ರೈತರಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ ಹೊಸ ಆದೇಶ | MSP Increased For 14 Kharif Crops By Union Govt

ಎಲ್ಲರಿಗೂ ನಮಸ್ಕಾರ, ರೈತರು ಬೆಳೆದ ಬೆಳೆಗಳಿಗೆ ಕೆಲವೊಂದು ಸಂದರ್ಭಗಳಲ್ಲಿ ಸರಿಯಾದ ಲಾಭ ದೊರೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ಸರ್ಕಾರವು ನೀಡುವ ಬೆಂಬಲ ಬೆಲೆಯು (MSP Increased) ರೈತರಿಗೆ ಅನುಕೂಲವಾಗುತ್ತದೆ.

ಕೇಂದ್ರ ಸಚಿವ ಸಂಪುಟವು ಖಾರಿಫ್ ಬಿತ್ತನೆ ಅವಧಿಗೆ ಮೊದಲು 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಏರಿಕೆ ಮಾಡಿದೆ. ವೆಚ್ಚದ ಕನಿಷ್ಠ ಶೇ. 50ರಷ್ಟು ಎಂಎಸ್‌ಪಿ ಏರಿಕೆಗೆ ಸಂಪುಟ ಅನುಮೋದನೆ ನೀಡಿದೆ.

MSP Increased For 14 Crops:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಭತ್ತ, ರಾಗಿ, ಸಜ್ಜೆ, ಜೋಳ, ಮೆಕ್ಕೆಜೋಳ ಮತ್ತು ಹತ್ತಿ ಸೇರಿದಂತೆ 14 ಖಾರಿಫ್ ಋತುವಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇಂದಿನ ಸಚಿವ ಸಂಪುಟದಲ್ಲಿ ರೈತರ ಹಿತದೃಷ್ಟಿಯಿಂದ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಖಾರಿಫ್ ಹಂಗಾಮು ಆರಂಭವಾಗುತ್ತಿದ್ದು, ಅದಕ್ಕಾಗಿ 14 ಬೆಳೆಗಳಿಗೆ ಎಂಎಸ್‌ಪಿಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ.

2024-25ರ ಖಾರಿಫ್ ಬೆಳೆ ಋತುವಿನಲ್ಲಿ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 117 ರೂಪಾಯಿ ಏರಿಕೆ ಮಾಡಲಾಗಿದ್ದು, 2,300 ರೂ.ಗೆ ಹೆಚ್ಚಿಸಲಾಗಿದೆ.

ಇತರೆ ಮಾಹಿತಿಗಳನ್ನು ಓದಿ:

PM Awas Yojana: 3 ಕೋಟಿ ಮನೆಗಳ ನಿರ್ಮಾಣ, ಮೋದಿ ಸರ್ಕಾರ ತೀರ್ಮಾನ

ಗೃಹಲಕ್ಷ್ಮಿ DBT Status Check ಮಾಡಿ

PM ಕಿಸಾನ್‌ ಯೋಜನೆಯ 2,000 ರೂ. ಹಣ ಜಮಾ, Status ಚೆಕ್‌ ಮಾಡಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment