ಎಲ್ಲರಿಗೂ ನಮಸ್ಕಾರ, 2024-25 ನೇ ಸಾಲಿನ ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ ಹಾಗೂ ಸ್ವಾವಲಂಭಿ ಸಾರಥಿ-ಫುಡ್ ಕಾರ್ಟ್ ಯೋಜನೆಗಳಿಗೆ (Swayam Udyoga Sala Yojane) ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತರು ಈ ಯೋಜನೆಗೆ ಅರ್ಜಿ ಸಲ್ಲಿಸಿದ ಇದರ ಲಾಭವನ್ನು ಪಡೆದುಕೊಳ್ಳಬಹುದು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ, ಹಾಗೂ ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ್ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಹರಿಂದ ಅರ್ಜಿಯನ್ನು ಕರೆಯಲಾಗಿದೆ.
ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ:
ಸ್ವಯಂ ಉದ್ಯೋಗ ನೇರಸಾಲ ಯೋಜನೆಯ (Swayam Udyoga Sala Yojane) ಅಡಿಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುರಿ ಸಾಕಾಣಿಕೆ ಉದ್ದೇಶಕ್ಕಾಗಿ ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುವುದು.
ಘಟಕ ವೆಚ್ಚ 1 ಲಕ್ಷ ರೂಪಾಯಿ.
ಸಹಾಯಧನ 50,000 ರೂ,
ಸಾಲ 50,000 ರೂ.
Swavalambi Sarathi Scheme – ಫುಡ್ ಕಾರ್ಟ್ ಯೋಜನೆ:
ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಫುಡ್‍ಕಾರ್ಟ್ ಉದ್ದೇಶಕ್ಕಾಗಿ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾತ್ರ ಬ್ಯಾಂಕ್‍ಗಳ ಸಹಯೋಗದೊಂದಿಗೆ ಈ ಯೋಜನೆ ಅನುಷ್ಟಾನ. ಸಾಲದ ಮೊತ್ತಕ್ಕೆ ಶೇಕಡಾ. 75 ರಷ್ಟು ಅಥವಾ ಗರಿಷ್ಟ 4 ಲಕ್ಷ ರೂ. ಗಳ ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ ಆಗಿರುತ್ತದೆ.
ಆಸಕ್ತ ಪರಿಶಿಷ್ಟ ಜಾತಿಗೆ ಸೇರಿದ ಈ ಹಿಂದೆ ನಿಗಮದಿಂದ ಯಾವುದೇ ಸಾಲ ಸೌಲಭ್ಯ ಪಡೆಯದ 18 ರಿಂದ 50 ವರ್ಷ ವಯೋಮಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. 2023-24 ನೇ ಸಾಲಿನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಶ್ಯಕತೆ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಡಿಸೆಂಬರ್, 29 ಕೊನೆಯ ದಿನವಾಗಿದೆ. ಈ ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ವೆಬ್‍ಸೈಟ್ adcl.karnataka.gov.in ಅಥವಾ ಕಲ್ಯಾಣ ಮಿತ್ರ ಏಕೀಕೃತ ಎಸ್‍ಸಿ, ಎಸ್‍ಟಿ ಸಹಾಯವಾಣಿ 9482300400 ನ್ನು ಸಂಪರ್ಕಿಸಬಹುದು.
Swayam Udyoga Sala Yojane 2024 ಅರ್ಜಿ ಸಲ್ಲಿಸುವ ವಿಧಾನ:
Swayam Udyoga Sala & Swavalambi Sarathi Scheme Application Link:
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sevasindhu.karnataka.gov.in, adcl.karnataka.gov.in
ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರದ ಗ್ರಾಮ ಓನ್, ಕರ್ನಾಟಕ, ಓನ್, ಬೆಂಗಳೂರು ಸೇವಾ ಕೇಂದ್ರ ಹಾಗೂ https://Sevasindhu.karnataka.gov.in ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.
ಇತರೆ ಮಾಹಿತಿಗಳನ್ನು ಓದಿ:
