Gruhalakshmi Scheme 2025: ಗೃಹಲಕ್ಷ್ಮಿ ಹಣ ನಿಮಗೆ ಬಂದಿಲ್ಲವೇ..? ಹೀಗೆ ಮಾಡಿ ನೋಡಿ

ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme 2025) ಒಂದಾಗಿದೆ. ಇದನ್ನು ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ತಿಂಗಳಿಗೆ ಎರಡು ಸಾವಿರ ರೂಪಾಯಿಯನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಕೆಲವು ಮಹಿಳೆಯರಿಗೆ ಈ ಯೋಜನೆಯ ಲಾಭ ದೊರೆಯುತ್ತಿಲ್ಲ. ಯಾರಿಗೆ ಗೃಹಲಕ್ಷ್ಮೀ ಹಣ ಸಂದಾಯವಾಗುತ್ತಿಲ್ಲ ಅಂತವರು ಕೂಡಲೇ E-KYC ಸಂಬಂಧಿಸಿದ ತೊಂದರೆಗಳೇನಾದರು ಇದ್ದರೆ ಪರಿಹರಿಸಿಕೊಳ್ಳಬೇಕು.

Gruhalakshmi Scheme 2025 Amount Not Received..?

NPCI Failure/ E-KYC Failure ಆಗಿದ್ದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗದ ಸಂದರ್ಭದಲ್ಲಿ ನಿಮ್ಮ ಹತ್ತಿರದ ಸಿಡಿಪಿಓ ಕಚೇರಿ ಭೇಟಿ ನೀಡಿ ಗೃಹಲಕ್ಷ್ಮೀ ಯೋಜನೆಯ Status ಪರಿಶೀಲನೆ ಮಾಡಿಸಿಕೊಳ್ಳಿ, NPCI Failure/ E-KYC Failure ಎಂದು ಬಂದರೆ ಕೂಡಲೇ ಅಗತ್ಯ ದಾಖಲೆಗಳಾದ ರೇಷನ್‍ಕಾರ್ಡ್, ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಪಾಸ್‍ ಬುಕ್ ಇದ್ದಲ್ಲಿ ತೆಗೆದುಕೊಂಡು ಹೋಗಿ ಸರಿಪಡಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಈ ಮೇಲಿನ ತಿಳಿಸಿರುವಂತೆ E-KYC ಸಂಬಂಧಿಸಿದ ತೊಂದರೆಗಳನ್ನು ಸರಿಪಡಿಸಿಕೊಂಡ ನಂತರ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣವು ವರ್ಗಾವಣೆ ಆಗುತ್ತದೆ. ಇಲ್ಲವಾದರೆ ನಿಮಗೆ ಈ ಯೋಜನೆಯ ಹಣವು ಸಂದಾಯವಾಗುವುದಿಲ್ಲ. ಆದಷ್ಟು ಬೇಗ ಈ ಮೇಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೆ ಹೋದರೆ ನಿಮಗೆ ಹಣ ಬರುವುದಿಲ್ಲ.

ಗೃಹಲಕ್ಷ್ಮೀ ಯೋಜನೆಯ 4,000 ರೂ. ಹಣ ಒಟ್ಟಿಗೆ ಜಮಾ

ಉಚಿತ ಹೊಲಿಗೆ ಯಂತ್ರ ಯೋಜನೆ 2025: ಅರ್ಜಿ ಆಹ್ವಾನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment