ಗೃಹಲಕ್ಷ್ಮಿ ಯೋಜನೆ: 2,000 ರೂ. ಹಣ ಜಮಾ, ಚೆಕ್‌ ಮಾಡಿ | Gruhalakshmi 5th Installment Amount Credited, DBT Status Check

ಎಲ್ಲರಿಗೂ ನಮಸ್ಕಾರ.. ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ (Gruhalakshmi 5th Installment Amount) ಐದನೇ ಕಂತಿನ ಹಣ ವರ್ಗಾವಣೆ ಮಾಡಿರುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದೇವೆ. ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಓದಿ ನಿಮಗೆ ಹಣ ಬಂದಿದೇಯಾ ತಿಳಿಯಿರಿ.

ಕರ್ನಾಟಕ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದರಂತೆ ಎಲ್ಲ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳ ಸೌಲಭ್ಯಗಳನ್ನು ನೀಡಲಾಗುತ್ತಿದೆ.

Gruhalakshmi 5th Installment Amount Credited

ಸರ್ಕಾರದಿಂದ ಜಾರಿಗೆ ತರಲಾಗಿರುವ ಗೃಹ ಲಕ್ಷ್ಮಿ ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಅಭಿವೃದ್ದಿಯ ದೃಷ್ಠಿಯಿಂದ ತುಂಬ ಪ್ರಮುಖ ಪಾತ್ರ ವಹಿಸಿದೆ. ಬರ ಮತ್ತು ಬೆಲೆ ಏರಿಕೆಯಿಂದ ಬಳಲಿರುವ ಜನರಿಗೆ ಸರ್ಕಾರದ ಕಲ್ಯಾಣ ಯೋಜನೆಗಳು ಅನುಕೂಲ ಮಾಡಿವೆ.

ಆಗಸ್ಟ 30 ರಿಂದ ಗೃಹಲಕ್ಷ್ಮೀ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಈಗಾಗಲೇ ನಾಲ್ಕು ಕಂತುಗಳ 8,000 ರೂ. ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಮತ್ತು ಐದನೇ ಕಂತಿನ ಹಣವನ್ನು ವರ್ಗಾಯಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 5 ನೇ ಕಂತಿನ ಹಣವನ್ನು ಜಿಲ್ಲಾವಾರು ಜಮಾ ಮಾಡಲಾಗುತ್ತೀದೆ. ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ 2,000 ರೂ. ಯನ್ನು Gruhalakshmi DBT ಮೂಲಕ ವರ್ಗಾವಣೆ ಮಾಡಲಾಗಿದೆ.

Gruhalakshmi 5th Installment Amount Credited

ಅನೇಕ ಜನರಿಗೆ ಗೃಹ ಲಕ್ಷ್ಮಿ ಯೋಜನೆಯ 2,000 ರೂ. ತಾಂತ್ರಿಕ ಸಮಸ್ಯೆಯಿಂದ ದೊರೆತಿಲ್ಲ. ದಾಖಲೆಗಳಲ್ಲಿ ದೋಷ ಇರುವುದರಿಂದ ಹಣ ವರ್ಗಾವಣೆ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಅಂತಹ ಫಲಾನುಭವಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಥವಾ ಅಂಗನವಾಡಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

Gruhalakshmi DBT Status Check ಮಾಡುವ ಸುಲಭ ವಿಧಾನ

ಗೃಹಲಕ್ಷ್ಮೀ ಯೋಜನೆಯ 2000 ಹಣ ವರ್ಗಾವಣೆ ಆಗಿರುವ ಮಾಹಿತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ DBT Karnataka App ಮೂಲಕ ಈ ಕೇಳಗೆ ನೀಡಲಾಗಿರುವ ವಿಧಾನವನ್ನು ಅನುಸರಿಸಿ ನಿಮ್ಮ Gruha Lakshmi DBT Status Check ಮಾಡಬಹುದು.

Step-1: ಮೊದಲನೆಯದಾಗಿ ಕೇಳಗೆ ನೀಡಿರುವ ಲಿಂಕ್‌ ಮೂಲಕ DBT Karnataka ಅಧಿಕೃತ App ಡೌನ್‌ಲೋಡ್‌ ಮಾಡಿಕೊಳ್ಳಿ.

Step-2: App ಓಪನ್‌ ಮಾಡಿ. ಅಲ್ಲಿ Enter Aadhaar Number ಎಂಬಲ್ಲಿ ಫಲಾನುಭವಿಯ ಆಧಾರ ಸಂಖ್ಯೆಯನ್ನು ಎಂಟರ್‌ ಮಾಡಿ. GET OTP ಎಂಬುದರ ಮೇಲೆ ಕ್ಲಿಕ್‌ ಮಾಡಿ.

Step-3: ಫಲಾನುಭವಿಯ ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. Enter OTP ಎಂದಿರುವಲ್ಲಿ ಆರು ಸಂಖ್ಯೆಗಳ OTP ಎಂಟರ್‌ ಮಾಡಿ. Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-4: ಫಲಾನುಭವಿಯ ವಯಕ್ತಿಕ ವಿವರ ನಿಮ್ಮ ಮುಂದೆ ಕಾಣುತ್ತದೆ. ಅಲ್ಲಿ ಮೊಬೈಲ್ ನಂಬರ್‌ ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ. ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-5: ನಂತರ Create mPIN ಎಂದಿರುತ್ತದೆ. ನಿಮ್ಮ ನೆನಪಿನಲ್ಲಿ ಉಳಿಯುವ ನಾಲ್ಕು ಅಂಕಿಗಳ mPIN ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-6: ನಂತರ ಅಲ್ಲಿ Select Beneficiary ಎಂದು ಬರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.

Step-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ ನೀವು Create ಮಾಡಿದ mPIN ಅನ್ನು ಎಂಟರ್‌ ಮಾಡಿ. LOGIN ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-8: ಮೊದಲನೇ ಆಯ್ಕೆ Payment Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-9: ಅಲ್ಲಿ ನಿಮ್ಮ ಮುಂದೆ Gruhalakshmi DBT Status Check ಮಾಡುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

Step-10: ನಿಮ್ಮ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2000 ರೂ. ಜಮಾ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ‌, ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುತ್ತದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.

Gruhalakshmi DBT Status Check ಪ್ರಮುಖ ಲಿಂಕ್‌ಗಳು:
DBT Karnataka App Link:‌ Download ಮಾಡಿ

ಇತರೆ ಮಾಹಿತಿಗಳನ್ನು ಓದಿ

ಗೃಹಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಜಮಾ ಯಾವಾಗ..?

ಉಚಿತ ಉದ್ಯಮಶೀಲತಾ ತರಬೇತಿ ಅರ್ಜಿ ಆಹ್ವಾನ

ವಿದ್ಯಾರ್ಥಿಗಳಿಗೆ 20 ಸಾವಿರ ರೂ. ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

ವಿದ್ಯಾಸಿರಿ ವಿದ್ಯಾರ್ಥಿ ವೇತನ: ಆನ್‌ಲೈನ್‌ ಅರ್ಜಿ ಆಹ್ವಾನ

ಯುವ ನಿಧಿ: 3,000 ರೂ. ಹಣ ಜಮಾ ಯಾವಾಗ..? ಮಾಹಿತಿ ಇಲ್ಲಿದೆ

ಅನ್ನಭಾಗ್ಯ ಯೋಜನೆಯ DBT Status Check ಮಾಡಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment