2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ (SSLC Result 2025) ಫಲಿತಾಂಶವನ್ನು ಪ್ರಕಟಿಸಿದ್ದು, ಈ ವರ್ಷವು SSLC ಪರೀಕ್ಷೆಯಲ್ಲಿ ಬಾಲಕಿಯರು ಹೆಚ್ಚು ಪ್ರತಿಶತದಷ್ಟು ಫಲಿತಾಂಶವನ್ನು ಪಡೆದಿದ್ದಾರೆ.
21-03-2025 ರಿಂದ 04-04-2025 ರವರೆಗೆ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಮಧು ಬಂಗಾರಪ್ಪ ಅವರು ಮಾಧ್ಯಮಗೋಷ್ಠಿ ನಡೆಸಿ SSLC ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಈ ವರ್ಷದ SSLC ಪರೀಕ್ಷೆಯಲ್ಲಿ ಬಾಲಕಿಯರು ಹೆಚ್ಚು ಪ್ರತಿಶತದಷ್ಟು ಫಲಿತಾಂಶ ಪಡೆದಿದ್ದು, 625ಕ್ಕೆ 625 ಅಂಕಗಳನ್ನು 22 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
2024-25ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 62.14% ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ (ಶೇ.91.12), ಉಡುಪಿ ಜಿಲ್ಲೆ (ಶೇ.89.96), ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಪಡೆದಿದೆ. ಉಡುಪಿ ದ್ವಿತೀಯ ಸ್ಥಾನ, ಉತ್ತರ ಕನ್ನಡ ಮೂರು ಸ್ಥಾನ ಹಾಗೂ ಶಿವಮೊಗ್ಗ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿವೆ.
ಜಿಲ್ಲಾವಾರು SSLC Result 2025:
| ಜಿಲ್ಲೆ | ಶೇಕಡವಾರು ಫಲಿತಾಂಶ |
| ದಕ್ಷಿಣ ಕನ್ನಡ | 91.12 |
| ಉಡುಪಿ | 89.96 |
| ಉತ್ತರ ಕನ್ನಡ | 83.19 |
| ಶಿವಮೊಗ್ಗ | 82.29 |
| ಕೊಡಗು | 82.21 |
| ಹಾಸನ | 82.12 |
| ಶಿರಸಿ | 80.47 |
| ಚಿಕ್ಕಮಗಳೂರು | 77.9 |
| ಬೆಂಗಳೂರು ಗ್ರಾಮಾಂತರ | 74.02 |
| ಬೆಂಗಳೂರು ದಕ್ಷಿಣ | 72.3 |
| ಬೆಂಗಳೂರು ಉತ್ತರ | 72.27 |
| ಮಂಡ್ಯ | 69.27 |
| ಹಾವೇರಿ | 69.03 |
| ಕೋಲಾರ | 68.47 |
| ಮೈಸೂರು | 68.39 |
| ಬಾಗಲಕೋಟೆ | 68.29 |
| ಗದಗ | 67.72 |
| ಧಾರವಾಡ | 67.62 |
| ವಿಜಯನಗರ | 67.62 |
| ತುಮಕೂರು | 67.03 |
| ದಾವಣಗೆರೆ | 66.09 |
| ಚಿಕ್ಕಬಳ್ಳಾಪುರ | 63.64 |
| ಚಿತ್ರದುರ್ಗ | 63.21 |
| ರಾಮನಗರ | 63.12 |
| ಬೆಳಗಾವಿ | 62.16 |
| ಚಿಕ್ಕೋಡಿ | 62.12 |
| ಚಾಮರಾಜನಗರ | 61.45 |
| ಮಧುಗಿರಿ | 60.65 |
| ಬಳ್ಳಾರಿ | 60.26 |
| ಕೊಪ್ಪಳ | 57.32 |
| ಬೀದರ್ | 53.25 |
| ರಾಯಚೂರು | 52.05 |
| ಯಾದಗಿರಿ | 51.6 |
| ವಿಜಯಪುರ | 49.58 |
| ಕಲಬುರಗಿ | 42.43 |
SSLC Result 2025 Online Link:
ಫಲಿತಾಂಶ ವೆಬ್ಸೈಟ್: karresults.nic.in
ಇಲಾಖೆಯ ಅಧಿಕೃತ ವೆಬ್ಸೈಟ್: kseeb.kar.nic.in
ಇತರೆ ಮಾಹಿತಿಗಳು:

