ಉಚಿತ IAS KAS ಪೂರ್ವಭಾವಿ ತರಬೇತಿ ಫಲಿತಾಂಶ ಪ್ರಕಟ | FREE Coaching 2022 Result Announced

Telegram Group Join Now
WhatsApp Group Join Now

FREE Coaching 2022: ಯು.ಪಿ.ಎಸ್.ಸಿ, ಕೆ.ಎ.ಎಸ್, ಬ್ಯಾಂಕಿಂಗ್, ಅರ್.ಅರ್.ಬಿ, ಎಸ್.ಎ.ಸ್ಸಿ, ಗ್ರೂಪ್ ಸಿ ಮತ್ತು ನ್ಯಾಯಾಂಗ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ನಡೆದ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಂಕಪಟ್ಟಿಯನ್ನು ಕೆಳಗೆ ನೀಡಿರುವ ಲಿಂಕ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಅವಕಾಶ:

ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಪೂರ್ವಭಾವಿ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದುದಾಗಿದೆ.

2022-23 ನೇ ಸಾಲಿಗೆ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ, ಕೆ.ಎ.ಎಸ್,ಗ್ರೂಪ್-ಸಿ,ಬ್ಯಾಂಕಿಂಗ್, ಎಸ್.ಎಸ್.ಸಿ,ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಉಚಿತ ಪೂರ್ವಭಾವಿ ತರಬೇತಿಗೆ (FREE Coaching 2022) ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಸೇನೆ ಸೇರಲು ಉಚಿತ ತರಬೇತಿ

ಯು.ಪಿ.ಎಸ್.ಸಿ, ಕೆ.ಎ.ಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್.ಎಸ್.ಸಿ , ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.

FREE Coaching 2022 Karnataka ಕೋರ್ಸ್‌ಗಳ ವಿವರ:

ಯು.ಪಿ.ಎಸ್.ಸಿ, ಕೆ.ಎ.ಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್.ಎಸ್.ಸಿ , ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿ

FREE Coaching 2022 ತರಬೇತಿ ಅವಧಿ (ತಿಂಗಳು):

ಕೋರ್ಸ್‌ತರಬೇತಿ ಅವಧಿ
ಯು.ಪಿ.ಎಸ್.ಸಿ09 ತಿಂಗಳು
ಕೆ.ಎ.ಎಸ್07 ತಿಂಗಳು
ಗ್ರೂಪ್-ಸಿ3 ತಿಂಗಳು
ಬ್ಯಾಂಕಿಂಗ್ 3 ತಿಂಗಳು
ಎಸ್.ಎಸ್.ಸಿ3 ತಿಂಗಳು
ಆರ್.ಆರ್.ಬಿ3 ತಿಂಗಳು

ವಯೋಮಿತಿ:

18 ರಿಂದ 40 ವರ್ಷದ ಅಭ್ಯರ್ಥಿಗಳು ಉಚಿತ ಪೂರ್ವಭಾವಿ ತರಬೇತಿಗೆ ಅರ್ಜಿ ಸಲ್ಲಿಸಬಹುದು

FREE Coaching 2022 ವಿದ್ಯಾರ್ಹತೆ:

 • ಯು.ಪಿ.ಎಸ್.ಸಿ: ಪದವಿಯಲ್ಲಿ ಶೇ.55 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
 • ಕೆ.ಎ.ಎಸ್/ಗ್ರೂಪ್‌-ಸಿ/ಬ್ಯಾಂಕಿಂಗ್/ಆರ್.ಆರ್.ಬಿ/ಎಸ್.ಎಸ್.ಸಿ: ಪದವಿಯಲ್ಲಿ ಶೇ.50 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
 • ನ್ಯಾಯಾಂಗ ಸೇವೆ: ಪದವಿಯಲ್ಲಿ ಶೇ.45 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಅಭ್ಯರ್ಥಿಯ ಸಾಮಾನ್ಯ ಅರ್ಹತೆ:

 1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
 3. ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ, ನಿಗಧಿತ ಪ್ರಾಧಿಕಾರದಿಂದ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪ್ರಮಾಣ ಪತ್ರ ಪಡೆದಿರಬೇಕು. ವಿದ್ಯಾರ್ಥಿನಿಲಯ / ಕೈಸ್ ವಿದ್ಯಾರ್ಥಿನಿಲಯ / ಸಫಾಯಿ ಕರ್ಮಚಾರಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.

ವಾರ್ಷಿಕ ಆದಾಯ:

ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.5 ಲಕ್ಷ ಮೀರಿರಬಾರದು.

ಆಯ್ಕೆ ವಿಧಾನ:

 • ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
 • ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆನ್ಲೈನ್ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳನ್ನು ತರಬೇತಿ ಸಂಸ್ಥೆಗೆ ನಿಯೋಜಿಸಲಾಗುತ್ತದೆ.

ಶಿಷ್ಯವೇತನ (ಮಾಸಿಕ):

 • ಯು.ಪಿ.ಎಸ್.ಸಿ ತರಬೇತಿ:
  • ದೆಹಲಿ – 10,000/-
  • ಹೈದರಾಬಾದ್ – 8,000/-
  • ಬೆಂಗಳೂರು – 6,000/-
  • ಇತರೆ ಸ್ಥಳಗಳು – 5,000/-
 • ಕೆ.ಎ.ಎಸ್ ತರಬೇತಿ4,000/-
 • ಬ್ಯಾಂಕಿಂಗ್, ಗ್ರೂಪ್‌-ಸಿ, ಎಸ್.ಎಸ್.ಸಿ,ಆರ್.ಆರ್.ಬಿ, ನ್ಯಾಯಾಂಗ ಸೇವೆ ತರಬೇತಿ – 3,000/-

*ಸರ್ಕಾರದ ಆದೇಶದ ಪ್ರಕಾರ ಶಿಷ್ಯವೇತನವನ್ನು ಮೂರು ಮಾಹೆಗೆ ಒಂದು ಬಾರಿ ತರಬೇತಿ ಸಂಸ್ಥೆಯವರು ಸಲ್ಲಿಸುವ ಹಾಜರಾತಿಯನ್ವಯ ಪಾವತಿಸಲಾಗುವುದು. ಆದರೆ ತರಬೇತಿ ಅವಧಿಯಲ್ಲಿ ಯಾವುದೇ ವಸತಿ ಸೌಲಭ್ಯವನ್ನು ಇಲಾಖಾವತಿಯಿಂದ ನೀಡಲಾಗುವುದಿಲ್ಲ.

2ನೇ ಸುತ್ತಿನ ಮೆರಿಟ್ ಪಟ್ಟಿ

OBC 2ನೇ ಸುತ್ತಿನ ಮೆರಿಟ್ ಪಟ್ಟಿClick ಮಾಡಿ

2ನೇ ಹಂತದ ಪಟ್ಟಿ – Free Coaching 2nd List

ಪರಿಶಿಷ್ಟ ಜಾತಿಗಳ (SC), ಪರಿಶಿಷ್ಟ ಪಂಗಡಗಳ (ST), ಅಲ್ಪಸಂಖ್ಯಾತರ (Minority) ಕಲ್ಯಾಣ ಇಲಾಖೆಯವತಿಯಿಂದ Free Coaching ಗೆ ಅರ್ಹರಾದ ಅಭ್ಯರ್ಥಿಗಳ 2ನೇ ಹಂತದ ಸಂಸ್ಥೆ ಹಂಚಿಕೆ ಪಟ್ಟಿ (Institution Allotment 2nd List) ಪ್ರಕಟಗೊಂಡಿದೆ.

ಪರಿಶಿಷ್ಟ ಜಾತಿಗಳ (SC)Click ಮಾಡಿ
ಪರಿಶಿಷ್ಟ ಪಂಗಡಗಳ (ST)Click ಮಾಡಿ
ಅಲ್ಪಸಂಖ್ಯಾತClick ಮಾಡಿ

OBC Merit List – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇರಿಟ್‌ ಪಟ್ಟಿ

UPSC Merit ListClick ಮಾಡಿ
KAS Merit List Click ಮಾಡಿ
Group-C Merit List Click ಮಾಡಿ
SSC Merit List Click ಮಾಡಿ
BANKING Merit List Click ಮಾಡಿ
RRB Merit List Click ಮಾಡಿ

ಸಮಾಜ ಕಲ್ಯಾಣ ಇಲಾಖೆಯ ಮೇರಿಟ್‌ ಪಟ್ಟಿFREE Coaching SC Merit List 2022

UPSC Merit ListClick ಮಾಡಿ
KAS Merit List Click ಮಾಡಿ
Group-C Merit List Click ಮಾಡಿ
SSC Merit List Click ಮಾಡಿ
BANKING Merit List Click ಮಾಡಿ
RRB Merit List Click ಮಾಡಿ

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೇರಿಟ್‌ ಪಟ್ಟಿFREE Coaching ST Merit List 2022

UPSC Merit ListClick ಮಾಡಿ
KAS Merit List Click ಮಾಡಿ
Group-C Merit List Click ಮಾಡಿ
SSC Merit List Click ಮಾಡಿ
BANKING Merit List Click ಮಾಡಿ
RRB Merit List Click ಮಾಡಿ

FREE Coaching 2022 Online Application ಪ್ರಮುಖ ಲಿಂಕ್ʼಗಳು

ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಿClick ಮಾಡಿ
ಅಧಿಕೃತ ಜಾಹಿರಾತುClick ಮಾಡಿ
ಅಧಿಕೃತ ವಿವರಣಾತ್ಮಕ ಅಧಿಸೂಚನೆClick ಮಾಡಿ
ಅರ್ಜಿ ಸಲ್ಲಿಕೆ ಲಿಂಕ್Apply ಮಾಡಿ
ಅಧಿಕೃತ ವೆಬ್‌ಸೈಟ್https://sw.kar.nic.in/

FREE Coaching 2022 ಪರೀಕ್ಷಾ ವಿಧಾನ:

ವಿಷಯಅಂಕಗಳುಅವಧಿಮಾಧ್ಯಮ
UPSC/KAS/Group-C100120 ನಿಮಿಷಕನ್ನಡ/ಇಂಗ್ಲೀಷ್
RRB/SSC/Banking100120 ನಿಮಿಷಕನ್ನಡ/ಇಂಗ್ಲೀಷ್
 1. ಯು.ಪಿ.ಎಸ್.ಸಿ/ ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ಈಗಾಗಲೇ ತರಬೇತಿ ಪಡೆದ
  ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಆದರೆ ಎಸ್.ಎಸ್.ಸಿ/ ಆರ್.ಆರ್.ಬಿ/ ಬ್ಯಾಂಕಿಂಗ್ ಮತ್ತು ಗ್ರೂಪ್-ಸಿ / ನ್ಯಾಯಾಂಗ ಸೇವೆ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳು ಯು.ಪಿ.ಎಸ್.ಸಿ/ ಕೆ.ಎ.ಎಸ್. ತರಬೇತಿಗೆ ಮಾತ್ರ
  ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈಗಾಗಲೇ ಎಸ್.ಎಸ್.ಸಿ/ ಆರ್.ಆರ್.ಬಿ/ ಬ್ಯಾಂಕಿಂಗ್ ಮತ್ತು ಗ್ರೂಪ್-ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದ ಅಭ್ಯರ್ಥಿಗಳು ಪುನಃ ಗ್ರೂಪ್-ಸಿ/ಆರ್‌.ಆರ್‌.ಬಿ./ ಎಸ್.ಎಸ್.ಸಿ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು
  ಅರ್ಹರಿರುವುದಿಲ್ಲ.

FREE Coaching 2022 ಪ್ರವೇಶ ಪರೀಕ್ಷೆ ಪಠ್ಯಕ್ರಮ:

UPSC, KAS, Group-C ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರು ವರ್ಗದ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಕೆಳಕಂಡ ಪಠ್ಯಕ್ರಮ (Syllabus) ವನ್ನು ನಿಗಧಿಪಡಿಸಲಾಗಿರುತ್ತದೆ. UPSC | KAS | Group-C ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಲು ಅರ್ಹರು.

 • Current events of national and international importance
 • History of India and Indian National movement
 • Indian and World Geography-Physical, Social, Economics Geography of
  India and the World
 • Indian polity and Governance-Constitution, Political System
 • Economic and Social Development-sustainable Development, Poverty, Inclusion, demographics, social sector initiatives, etc.
 • General issues on Environmental Ecology, Bio-diversity and Climate
 • Change-that do not require subject specialization General Science.
 • Important Government programs/ Schemes
 • Awards and Honors
 • Comprehension
 • Interpersonal skills including communication skills
 • Logical reasoning and analytical ability
 • Decision-making and problem solving
 • General mental ability
 • Basic numeracy (numbers and their relations, orders of magnitude, etc.,) (Class X level), Data Interpretation (charts, graphs, tables, data sufficiency etc.- class x level)

Banking / RRB / SSC ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರು ವರ್ಗದ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಕೆಳಕಂಡ ಪಠ್ಯಕ್ರಮವನ್ನು ನಿಗಧಿಪಡಿಸಲಾಗಿರುತ್ತದೆ. Banking / RRB / SSC ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಲು ಅರ್ಹರು.

 1. Reasoning Ability Paper
 2. Quantitative Aptitude Paper
 3. English Language Paper

FREE Coaching 2022 ಅರ್ಜಿ ಸಲ್ಲಿಸುವಾಗ ವಹಿಸಬೇಕಾದ ಎಚ್ಚರಿಕೆ:

 1. UPSC, KAS, Group-C:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ 100 ಅಂಕಗಳಿಗೆ ಬೆಳಗಿನ ಅವಧಿಯಲ್ಲಿ ಒಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವಾಗ ಈ ಮೂರರಲ್ಲಿ ಯಾವ ತರಬೇತಿಗೆ ಆಯ್ಕೆಯಾಗಲು ಬಯಸುತ್ತಾರೋ, ಅಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾತ್ರ ಅರ್ಜಿ ಸಲ್ಲಿಸುವಾಗ ನಮೂದಿಸಬೇಕು. ಅಭ್ಯರ್ಥಿಯು ನೊಂದಾಯಿಸಿದ ಪರೀಕ್ಷೆಗೆ ಮಾತ್ರ ಪ್ರವೇಶ ಪತ್ರ ದೊರೆಯುತ್ತದೆ. ಆಯ್ಕೆಯೂ ಕೂಡ ಅರ್ಜಿಯಲ್ಲಿ ನಮೂದಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯೇ ಆಗಿರುತ್ತದೆ. ಉದಾ:- ಅರ್ಜಿ ಸಲ್ಲಿಸುವಾಗ UPSC ಎಂದು ನೊಂದಾಯಿಸಿದರೆ, UPSC ಯ ಪ್ರವೇಶ ಪತ್ರ ದೊರೆಯುತ್ತದೆ. UPSC ತರಬೇತಿಯ ಆಯ್ಕೆಗಾಗಿ ಮಾತ್ರ ಪರಿಗಣಿಸಲಾಗುತ್ತದೆ.
 1. Banking, RRB, SSC:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ 100 ಅಂಕಗಳಿಗೆ ಮಧ್ಯಾಹ್ನದ ಅವಧಿಯಲ್ಲಿ ಒಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ಈ ಮೂರರಲ್ಲಿ ಯಾವುದಾದರೊಂದು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಅರ್ಜಿಯಲ್ಲಿ ನಮೂದಿಸಬೇಕು. ಅಭ್ಯರ್ಥಿಯು ನೊಂದಾಯಿಸಿದ ಪರೀಕ್ಷೆಗೆ ಮಾತ್ರ ಪ್ರವೇಶ ಪತ್ರ ದೊರೆಯುತ್ತದೆ. ಆಯ್ಕೆಯೂ ಕೂಡ ಅರ್ಜಿಯಲ್ಲಿ ನಮೂದಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯೇ ಆಗಿರುತ್ತದೆ. ಉದಾ:- ಅರ್ಜಿ ಸಲ್ಲಿಸುವಾಗ RRB ರಂದು ನೊಂದಾಯಿಸಿದರೆ, RRB ಯ ಪ್ರವೇಶ ಪತ್ರ ದೊರೆಯುತ್ತದೆ. RRB ತರಬೇತಿಯ ಆಯ್ಕೆಗಾಗಿ ಮಾತ್ರ ಪರಿಗಣಿಸಲಾಗುತ್ತದೆ.
 2. UPSC, KAS, Group-C:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆಗಾಗಿ ಬೆಳಗಿನ ಅವಧಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ.
 3. Banking, RRB, SSC:- ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆಗಾಗಿ ಮದ್ಯಾಹ್ನದ ಅವಧಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ.
 4. ಅಭ್ಯರ್ಥಿಯು ಎರಡು ಅವಧಿಯ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.
 5. ಒಬ್ಬ ಅಭ್ಯರ್ಥಿಯು UPSC, KAS, Group-C ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಬಹುದು ಅಥವಾ Banking, RRB, SSC ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಬಹುದು.
 6. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಅರ್ಜಿಯ ಪ್ರತಿಯಲ್ಲಿ ನಮೂದಿಸಬೇಕು. ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಅರ್ಜಿಯಲ್ಲಿ ನಮೂದಿಸುತ್ತಿರೋ, ಅಂತಹ ಪ್ರವೇಶ ಪತ್ರ ದೊರೆಯುತ್ತದೆ.
 7. ಬೆಳಗಿನ ಅವಧಿ UPSC, KAS, Group-C ತರಬೇತಿಗಾಗಿ ಆಯ್ಕೆ ಮಾಡಲು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಗೂ ಮಧ್ಯಾಹ್ನದ ಅವಧಿಯ Banking, RRB, SSC ತರಬೇತಿಯ ಆಯ್ಕೆಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು.
 8. ಅಭ್ಯರ್ಥಿಯು ಎರಡು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ, ಎರಡು ತರಬೇತಿಗೂ ಆಯ್ಕೆಯಾಗುತ್ತಾರೆ. ಆದರೆ ಅಂತಿಮವಾಗಿ ಅಭ್ಯರ್ಥಿಯು ಒಂದು ತರಬೇತಿಯನ್ನು ಪಡೆಯಲು ಮಾತ್ರ ಅರ್ಹರಿರುತ್ತಾರೆ.

FREE Coaching 2022 ಗಮನದಲ್ಲಿಡಬೇಕಾದ ಅಂಶ:

 • ಇಲಾಖಾ ವೆಬ್‌ಸೈಟ್‌ನಲ್ಲಿ ಕಾಲಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಹಾಗೂ ಅಂತಿಮವಾಗಿರುತ್ತದೆ.
 • ಇಲಾಖಾವತಿಯಿಂದ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲವಾದ್ದರಿಂದ, ಇಲಾಖಾ ವೆಬ್‌ಸೈಟ್‌ನ್ನು ಕಾಲಕಾಲಕ್ಕೆ ವೀಕ್ಷಿಸತಕ್ಕದ್ದು ಹಾಗೂ ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಯಾನುಸಾರವಾಗಿ ಪ್ರವೇಶ ಪರೀಕ್ಷಾ ಪತ್ರ ಡೌನ್‌ಲೋಡ್ ಮಾಡಿಕೊಂಡು, ಸಾಮಾನ್ಯ ಪ್ರವೇಶ ಪರೀಕ್ಷೆಗೆ, ತರಬೇತಿ ಸಂಸ್ಥೆಯ ಆಯ್ಕೆ ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವುದು.
 • ತಪ್ಪು ಮಾಹಿತಿಯ ಕಾರಣದಿಂದ ಉಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಕಾರಣ.
 • ನಿಗಧಿತ ದಿನಾಂಕದಂದು ಪ್ರವೇಶ ಪರೀಕ್ಷೆ, ಕೌನ್ಸಿಲಿಂಗ್, ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದರೆ, ಆಯ್ಕೆಗೆ ಪರಿಗಣಿಸುವುದಿಲ್ಲ. ಇಂತಹ ನಿರ್ಲಕ್ಷಕ್ಕೆ ಅಭ್ಯರ್ಥಿಗಳೇ ನೇರ ಹೊಣೆಗಾರರು.
Telegram Group Join Now
WhatsApp Group Join Now

Leave a Comment

ಲೇಬರ್‌ ಕಾರ್ಡ್‌ ನೋಂದಣಿ ಆರಂಭ | Labour Card Application Karnataka 2024 35,000 ರೂ. ಪ್ರೋತ್ಸಾಹಧನ | sw.kar.nic.in prize money 2023 ಕಾನ್ಸ್‌ಟೇಬಲ್ & ವಿವಿಧ ಹುದ್ದೆಗಳ ನೇಮಕಾತಿ | SSB Recruitment 2023 Notification ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ 2022 | KMF Recruitment 2022 Apply Online ಅರಣ್ಯ ಇಲಾಖೆ ನೇಮಕಾತಿ 2022: KFD Recruitment 2022 Apply Online