ಎಚ್ಚರಿಕೆ…!!‌ ಕರೆ ಮಾಡಿದರೆ ಶಿಸ್ತು ಕ್ರಮ | KEA Notice For Candidates

Telegram Group Join Now
WhatsApp Group Join Now

ಅನಾವಶ್ಯಕವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೆಇಎ ಎಚ್ಚರಿಕೆ (KEA Notice For Candidates) ನೀಡಿದೆ.

ಗುರುವಾರ ಅಧಿಕೃತ ವೆಬ್‌ಸೈಟ್‌ ನಲ್ಲಿ ಈ ಕುರಿತು ಎಚ್ಚರಿಕೆ ಪತ್ರ ಪ್ರಟಿಸಿದ್ದು, ಚಾಲ್ತಿಯಲ್ಲಿರುವ ಯಾವುದೇ ನೇಮಕಾತಿಗೆ ಸಂಬಂಧಿಸಿದ ಮಾಹಿತಿಗಾಗಿ ಅಧಿಕಾರಿಗಳಿಗೆ ಅಥವಾ ಸಿಬ್ಬಂದಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸುವುದನ್ನು ನಿಷೇಧಿಸಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಛೇರಿಯ ವೇಳೆಯಲ್ಲಿ ಕರೆ ಮಾಡಿ ಅನಾವಶ್ಯಕವಾಗಿ ಒತ್ತಡ ಹೇರಿ ಮಾಹಿತಿ ಪಡೆಯಲು ಯತ್ನಿಸುವುದು ಕಂಡುಬಂದರೆ, ಅಂತಹ ಅಭ್ಯರ್ಥಿಗಳನ್ನು ದುರ್ನಡತೆಯಡಿಯಲ್ಲಿ ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಾಧಿಕಾರದಲ್ಲಿ ಚಾಲ್ತಿಯಲ್ಲಿರುವ ಯಾವುದೇ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ತಮ್ಮ ಅಹವಾಲುಗಳನ್ನು ಇ-ಮೇಲ್ ([email protected]) ಅಥವಾ ಪತ್ರದ ಮುಖೇನ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ.

Telegram Group Join Now
WhatsApp Group Join Now

Leave a Comment