IND vs PAK ಹೈವೋಲ್ಟೇಜ್ ಪಂದ್ಯದ Playing 11 | IND vs PAK Playing 11 Today Match

Telegram Group Join Now
WhatsApp Group Join Now

IND vs PAK Playing 11: ಐಸಿಸಿ ಏಕದಿನ ವಿಶ್ವಕಪ್ 2023 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗನನೆ ಆರಂಭವಾಗಿದ್ದು, ಈ ಪಂದ್ಯದಲ್ಲಿ Playing 11 ಏನು ಇರಲಿದೆ ಎಂಬುದು ಕ್ರೀಕೆಟ್‌ ಪ್ರೇಮಿಗಳ ಕುತೂಹಲ ಹೆಚ್ಚಾಗುತ್ತಿದೆ.

ಗುಜರಾತಿನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐತಿಹಾಸಿಕ India vs Pakistan ಆಟದಲ್ಲಿ ದೊಡ್ಡ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಈ ಪಂದ್ಯದಲ್ಲಿ ಶುಭ್​ಮನ್ ಗಿಲ್ ವಿಶ್ವಕಪ್‌ಗೆ ಪಾದಾರ್ಪನೆ ಮಾಡುವುದು ಖಚಿತವಾಗಿದೆ.

ಅಕ್ಟೋಬರ್ 14 ರ ಮಧ್ಯಾಹ್ನ 2 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು. ಉಭಯ ತಂಡಗಳು ಈಗಾಗಲೇ ನಡೆದ ತಮ್ಮ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿವೆ. ಹಾಗಾಗಿ ಎಂದಿನಂತೆ ಈ ಪಂದ್ಯವು ಬಹಳಷ್ಟು ರೋಚಕತೆ ನೀಡಲಿದೆ.

ಡೆಂಗ್ಯೂ ಸೋಂಕಿನಿಂದಾಗಿ ಶುಭಮನ್ ಗಿಲ್ ಮೊದಲೆರಡೂ ವಿಶ್ವಕಪ್ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಈ ಪಂದ್ಯಕ್ಕೆ ಶುಭಮನ್ ಗಿಲ್ ಅಥವಾ ಇಶಾನ್ ಕಿಶನ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಕ್ಯಾಪ್ಟನ್‌ ರೋಹಿತ್‌ ಶರ್ಮಾ ಮುಂದೆ ಸವಾಲ್‌ ಎದುರಾಗಿದೆ.

ಪಾಕಿಸ್ತಾನ ತಂಡದ ವಿರುದ್ದ ಆರಂಭಿಕ ಆಟಗಾರ ಶುಭಮನ್ ಗಿಲ್‌ನ ಫಾರ್ಮ್‌ ಚನ್ನಾಗಿದೆ. ವಿಶ್ವಕಪ್ ನಲ್ಲಿ ಸತತ ಗೆಲವು ಕಂಡಿರುವ ಭಾರತಕ್ಕೆ ಈ ಪಂದ್ಯವನ್ನು ತಮ್ಮದಾಗಿಸಿಕೊಳ್ಳುವ ತವಕವಿದೆ.

Shubman Gill News

ಸಿರಾಜ್ ಜಾಗಕ್ಕೆ ಶಮಿ?
ಟೀಮ್ ಇಂಡಿಯಾದ ಮೊದಲ ಎರಡು ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ʼನ ಆಟ ಅಷ್ಟೋಂದು ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಇಂದು ಸಿರಾಜ್ ಬದಲಿಗೆ ಶಮಿಯನ್ನು IND vs PAK Playing 11 ನಲ್ಲಿ ಆಡಿಸಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಪರಿಗಣಿಸಬಹುದು. ಆದರೆ, ಪ್ರಸ್ತುತ ಸಿರಾಜ್ ಭಾರತ ತಂಡದ ಪ್ರಮುಖ ಬೌಲರ್ ಆಗಿರುವ ಕಾರಣ ಈ ಸಾಧ್ಯತೆ ಕಡಿಮೆ.

ಅಶ್ವಿನ್ ಅಥವಾ ಶಾರ್ದೂಲ್?
ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಆರ್ ಅಶ್ವಿನ್ ಗೆ ಅವಕಾಶ ನೀಡಿತ್ತು. ಅವರೂ ಉತ್ತಮ ಪ್ರದರ್ಶನ ನೀಡಿದರು. ಇದಾದ ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ವೇಗದ ಬೌಲಿಂಗ್ ಟ್ರ್ಯಾಕ್ ನಲ್ಲಿ ಅಶ್ವಿನ್ ಬದಲಿಗೆ ಶಾರ್ದೂಲ್ ಗೆ ತಂಡ ಅವಕಾಶ ನೀಡಿತ್ತು. ಇಲ್ಲಿ ಶಾರ್ದೂಲ್ ಕೂಡ ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಇಬ್ಬರಲ್ಲಿ ಒಬ್ಬರನ್ನು ತಂಡದ ನಿರ್ವಹಣೆಗೆ ಆಯ್ಕೆ ಮಾಡುವುದು ಸವಾಲಿನ ಸಂಗತಿಯಾಗಿದೆ. ಆದರೆ, ಇಂದಿನ ಪಂದ್ಯದಲ್ಲೂ ವೇಗದ ಬೌಲರ್ ಗಳಿಗಿಂತ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗಲಿದೆ ಎಂದು ಊಹಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಶ್ವಿನ್ ಗೆ ಪ್ಲೇಯಿಂಗ್-11ರಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

IND vs PAK Playing 11 ಹೀಗಿರಲಿದೆ..!

ಟೀಮ್ ಇಂಡಿಯಾ ಸಂಭಾವ್ಯ Playing 11: ರೋಹಿತ್ ಶರ್ಮಾ, ಶುಭಮನ್ ಗಿಲ್/ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ಆರ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಪಾಕಿಸ್ತಾನದ ಪ್ಲೇಯಿಂಗ್-11 ಹೇಗಿರುತ್ತದೆ?
ಪಾಕಿಸ್ತಾನದ ಪ್ಲೇಯಿಂಗ್-11 ರಲ್ಲಿ ಸ್ವಲ್ಪ ಬದಲಾವಣೆಯ ಭರವಸೆ ಇದೆ. ಕೊನೆಯ ಪಂದ್ಯದ IND vs PAK Playing 11 ರೊಂದಿಗೆ ಆಡುವ ಸಾಧ್ಯತೆ ಇದೆ.

ಪಾಕಿಸ್ತಾನದ ಸಂಭಾವ್ಯ Playing 11: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್.

ಸರ್ಕಾರ ಇತರೆ ಯೋಜನೆಗಳು

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment