Ration Card Food Kit: ರೇಷನ್ ಕಾರ್ಡ್ ಫಲಾನುಭವಿಗಳಿಗೆ ಗುಡ್ ನ್ಯೂಸ್; ಪ್ರತಿ ತಿಂಗಳು ‘ಆಹಾರ ಕಿಟ್‌’ ವಿತರಣೆ

ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಗುಡ್ ನ್ಯೂಸ್, ಪಡಿತರ ಚೀಟಿ‌ಹೊಂದಿರುವ ಫಲಾನುಭವಿಗಳಿಗೆ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ‘ಇಂದಿರಾ ಆಹಾರ ಕಿಟ್‌’ಗಳನ್ನು (Ration Card Food Kit) ಪ್ರತಿ ತಿಂಗಳು ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ ನೀಡುತ್ತಿದ್ದ 5Kg ಅಕ್ಕಿಯ ಬದಲಿಗೆ ಪರ್ಯಾಯವಾಗಿ ಇಂದಿರಾ ಆಹಾರ ಕಿಟ್‌ ಅನ್ನು ನೀಡುವ ಕುರಿತು ಪ್ರಸ್ತಾವವನ್ನು ಆಹಾರ ಇಲಾಖೆ ಸಿದ್ಧಪಡಿಸಿದೆ. ನಂದಿಬೆಟ್ಟದಲ್ಲಿ ಜುಲೈ 2 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಪಡಿತರ ಚೀಟಿ ಹೊಂದಿರುವ ಕೆಲವು ಕುಟುಂಬಗಳು ಪಡೆಯುತ್ತಿರುವ ಅಕ್ಕಿಯ ಪ್ರಮಾಣವು ಅವರ ತಿಂಗಳ ಬಳಕೆಯ ಅಗತ್ಯಕ್ಕಿಂತ ಹೆಚ್ಚಾಗಿದ್ದು, ಅಕ್ಕಿಯ ದುರುಪಯೋಗ ಆಗದಂತೆ ತಪ್ಪಿಸಲು ಹೆಚ್ಚವರಿ ಅಕ್ಕಿಯ ಬದಲು ಪೌಷ್ಟಿಕಾಂಶ ಒಳಗೊಂಡ ಕಿಟ್‌ (Ration Card Food Kit) ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹೆಚ್ಚುವರಿಯಾಗಿ ನೀಡುತ್ತಿರುವ 5kg ಅಕ್ಕಿಯ ಬದಲಾಗಿ ಸಕ್ಕರೆ, ಉಪ್ಪು, ತೊಗರಿಬೇಳೆ, ಚಹಾ ಪುಡಿ, ಕಾಫಿ ಪೌಡರ್, ಅಡುಗೆ ಎಣ್ಣೆ, ಗೋಧಿ ಹಿಟ್ಟು ಒಳಗೊಂಡ ಆಹಾರ ಕಿಟ್ ವಿತರಣೆಗೆ ಆಹಾರ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಮಾತ್ರ ವಿತರಣೆ ಮಾಡುವ ಸಾಧ್ಯತೆ ಇದೆ.

ಶೀಘ್ರದಲ್ಲೆ ಮೇ ತಿಂಗಳ ಹಣ ಬಿಡುಗಡೆ: ಸಚಿವೆ ಹೆಬ್ಬಾಳ್ಕರ್

ಉಚಿತ ಹೊಲಿಗೆ ಯಂತ್ರ ಯೋಜನೆ 2025: ಅರ್ಜಿ ಆಹ್ವಾನ

Gruhalakshmi Scheme 2025: ಗೃಹಲಕ್ಷ್ಮಿ ಹಣ ನಿಮಗೆ ಬಂದಿಲ್ಲವೇ..?

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment