ಕೆಎಎಸ್‌ ಫಲಿತಾಂಶ ಪ್ರಕಟ | KAS Provisional Selection List

Join Telegram

ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 106 (ಆರ್.ಪಿ.ಸಿ-94 & ಹೈ.ಕ-12) ಹುದಗಳ ತಾತ್ಕಾಲಿಕ ಆಯ್ಕೆಪಟ್ಟಿ (KAS Provisional Selection List) ಯನ್ನು ಸೋಮವಾರ ದಿ. ಸೆ. 5 ರಂದು ಪ್ರಕಟಿಸಿದೆ.

2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 106 ಹುದಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗಿತ್ತು. ಆಯ್ಕೆಪಟ್ಟಿ ಮತ್ತು ಕಟ್‌ ಆಫ್‌ ಅಂಕಗಳನ್ನು ಆಯೋಗದ ಅಧಿಕೃತ ವೆಬ್‌ ಸೈಟ್‌ ನಿಂದ www.kpsc.kar.nic.in ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಸದರಿ ಆಯ್ಕೆಪಟ್ಟಿಗೆ ಏನಾದರೂ ಆಕ್ಷೇಪಣೆಗಳಿದ್ದಲಿ, ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದ 07 ದಿವಸಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01 ಇವರಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿಲಾಗಿದೆ.

Leave a Comment