ಬಿಎಸ್ಸಿ ನರ್ಸಿಂಗ್ ಪ್ರವೇಶಾತಿಗೆ ಅರ್ಜಿ ಆಹ್ವಾನ | KEA BSc Nursing Online Application 2022

2022 ನೇ ಸಾಲಿನ ಮೊದಲನೇ ವರ್ಷದ ಬಿ.ಎಸ್.ಸಿ, ನರ್ಸಿಂಗ್, ಬಿ.ಪಿ.ಟಿ., ಬಿ.ಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಬಿಪಿಓ ಕೋರ್ಸುಗಳ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ (KEA BSc Nursing Online Application 2022) ಆಹ್ವಾನಿಸಲಾಗಿದೆ. 

ಈ ಮೇಲ್ಕಂಡ ಕೋರ್ಸುಗಳ ಪ್ರವೇಶಾತಿಗೆ ಆಸಕ್ತಿ ಇರುವ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಚುರ ಪಡಿಸಿರುವ ಮಾಹಿತಿ ಪುಸ್ತಕದಲ್ಲಿ ನೀಡಿರುವ ಶೈಕ್ಷಣಿಕ ಅರ್ಹತೆ ಮತ್ತು ಇತರೆ ಮಾನದಂಡಗಳನ್ನು ಖಚಿತ ಪಡಿಸಿಕೊಂಡು ನಂತರ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ kea.kar.nic.in ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು 10-09-2022 ರಿಂದ 15-09-2022 ರ ರಾತ್ರಿ 11.59 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ 16-09-2022 ರೊಳಗಾಗಿ ಶುಲ್ಕವನ್ನು ಪಾವತಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ kea.kar.nic.in ಅನ್ನು ನೋಡಬಹುದಾಗಿದೆ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ರೂ. 800/-
SC, ST, ಪ್ರವರ್ಗ–I ಮತ್ತು PWD ಅಭ್ಯರ್ಥಿಗಳಿಗೆ ರೂ.400/-

KEA BSc Nursing Online Application 2022 ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 10-09-2022

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15-09-2022

KEA BSc Nursing Online Application 2022
ಪ್ರಮುಖ ದಿನಾಂಕಗಳು

ಪ್ರಮುಖ ಲಿಂಕ್‌ಗಳು

ಪತ್ರಿಕಾ ಪ್ರಕಟಣೆ: ಡೌನಲೊಡ್

ಬ್ರೌಚರ್‌ PDF: ಡೌನಲೊಡ್

ವೆಬ್‌ ಸೈಟ್‌ ಲಿಂಕ್:‌ kea.kar.nic.in

Leave a Comment