ಎಲ್ಲರಿಗೂ ನಮಸ್ಕಾರ, ರುಡ್ಸೆಟ್ ಸಂಸ್ಥೆಯು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ ಉದ್ಯೋಗ ಆರಂಭಿಸಲು ಕುರಿ, ಕೋಳಿ ಮತ್ತು ಹಸು ಸಾಕಾಣಿಕೆ ತರಬೇತಿಯನ್ನು (Training) ನೀಡುತ್ತಿದ್ದಾರೆ. ಆಸಕ್ತ ಯುವಕ ಯುವತಿಯರು ನೇರವಾಗಿ ತರಬೇತಿಗೆ ಹಾಜರಾಗಲು ತಿಳಿಸಲಾಗಿದೆ.
ವಯೋಮಿತಿ ವಿವರ:
ಕುರಿ, ಕೋಳಿ ಮತ್ತು ಹಸು ಸಾಕಾಣಿಕೆ ತರಬೇತಿಯನ್ನು ಪಡೆಯಬಯಸುವ ಅಭ್ಯರ್ಥಿಗಳು ಕನಿಷ್ಠ 19 ವರ್ಷ ಹಾಗೂ ಗರಿಷ್ಠ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ತರಬೇತಿಯ ಅವಧಿ:
ಇದೇ ತಿಂಗಳು ಜೂನ್ 20 ರಿಂದ ತರಬೇತಿ ಪ್ರಾರಂಭವಾಗಲಿದ್ದು, 13 ದಿನಗಳ ಕಾಲ ತರಬೇತಿ ನೀಡುತ್ತಾರೆ. ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.
ಅರ್ಹತೆಗಳು:
- ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.
- ತರಬೇತಿಗೆ ಸಂಬಂಧಿಸಿದಂತೆ ಪ್ರಾಥಮಿಕ ಜ್ಞಾನ ಹೊಂದಿರಬೇಕು.
- ಉದ್ಯೋಗವನ್ನು ಮಾಡಬೇಕು ಎಂಬ ಆಸಕ್ತಿ ಹೊಂದಿರಬೇಕು.
- ಈ ತರಬೇತಿಗೆ ಸಂಬಂಧಪಟ್ಟ ಕೌಶಲ್ಯ ಮತ್ತು ತರಬೇತಿ ಪ್ರಾಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್ ನಂಬರ್ ಇರುವ ವಿಳಾಸದ ಅರ್ಜಿಯೊಂದಿಗೆ 4 ಪಾಸ್ಪೋರ್ಟ್ ಅಳತೆಯ ಫೋಟೋಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಎರಡು ಪ್ರತಿಗಳೊಂದಿಗೆ ರುಡ್ಸೆಟ್ ಸಂಸ್ಥೆಗೆ ನೇರವಾಗಿ ಬಂದು ತರಬೇತಿಗೆ ಹಾಜರಾಗಲು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8618282445, 9481778047, 9019299901, 8660627785 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ರುಡ್ಸೆಟ್ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಇತರೆ ಮಾಹಿತಿಗಳು:

