ಚೇತನರಿಗೆ ಹೆಚ್ಚುವರಿ ಚಕ್ರ ಅಳವಡಿಸಿದ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮತ್ತು ವೀಲ್‌ಚೇರ್ ವಿತರಣೆ.
- ಬೀದಿ ಬದಿ ವ್ಯಾಪಾರಸ್ಥರಿಗೆ ಎಲೆಕ್ಟ್ರಿಕ್ ವೆಂಡಿಂಗ್ ಮೆಷಿನ್ ವಿತರಣೆ.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗಗಳ ಪೌರಕಾರ್ಮಿಕ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ.
- ಸಂಗೀತ ಸಾಧನ ಖರೀದಿ, ಕ್ರೀಡಾಪಟುಗಳಿಗೆ ಸಹಾಯಧನ, ಸ್ವಯಂ ಉದ್ಯೋಗ, ವಿಶೇಷ ಚೇತನರಿಗೆ ಔಷಧಿ ಅಂಗಡಿ ಪ್ರಾರಂಭ, ಆಟೋ / ಕಾರು ಖರೀದಿಗೆ ಸಹಾಯ.
- ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ
- ಸಾಂಸ್ಕೃತಿಕ ಹಾಗೂ ವಿಶೇಷಚೇತನ ವಿದ್ಯಾ ಸಂಸ್ಥೆಗಳಗೆ ಆರ್ಥಿಕ ನೆರವು.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ಸಂಬಂಧಿತ ವಲಯ ಸಹಾಯಕ ಕಂದಾಯ ಅಧಿಕಾರಿ(ಕಲ್ಯಾಣ) ಕಛೇರಿಯಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸುವುದು.
ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಸಾರ್ವಜನಿಕರು ಕಲ್ಯಾಣ ಕಾರ್ಯಕ್ರಮದ ಫಲಾನುಭವಿಗಳಾಗಬೇಕೆಂಬ ಉದ್ದೇಶದಿಂದ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ರವರ ನಿರ್ದೇಶನದಂತೆ ಅರ್ಜಿ ಸಲ್ಲಿಕೆಯ ಕೊನೆಯ 02-05-2025 ರ ವರೆಗೆ ವಿಸ್ತರಿಸಲಾಗಿದೆ.
ಇತರೆ ಮಾಹಿತಿ ಓದಿ:

