FREE Coaching 2022: ಯು.ಪಿ.ಎಸ್.ಸಿ, ಕೆ.ಎ.ಎಸ್, ಬ್ಯಾಂಕಿಂಗ್, ಅರ್.ಅರ್.ಬಿ, ಎಸ್.ಎ.ಸ್ಸಿ, ಗ್ರೂಪ್ ಸಿ ಮತ್ತು ನ್ಯಾಯಾಂಗ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ನಡೆದ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಂಕಪಟ್ಟಿಯನ್ನು ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಅವಕಾಶ:
ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಪೂರ್ವಭಾವಿ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದುದಾಗಿದೆ.
2022-23 ನೇ ಸಾಲಿಗೆ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ, ಕೆ.ಎ.ಎಸ್,ಗ್ರೂಪ್-ಸಿ,ಬ್ಯಾಂಕಿಂಗ್, ಎಸ್.ಎಸ್.ಸಿ,ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಉಚಿತ ಪೂರ್ವಭಾವಿ ತರಬೇತಿಗೆ (FREE Coaching 2022) ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯು.ಪಿ.ಎಸ್.ಸಿ, ಕೆ.ಎ.ಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್.ಎಸ್.ಸಿ , ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.
FREE Coaching 2022 Karnataka ಕೋರ್ಸ್ಗಳ ವಿವರ:
ಯು.ಪಿ.ಎಸ್.ಸಿ, ಕೆ.ಎ.ಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್.ಎಸ್.ಸಿ , ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿ
FREE Coaching 2022 ತರಬೇತಿ ಅವಧಿ (ತಿಂಗಳು):
| ಕೋರ್ಸ್ | ತರಬೇತಿ ಅವಧಿ |
| ಯು.ಪಿ.ಎಸ್.ಸಿ | 09 ತಿಂಗಳು |
| ಕೆ.ಎ.ಎಸ್ | 07 ತಿಂಗಳು |
| ಗ್ರೂಪ್-ಸಿ | 3 ತಿಂಗಳು |
| ಬ್ಯಾಂಕಿಂಗ್ | 3 ತಿಂಗಳು |
| ಎಸ್.ಎಸ್.ಸಿ | 3 ತಿಂಗಳು |
| ಆರ್.ಆರ್.ಬಿ | 3 ತಿಂಗಳು |
ವಯೋಮಿತಿ:
18 ರಿಂದ 40 ವರ್ಷದ ಅಭ್ಯರ್ಥಿಗಳು ಉಚಿತ ಪೂರ್ವಭಾವಿ ತರಬೇತಿಗೆ ಅರ್ಜಿ ಸಲ್ಲಿಸಬಹುದು
FREE Coaching 2022 ವಿದ್ಯಾರ್ಹತೆ:
- ಯು.ಪಿ.ಎಸ್.ಸಿ: ಪದವಿಯಲ್ಲಿ ಶೇ.55 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
- ಕೆ.ಎ.ಎಸ್/ಗ್ರೂಪ್-ಸಿ/ಬ್ಯಾಂಕಿಂಗ್/ಆರ್.ಆರ್.ಬಿ/ಎಸ್.ಎಸ್.ಸಿ: ಪದವಿಯಲ್ಲಿ ಶೇ.50 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
- ನ್ಯಾಯಾಂಗ ಸೇವೆ: ಪದವಿಯಲ್ಲಿ ಶೇ.45 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಅಭ್ಯರ್ಥಿಯ ಸಾಮಾನ್ಯ ಅರ್ಹತೆ:
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
- ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ, ನಿಗಧಿತ ಪ್ರಾಧಿಕಾರದಿಂದ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪ್ರಮಾಣ ಪತ್ರ ಪಡೆದಿರಬೇಕು. ವಿದ್ಯಾರ್ಥಿನಿಲಯ / ಕೈಸ್ ವಿದ್ಯಾರ್ಥಿನಿಲಯ / ಸಫಾಯಿ ಕರ್ಮಚಾರಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.
ವಾರ್ಷಿಕ ಆದಾಯ:
ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.5 ಲಕ್ಷ ಮೀರಿರಬಾರದು.
ಆಯ್ಕೆ ವಿಧಾನ:
- ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆನ್ಲೈನ್ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳನ್ನು ತರಬೇತಿ ಸಂಸ್ಥೆಗೆ ನಿಯೋಜಿಸಲಾಗುತ್ತದೆ.
ಶಿಷ್ಯವೇತನ (ಮಾಸಿಕ):
- ಯು.ಪಿ.ಎಸ್.ಸಿ ತರಬೇತಿ:
- ದೆಹಲಿ – 10,000/-
- ಹೈದರಾಬಾದ್ – 8,000/-
- ಬೆಂಗಳೂರು – 6,000/-
- ಇತರೆ ಸ್ಥಳಗಳು – 5,000/-
- ಕೆ.ಎ.ಎಸ್ ತರಬೇತಿ – 4,000/-
- ಬ್ಯಾಂಕಿಂಗ್, ಗ್ರೂಪ್-ಸಿ, ಎಸ್.ಎಸ್.ಸಿ,ಆರ್.ಆರ್.ಬಿ, ನ್ಯಾಯಾಂಗ ಸೇವೆ ತರಬೇತಿ – 3,000/-
*ಸರ್ಕಾರದ ಆದೇಶದ ಪ್ರಕಾರ ಶಿಷ್ಯವೇತನವನ್ನು ಮೂರು ಮಾಹೆಗೆ ಒಂದು ಬಾರಿ ತರಬೇತಿ ಸಂಸ್ಥೆಯವರು ಸಲ್ಲಿಸುವ ಹಾಜರಾತಿಯನ್ವಯ ಪಾವತಿಸಲಾಗುವುದು. ಆದರೆ ತರಬೇತಿ ಅವಧಿಯಲ್ಲಿ ಯಾವುದೇ ವಸತಿ ಸೌಲಭ್ಯವನ್ನು ಇಲಾಖಾವತಿಯಿಂದ ನೀಡಲಾಗುವುದಿಲ್ಲ.
2ನೇ ಸುತ್ತಿನ ಮೆರಿಟ್ ಪಟ್ಟಿ
| OBC 2ನೇ ಸುತ್ತಿನ ಮೆರಿಟ್ ಪಟ್ಟಿ | Click ಮಾಡಿ |
2ನೇ ಹಂತದ ಪಟ್ಟಿ – Free Coaching 2nd List
ಪರಿಶಿಷ್ಟ ಜಾತಿಗಳ (SC), ಪರಿಶಿಷ್ಟ ಪಂಗಡಗಳ (ST), ಅಲ್ಪಸಂಖ್ಯಾತರ (Minority) ಕಲ್ಯಾಣ ಇಲಾಖೆಯವತಿಯಿಂದ Free Coaching ಗೆ ಅರ್ಹರಾದ ಅಭ್ಯರ್ಥಿಗಳ 2ನೇ ಹಂತದ ಸಂಸ್ಥೆ ಹಂಚಿಕೆ ಪಟ್ಟಿ (Institution Allotment 2nd List) ಪ್ರಕಟಗೊಂಡಿದೆ.
| ಪರಿಶಿಷ್ಟ ಜಾತಿಗಳ (SC) | Click ಮಾಡಿ |
| ಪರಿಶಿಷ್ಟ ಪಂಗಡಗಳ (ST) | Click ಮಾಡಿ |
| ಅಲ್ಪಸಂಖ್ಯಾತ | Click ಮಾಡಿ |
OBC Merit List – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇರಿಟ್ ಪಟ್ಟಿ
| UPSC Merit List | Click ಮಾಡಿ |
| KAS Merit List | Click ಮಾಡಿ |
| Group-C Merit List | Click ಮಾಡಿ |
| SSC Merit List | Click ಮಾಡಿ |
| BANKING Merit List | Click ಮಾಡಿ |
| RRB Merit List | Click ಮಾಡಿ |
ಸಮಾಜ ಕಲ್ಯಾಣ ಇಲಾಖೆಯ ಮೇರಿಟ್ ಪಟ್ಟಿ – FREE Coaching SC Merit List 2022
| UPSC Merit List | Click ಮಾಡಿ |
| KAS Merit List | Click ಮಾಡಿ |
| Group-C Merit List | Click ಮಾಡಿ |
| SSC Merit List | Click ಮಾಡಿ |
| BANKING Merit List | Click ಮಾಡಿ |
| RRB Merit List | Click ಮಾಡಿ |
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೇರಿಟ್ ಪಟ್ಟಿ – FREE Coaching ST Merit List 2022
| UPSC Merit List | Click ಮಾಡಿ |
| KAS Merit List | Click ಮಾಡಿ |
| Group-C Merit List | Click ಮಾಡಿ |
| SSC Merit List | Click ಮಾಡಿ |
| BANKING Merit List | Click ಮಾಡಿ |
| RRB Merit List | Click ಮಾಡಿ |
FREE Coaching 2022 Online Application ಪ್ರಮುಖ ಲಿಂಕ್ʼಗಳು
| ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಿ | Click ಮಾಡಿ |
| ಅಧಿಕೃತ ಜಾಹಿರಾತು | Click ಮಾಡಿ |
| ಅಧಿಕೃತ ವಿವರಣಾತ್ಮಕ ಅಧಿಸೂಚನೆ | Click ಮಾಡಿ |
| ಅರ್ಜಿ ಸಲ್ಲಿಕೆ ಲಿಂಕ್ | Apply ಮಾಡಿ |
| ಅಧಿಕೃತ ವೆಬ್ಸೈಟ್ | https://sw.kar.nic.in/ |
FREE Coaching 2022 ಪರೀಕ್ಷಾ ವಿಧಾನ:
| ವಿಷಯ | ಅಂಕಗಳು | ಅವಧಿ | ಮಾಧ್ಯಮ |
| UPSC/KAS/Group-C | 100 | 120 ನಿಮಿಷ | ಕನ್ನಡ/ಇಂಗ್ಲೀಷ್ |
| RRB/SSC/Banking | 100 | 120 ನಿಮಿಷ | ಕನ್ನಡ/ಇಂಗ್ಲೀಷ್ |
- ಯು.ಪಿ.ಎಸ್.ಸಿ/ ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ಈಗಾಗಲೇ ತರಬೇತಿ ಪಡೆದ
ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಆದರೆ ಎಸ್.ಎಸ್.ಸಿ/ ಆರ್.ಆರ್.ಬಿ/ ಬ್ಯಾಂಕಿಂಗ್ ಮತ್ತು ಗ್ರೂಪ್-ಸಿ / ನ್ಯಾಯಾಂಗ ಸೇವೆ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳು ಯು.ಪಿ.ಎಸ್.ಸಿ/ ಕೆ.ಎ.ಎಸ್. ತರಬೇತಿಗೆ ಮಾತ್ರ
ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈಗಾಗಲೇ ಎಸ್.ಎಸ್.ಸಿ/ ಆರ್.ಆರ್.ಬಿ/ ಬ್ಯಾಂಕಿಂಗ್ ಮತ್ತು ಗ್ರೂಪ್-ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದ ಅಭ್ಯರ್ಥಿಗಳು ಪುನಃ ಗ್ರೂಪ್-ಸಿ/ಆರ್.ಆರ್.ಬಿ./ ಎಸ್.ಎಸ್.ಸಿ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು
ಅರ್ಹರಿರುವುದಿಲ್ಲ.
FREE Coaching 2022 ಪ್ರವೇಶ ಪರೀಕ್ಷೆ ಪಠ್ಯಕ್ರಮ:
UPSC, KAS, Group-C ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರು ವರ್ಗದ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಕೆಳಕಂಡ ಪಠ್ಯಕ್ರಮ (Syllabus) ವನ್ನು ನಿಗಧಿಪಡಿಸಲಾಗಿರುತ್ತದೆ. UPSC | KAS | Group-C ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಲು ಅರ್ಹರು.
- Current events of national and international importance
- History of India and Indian National movement
- Indian and World Geography-Physical, Social, Economics Geography of
India and the World - Indian polity and Governance-Constitution, Political System
- Economic and Social Development-sustainable Development, Poverty, Inclusion, demographics, social sector initiatives, etc.
- General issues on Environmental Ecology, Bio-diversity and Climate
- Change-that do not require subject specialization General Science.
- Important Government programs/ Schemes
- Awards and Honors
- Comprehension
- Interpersonal skills including communication skills
- Logical reasoning and analytical ability
- Decision-making and problem solving
- General mental ability
- Basic numeracy (numbers and their relations, orders of magnitude, etc.,) (Class X level), Data Interpretation (charts, graphs, tables, data sufficiency etc.- class x level)
Banking / RRB / SSC ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರು ವರ್ಗದ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಕೆಳಕಂಡ ಪಠ್ಯಕ್ರಮವನ್ನು ನಿಗಧಿಪಡಿಸಲಾಗಿರುತ್ತದೆ. Banking / RRB / SSC ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಲು ಅರ್ಹರು.
- Reasoning Ability Paper
- Quantitative Aptitude Paper
- English Language Paper
FREE Coaching 2022 ಅರ್ಜಿ ಸಲ್ಲಿಸುವಾಗ ವಹಿಸಬೇಕಾದ ಎಚ್ಚರಿಕೆ:
- UPSC, KAS, Group-C:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ 100 ಅಂಕಗಳಿಗೆ ಬೆಳಗಿನ ಅವಧಿಯಲ್ಲಿ ಒಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವಾಗ ಈ ಮೂರರಲ್ಲಿ ಯಾವ ತರಬೇತಿಗೆ ಆಯ್ಕೆಯಾಗಲು ಬಯಸುತ್ತಾರೋ, ಅಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾತ್ರ ಅರ್ಜಿ ಸಲ್ಲಿಸುವಾಗ ನಮೂದಿಸಬೇಕು. ಅಭ್ಯರ್ಥಿಯು ನೊಂದಾಯಿಸಿದ ಪರೀಕ್ಷೆಗೆ ಮಾತ್ರ ಪ್ರವೇಶ ಪತ್ರ ದೊರೆಯುತ್ತದೆ. ಆಯ್ಕೆಯೂ ಕೂಡ ಅರ್ಜಿಯಲ್ಲಿ ನಮೂದಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯೇ ಆಗಿರುತ್ತದೆ. ಉದಾ:- ಅರ್ಜಿ ಸಲ್ಲಿಸುವಾಗ UPSC ಎಂದು ನೊಂದಾಯಿಸಿದರೆ, UPSC ಯ ಪ್ರವೇಶ ಪತ್ರ ದೊರೆಯುತ್ತದೆ. UPSC ತರಬೇತಿಯ ಆಯ್ಕೆಗಾಗಿ ಮಾತ್ರ ಪರಿಗಣಿಸಲಾಗುತ್ತದೆ.
- Banking, RRB, SSC:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ 100 ಅಂಕಗಳಿಗೆ ಮಧ್ಯಾಹ್ನದ ಅವಧಿಯಲ್ಲಿ ಒಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ಈ ಮೂರರಲ್ಲಿ ಯಾವುದಾದರೊಂದು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಅರ್ಜಿಯಲ್ಲಿ ನಮೂದಿಸಬೇಕು. ಅಭ್ಯರ್ಥಿಯು ನೊಂದಾಯಿಸಿದ ಪರೀಕ್ಷೆಗೆ ಮಾತ್ರ ಪ್ರವೇಶ ಪತ್ರ ದೊರೆಯುತ್ತದೆ. ಆಯ್ಕೆಯೂ ಕೂಡ ಅರ್ಜಿಯಲ್ಲಿ ನಮೂದಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯೇ ಆಗಿರುತ್ತದೆ. ಉದಾ:- ಅರ್ಜಿ ಸಲ್ಲಿಸುವಾಗ RRB ರಂದು ನೊಂದಾಯಿಸಿದರೆ, RRB ಯ ಪ್ರವೇಶ ಪತ್ರ ದೊರೆಯುತ್ತದೆ. RRB ತರಬೇತಿಯ ಆಯ್ಕೆಗಾಗಿ ಮಾತ್ರ ಪರಿಗಣಿಸಲಾಗುತ್ತದೆ.
- UPSC, KAS, Group-C:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆಗಾಗಿ ಬೆಳಗಿನ ಅವಧಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ.
- Banking, RRB, SSC:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆಗಾಗಿ ಮದ್ಯಾಹ್ನದ ಅವಧಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ.
- ಅಭ್ಯರ್ಥಿಯು ಎರಡು ಅವಧಿಯ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.
- ಒಬ್ಬ ಅಭ್ಯರ್ಥಿಯು UPSC, KAS, Group-C ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಬಹುದು ಅಥವಾ Banking, RRB, SSC ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಬಹುದು.
- ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಅರ್ಜಿಯ ಪ್ರತಿಯಲ್ಲಿ ನಮೂದಿಸಬೇಕು. ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಅರ್ಜಿಯಲ್ಲಿ ನಮೂದಿಸುತ್ತಿರೋ, ಅಂತಹ ಪ್ರವೇಶ ಪತ್ರ ದೊರೆಯುತ್ತದೆ.
- ಬೆಳಗಿನ ಅವಧಿ UPSC, KAS, Group-C ತರಬೇತಿಗಾಗಿ ಆಯ್ಕೆ ಮಾಡಲು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಗೂ ಮಧ್ಯಾಹ್ನದ ಅವಧಿಯ Banking, RRB, SSC ತರಬೇತಿಯ ಆಯ್ಕೆಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು.
- ಅಭ್ಯರ್ಥಿಯು ಎರಡು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ, ಎರಡು ತರಬೇತಿಗೂ ಆಯ್ಕೆಯಾಗುತ್ತಾರೆ. ಆದರೆ ಅಂತಿಮವಾಗಿ ಅಭ್ಯರ್ಥಿಯು ಒಂದು ತರಬೇತಿಯನ್ನು ಪಡೆಯಲು ಮಾತ್ರ ಅರ್ಹರಿರುತ್ತಾರೆ.
FREE Coaching 2022 ಗಮನದಲ್ಲಿಡಬೇಕಾದ ಅಂಶ:
- ಇಲಾಖಾ ವೆಬ್ಸೈಟ್ನಲ್ಲಿ ಕಾಲಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಹಾಗೂ ಅಂತಿಮವಾಗಿರುತ್ತದೆ.
- ಇಲಾಖಾವತಿಯಿಂದ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲವಾದ್ದರಿಂದ, ಇಲಾಖಾ ವೆಬ್ಸೈಟ್ನ್ನು ಕಾಲಕಾಲಕ್ಕೆ ವೀಕ್ಷಿಸತಕ್ಕದ್ದು ಹಾಗೂ ವೆಬ್ಸೈಟ್ನಲ್ಲಿ ನೀಡಲಾದ ಸೂಚನೆಯಾನುಸಾರವಾಗಿ ಪ್ರವೇಶ ಪರೀಕ್ಷಾ ಪತ್ರ ಡೌನ್ಲೋಡ್ ಮಾಡಿಕೊಂಡು, ಸಾಮಾನ್ಯ ಪ್ರವೇಶ ಪರೀಕ್ಷೆಗೆ, ತರಬೇತಿ ಸಂಸ್ಥೆಯ ಆಯ್ಕೆ ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವುದು.
- ತಪ್ಪು ಮಾಹಿತಿಯ ಕಾರಣದಿಂದ ಉಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಕಾರಣ.
- ನಿಗಧಿತ ದಿನಾಂಕದಂದು ಪ್ರವೇಶ ಪರೀಕ್ಷೆ, ಕೌನ್ಸಿಲಿಂಗ್, ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದರೆ, ಆಯ್ಕೆಗೆ ಪರಿಗಣಿಸುವುದಿಲ್ಲ. ಇಂತಹ ನಿರ್ಲಕ್ಷಕ್ಕೆ ಅಭ್ಯರ್ಥಿಗಳೇ ನೇರ ಹೊಣೆಗಾರರು.


