ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣ ಯಾವಾಗ (Gruhalakshmi Amount) ನಮ್ಮ ಖಾತೆಗೆ ಜಮಾ ಆಗಲಿದೆ ಎಂದು ಫಲಾನುಭವಿಗಳಿಗೆ ಕಾತುರದಿಂದ ಕಾಯುತ್ತಿದ್ದರು, ಈ ಯೋಜನೆಯ ಹಣವು ಯಾವಾಗ ಸಂದಾಯವಾಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
ಹೌದು ಗೃಹಲಕ್ಷ್ಮೀ ಯೋಜನೆಯು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿದ್ದು. ಈ ಯೋಜನೆಯ ಮೂಲಕ ಸರ್ಕಾರದಿಂದ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ಅನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಗೃಹಲಕ್ಷ್ಮೀ ಯೋಜನೆಯಿಂದ ಬಂದಿರು ಹಣದಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ.
Gruhalakshmi Amount 2025:
ಗೃಹಲಕ್ಷ್ಮೀ ಯೋಜನೆಯ ಹಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನನಗೆ ಕಾರು ಅಪಘಾತವಾದ್ದರಿಂದ ಮೂರು ತಿಂಗಳು ಗೃಹಲಕ್ಷ್ಮೀ ಯೋಜನೆಯು ಹಣವು ತಡವಾಗಿದೆ. ನಾವು ಕಚೇರಿಯಲ್ಲಿದಿದ್ದರೆ ಹಣಕಾಸು ಇಲಾಖೆ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತೇವೆ. ಗೃಹಲಕ್ಷ್ಮೀ ಹಣ ಕೊಡಲಿಲ್ಲವೆಂದರೆ ಮಹಿಳೆಯರಿಗೆ ತೊಂದರೆ ಯಾಗುತ್ತದೆ ಎಂದು ಪದೆ ಪದೆ ಜ್ಞಾಪಿಸುತ್ತಿರುತ್ತೇವೆ ಹಾಗೆಯೇ ಮುಖ್ಯ ಮಂತ್ರಿಗಳ ಗಮನಕ್ಕೂ ತರುತ್ತೇವೆ ಎಂದುರು.
ಕಾರು ಅಪಘಾತವಾದ್ದರಿಂದ ನಲವತ್ತು ದಿನ ಆಸ್ಪತ್ರೆ ಮತ್ತು ಮನೆಯಲ್ಲೇ ಉಳಿಯುವಂತಾಗಿದ್ದರಿಂದ ಹಣ ವರ್ಗಾವಣೆ ವಿಳಂಬವಾಗಿರುವುದಕ್ಕೆ ಒಂದು ಕಾರಣವಾಗಿದೆ. ಇನ್ನೇನು ಒಂದು ವಾರ ಇಲ್ಲ ಹತ್ತು ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣವು ಬಿಡುಗಡೆಯಾಗುತ್ತದೆ ಎಂದು ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
ಎರಡು ತಿಂಗಳ ಹಣವನ್ನು ಹಣಕಾಸು ಇಲಾಖೆಯು ಬಿಡುಗಡೆ ಮಾಡಿದ್ದಾರೆ ಎಂದು ನಮ್ಮ ಸೆಕ್ರೆಟರಿಯವರು ಹೇಳಿದರು, ನಾನು ಬಜೆಟ್ ಅಧಿವೇಶನಕ್ಕೆ ಹೊಗುತ್ತಿದ್ದೇನೆ ನಾನಂತು ಬಿಡುವುದಿಲ್ಲ ಎಲ್ಲಾ ಗೃಹಲಕ್ಷ್ಮೀಯರಿಗೆ ಮೂರು ತಿಂಗಳ ಹಣವನ್ನು ಹಾಕಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸರ್ಕಾರ ಇತರೆ ಯೋಜನೆಗಳು:
Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರೀಯೆ ಆರಂಭ