SSLC ಪಾಸಾದ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿವೇತನ | Vidyadhan Scholarship 2025 Online Application

ಎಲ್ಲರಿಗೂ ನಮಸ್ಕಾರ, ನೀವು ಕೂಡ ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? ಯಾರು ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು..? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗಲಿದೆ..? ಹಾಗೂ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವಾಗ..? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

2025- 26 ನೇ ಸಾಲಿನಲ್ಲಿ ‌10 ನೇ ತರಗತಿ ಉತ್ತೀರ್ಣರಾಗಿ 11 ಮತ್ತು 12 ನೇ ತರಗತಿ ಅದ್ಯಯನ ಮಾಡಬಯಸುವ ವಿದ್ಯಾರ್ಥಿಗಳಿಗೆ ಸರೋಜಿನಿ ದಾಮೋದರನ್ ಫೌಂಡೇಶನ್‌ ವತಿಯಿಂದ ವಿದ್ಯಾಧನ್ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ನೀವು ಕೂಡ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾಧನ್ ಸ್ಕಾಲರ್ಶಿಪ್ ಗೆ ಆಯ್ಕೆಯಾದ ವಿದ್ಯಾರ್ಥಿಗಳು ವರ್ಷಕ್ಕೆ ಗರಿಷ್ಠ 10,000 ರೂ. ಶಿಷ್ಯವೇತನ ದೊರೆಯಲಿದೆ.

ಅರ್ಹತೆಗಳು:
ಅರ್ಜಿದಾರರು ಕರ್ನಾಟಕದಲ್ಲಿ ನೆಲೆಸಬೇಕು.
2025 ರಲ್ಲಿ ಕರ್ನಾಟಕದಿಂದ 10 ನೇ ತರಗತಿ/ SSLC ಪರೀಕ್ಷೆಯಲ್ಲಿ ಪಾಸಾಗಿರಬೇಕು.
10th ಅಥವಾ SSLC ಪರೀಕ್ಷೆಯಲ್ಲಿ 90% ಅಂಕಗಳನ್ನು ಗಳಿಸಿರಬೇಕು ಅಥವಾ 9 CGPA ಪಡೆದಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮೀರಿರಬಾರದು.

ಪ್ರಯೋಜನ:
ವಿದ್ಯಾಧನ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ 10,000 ರೂ. ಸ್ಕಾಲರ್ಶಿಪ್ ಸಿಗಲಿದೆ.

ಅಗತ್ಯ ದಾಖಲೆಗಳು:
ಅರ್ಜಿದಾರರ ಪೋಟೋ 
10th ಮಾರ್ಕ್ಸ್ ಕಾರ್ಡ್ ಸ್ಕ್ಯಾನ್ ಮಾಡಿದ ಪ್ರತಿ.
ಆದಾಯ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ (ರೇಷನ್ ಕಾರ್ಡ್ ಅನ್ನು ಸ್ವೀಕರಿಸಲಾಗುವುದಿಲ್ಲ)

Vidyadhan Scholarship 2025 ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-05-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08-07-2025

ಪ್ರಮುಖ ಲಿಂಕ್ ಗಳು:
ಅರ್ಜಿ ಸಲ್ಲಿಕೆ ಲಿಂಕ್:‌ ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್‌: www.vidyadhan.org/

How To Apply Vidyadhan Scholarship 2025: Watch Video

Pre Matric BCM Hostel Application 2025

Prize Money Scholarship 2025

ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment