ಉಚಿತ ಉದ್ಯಮಶೀಲತಾ ತರಬೇತಿ ಅರ್ಜಿ ಆಹ್ವಾನ | Udyama Sheelata Training Application 2024 Apply Online @sw.kar.nic.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸರ್ಕಾರದಿಂದ ನೀಡಲಾಗುವ ಉದ್ಯಮಶೀಲತಾ ತರಬೇತಿ (Udyama Sheelata Training) ಯನ್ನು ನೀವು ಪಡೆಯಬೇಕೇ? ಹಾಗಿದ್ದರೆ ಇಲ್ಲದೆ ನಿಮಗೆ ಸಿಹಿ ಸುದ್ದಿ. ಅರ್ಹ ಅಭ್ಯರ್ಥಿಗಳಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯಮಶೀಲತಾ ತರಬೇತಿಗೆ ಯಾರೇಲ್ಲಾ ಅರ್ಜಿ ಸಲ್ಲಿಸಬಹುದು, ಯಾವ ದಾಖಲೆಗಳು ಬೇಕಾಗುತ್ತವೆ ಹಾಗೂ ಯಾವ ಅರ್ಹತೆ ಹೊಂದಿರಬೇಕು ಎಂಬ ಮಾಹಿತಿಯನ್ನು ಲೇಖನದಲ್ಲಿ ನೀಡಿದ್ದೇವೆ. ತರಬೇತಿ ಪಡೆಯಲು ಇಚ್ಛೆಯಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Udyama Sheelata Training 2024:

ಯೋಜನೆಯ ಹೆಸರು: ಉದ್ಯಮಶೀಲತಾ ತರಬೇತಿ
ವಯೋಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷ
ತರಬೇತಿ ಸ್ಥಳ: ಪ್ರತಿಷ್ಠಿತ ಐ.ಐ.ಎಂ ಬೆಂಗಳೂರು

ಸಾಮಾನ್ಯ ಅರ್ಹತೆಗಳು:

 • ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು.
 • ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
 • ಉದ್ಯಮಗಳನ್ನು ಸ್ಥಾಪಿಸುವ ಉದ್ದೇಶವಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.
 • ಅಭ್ಯರ್ಥಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
 • 5 ರಿಂದ 6 ತಿಂಗಳು ತರಬೇತಿ ನೀಡಲಾಗುತ್ತದೆ.
 • 8 ದಿನದ ತರಬೇತಿಯು ಐ.ಐ.ಎಂ-ಬೆಂಗಳೂರು ಸಂಸ್ಥೆ ಕ್ಯಾಂಪಸ್‌ ನಲ್ಲಿ ಇರುತ್ತದೆ ಹಾಗೂ MOOC ಮುಖಾಂತರ ನೀಡಲಾಗುವುದು.
 • ಐ.ಐ.ಎಂ ಬೆಂಗಳೂರು ಇವರು ನಡೆಸುವ ಸ್ಕ್ರೀನಿಂಗ್ ಟೆಸ್ಟ್ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
 • ಶೇಕಡಾ 100 ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ.
 • ವಿದ್ಯಾರ್ಹತೆ: ಪದವೀಧರರಾಗಿರಬೇಕು.
 • ತರಬೇತಿಯನ್ನು ಆಂಗ್ಲ ಭಾಷೆಯಲ್ಲಿ ನೀಡಲಾಗುತ್ತದೆ
 • 8 ದಿನದ ತರಬೇತಿಯು ಐ.ಐಎಂ-ಬೆಂಗಳೂರು ರವರ ಕ್ಯಾಂಪಸ್‍ನಲ್ಲಿ ನೀಡಲಾಗುವುದು. ತರಬೇತಿ ಸಮಯದಲ್ಲಿ ಊಟ ಮತ್ತು ವಸತಿ ಸೌಲಭ್ಯವನ್ನು ಐ.ಐಎಂ-ಬೆಂಗಳೂರುರವರ ವತಿಯಿಂದ ಒದಗಿಸಲಾಗುತ್ತದೆ.
 • ತರಬೇತಿಯಲ್ಲಿ ಶೇ.100 ರಷ್ಟು ಹಾಜರಾತಿ ಹಾಗೂ ಯಶಸ್ವಿಯಾಗಿ ತರಬೇತಿ ಪೂರೈಸಿ ತರಬೇತಿ ಪ್ರಮಾಣ ಪತ್ರವನ್ನು ಪಡೆದ ಅಭ್ಯರ್ಥಿಗಳಿಗೆ ಮಾತ್ರ ರೂ.10,000/-ಗಳ ಶಿಷ್ಯವೇತನವನ್ನು ತರಬೇತಿ ಮುಕ್ತಾಯಗೊಂಡ ನಂತರ ನೀಡಲಾಗುವುದು .

ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಿಗೆ ಉದ್ಯಮಗಳನ್ನು ಆರಂಭಿಸಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆಯಿಂದ 50 ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಿಗೆ ಪ್ರತಿಷ್ಠಿತ ಐ.ಐ.ಎಂ ಬೆಂಗಳೂರು, ಇವರ ಮೂಲಕ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿಗಳನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಈ ತರಬೇತಿ ಪಡೆಯಲು ಆಸಕ್ತ ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಆನ್‌ಲೈನ್ ಅರ್ಜಿಗಳನ್ನು ದಿನಾಂಕ: 17.01.2024 ರಿಂದ ದಿನಾಂಕ: 31.01.2024 ರ ಸಂಜೆ 5 ಗಂಟೆಯ ವರಗೆ ಸಲ್ಲಿಸಬಹುದು.

ಆಯ್ಕೆಯ ವಿಧಾನ:

 • ಐ.ಐಎಂ-ಬೆಂಗಳೂರು ಸಂಸ್ಥೆಯ ವತಿಯಿಂದ ಎಲ್ಲಾ ಅರ್ಜಿದಾರರಿಗೆ ಅರ್ಹತಾ ಪರೀಕ್ಷೆಯನ್ನು ಐ.ಐ.ಎಂ-ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಸಲಾಗುವುದು.
 • ಅರ್ಹತಾ ಪರೀಕ್ಷೆಯ merit list ಆಧಾರದ ಮೇಲೆ 50 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು..
 • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ merit ಆಧಾರದ ಮೇಲೆ 1:5 ಅಭ್ಯರ್ಥಿಗಳಿಗೆ ಐ.ಐ.ಎಂ-ಬೆಂಗಳೂರು ರವರಿಂದ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುವುದು.

ಪ್ರಮುಖ ಲಿಂಕ್‌ಗಳು:
Udyama Sheelata Training Application Link: Apply Online
ಅಧಿಕೃತ ವೆಬ್‌ಸೈಟ್:‌ swdservices.karnataka.gov.in

ಇತರೆ ಮಾಹಿತಿಗಳನ್ನು ಓದಿ

ಗೃಹಲಕ್ಷ್ಮಿ ಯೋಜನೆ: ಈ ಕಂತಿನ 2,000 ರೂ. ಹಣ ಜಮಾ, ಚೆಕ್‌ ಮಾಡಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

Telegram Group Join Now
WhatsApp Group Join Now

Leave a Comment

error: Content is protected !!