ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್, ಕರ್ನಾಟಕ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯ 2,000 ರೂ. (Gruhalakshmi Scheme DBT Status) ಹಣ ಬಿಡುಗಡೆ. ನಿಮ್ಮ ಬ್ಯಾಂಕ್ ಖಾತೆಗೂ ದುಡ್ಡು ಜಮಾ ಆಗಿದೆಯಾ ಚೆಕ್ ಮಾಡಿಕೊಳ್ಳಿ.
ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ಹಣವನ್ನು ಅವರ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುತ್ತಿದೆ.
ಏರಡೂ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣವು ಮಹಿಳೆಯರ ಖಾತೆಗೆ ವರ್ಗಾವಣೆ ಆಗಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದರು, ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣ ವರ್ಗಾವಣೆ ಮಾಡುವುದಾಗಿ ಮಾಹಿತಿ ನೀಡಿದ್ದರು. ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು.
Gruhalakshmi Scheme DBT Status Check:
ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಬಾಕಿ ಹಣದಲ್ಲಿ ಒಂದು ತಿಂಗಳ ಹಣವು ಗೃಹಲಕ್ಷ್ಮೀಯರ ಖಾತೆಗೆ ಇಂದು (26-02-2025) ರಂದು ವರ್ಗಾವಣೆಯಾಗಿದೆ. ನಿಮ್ಮ ಖಾತೆಗೂ ಹಣ ಸಂದಾಯವಾಗಿದೆಯಾ ಎಂದು DBT Status ಚೆಕ್ ಮಾಡಿಕೊಳ್ಳಬಹುದು.

ಅಂತು ಇಂತು ಗೃಹಲಕ್ಷ್ಮೀ ಯೋಜನೆಯ ಹಣವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು, ಬಾಕಿ ಉಳಿದಿರುವ ಕಂತುಗಳ ಬಾಕಿ ಹಣವು ಶೀಘ್ರದಲ್ಲೇ ಯಜಮಾನಿಯರ ಖಾತೆಗೆ ಜಮಾ ಆಗುವ ಸಾಧ್ಯತೆಗಳಿವೆ.
ಇತರೆ ಮಾಹಿತಿ ಓದಿ: