ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಪ್ರಕ್ರೀಯೆ ಆರಂಭ | Ration Card Correction Online Karnataka 2024 @ahara.kar.nic.in

ಎಲ್ಲರಿಗೂ ನಮಸ್ಕಾರ. ನೀವು ಕೂಡ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಸಬೇಕಾ..? ಕುಟುಂಬದ ಸದಸ್ಯರನ್ನು ಸೇರ್ಪಡೆ ಅಥವಾ Remove ಮಾಡಿಸಬೇಕಾ? ಹಾಗಿದ್ದೆರೆ ಈ ಲೇಖನ ನಿಮಗಾಗಿ.

ಕರ್ನಾಟಕ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅದಕ್ಕಾಗಿ ರೇಷನ್ ಕಾರ್ಡ್ ಅವಶ್ಯ. ಅನೇಕ ಜನರು ಪಡಿತರ ಚೀಟಿ ತಿದ್ದುಪಡಿಗಾಗಿ ಕಾಯುತ್ತಿದ್ದಾರೆ. ಪಡಿತರ ಚೀಟಿ ತಿದ್ದುಪಡಿ, ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು ಮತ್ತು ಇತರೆ ಪ್ರಕ್ರಿಯೆ ಆರಂಭವಾಗಿದೆ.

Ration Card Correction Online Karnataka

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಇಂದು (21-05-2024) ಕಾಲಾವಕಾಶ ‌ನೀಡಲಾಗಿದೆ. ತಿದ್ದುಪಡಿ ಮಾಡಬಯಸುವವರರು ಈ ಸದುಪಯೋಗವನ್ನು ಪಡೆದುಕೊಳ್ಳಬಹುದು.

Karnataka Ration Card Correction Date and Time:

Server-1: ಬೆಂಗಳೂರು (ನಗರ/ಗ್ರಾಮೀಣ) ಜಿಲ್ಲೆಯವರಿಗೆ 21-05-2024 ರಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

Server-2: ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯವರಿಗೆ 21-05-2024 ರಂದು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ತಿದ್ದುಪಡಿಗಾಗಿ ಕಾಲಾವಕಾಶ ನೀಡಲಾಗಿದೆ.

Server-4: ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಯವರು 21-05-2024 ರಂದು ಮಧ್ಯಾಹ್ನ 4 ರಿಂದ 6 ಗಂಟೆಯವರೆಗೆ ಹಳೆಯ ರೇಷನ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಲು ಅವಕಾಶ ಇದೆ.

ತಿದ್ದುಪಡಿ ಮಾಡುವುದು ಹೇಗೆ?
ನಿಮ್ಮ ಹತ್ತಿರದ ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌, CSC ಕೇಂದ್ರ ಅಥವಾ ಸರ್ಕಾರ ಅನುಮೊದಿಸಿರುವ ಆನ್‌ಲೈನ್‌ ಕೇಂದ್ರಗಳಿಗೆ ಭೇಟಿ ನೀಡಿ ಪಡಿತರ ಚೀಟಿ ತಿದ್ದುಪಡಿ ಮಾಡಿಸಬಹುದು.

ರೇಷನ್ ಕಾರ್ಡ್ ತಿದ್ದುಪಡಿ

  • ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ
  • ರೇಷನ್ ಕಾರ್ಡ್’ನಲ್ಲಿನ ಹೆಸರು ತಿದ್ದುಪಡಿ
  • ರೇಷನ್ ಕಾರ್ಡ್’ನಲ್ಲಿನ ಕುಟುಂಬ ಯಜಮಾನಿ ಬದಲಾವಣೆ
  • ರೇಷನ್ ಕಾರ್ಡ್‌ದಿಂದ ಹೆಸರನ್ನು ತೆಗೆಯಲು
  • ರೇಷನ್ ಕಾರ್ಡ್ ಇ-ಕೆವೈಸಿ ಮತ್ತು ಇತರೆ ಸೇವೆಗಳು

Ration Card Amendment Date In Karnataka
ದಿನಾಂಕ: 21/05/2024

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಗೃಹಲಕ್ಷ್ಮೀ ಯೋಜನೆ ಈ ಕಂತಿನ 2,000 ರೂ. ಜಮಾ ಆಗಿದೆ

HSRP ನಂಬರ್ ಪ್ಲೇಟ್ ಅಳವಡಿಸಿ, ಇಲ್ಲವೇ ದಂಡ ಗ್ಯಾರಂಟಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment