SSLC Result 2025: ಬಾಲಕಿಯರೇ ಮೇಲುಗೈ; ರಾಜ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ

2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ (SSLC Result 2025) ಫಲಿತಾಂಶವನ್ನು ಪ್ರಕಟಿಸಿದ್ದು, ಈ ವರ್ಷವು SSLC ಪರೀಕ್ಷೆಯಲ್ಲಿ ಬಾಲಕಿಯರು ಹೆಚ್ಚು ಪ್ರತಿಶತದಷ್ಟು ಫಲಿತಾಂಶವನ್ನು ಪಡೆದಿದ್ದಾರೆ.

21-03-2025 ರಿಂದ 04-04-2025 ರವರೆಗೆ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಮಧು ಬಂಗಾರಪ್ಪ ಅವರು ಮಾಧ್ಯಮಗೋಷ್ಠಿ ನಡೆಸಿ SSLC ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ಈ ವರ್ಷದ SSLC ಪರೀಕ್ಷೆಯಲ್ಲಿ ಬಾಲಕಿಯರು ಹೆಚ್ಚು ಪ್ರತಿಶತದಷ್ಟು ಫಲಿತಾಂಶ ಪಡೆದಿದ್ದು, 625ಕ್ಕೆ 625 ಅಂಕಗಳನ್ನು 22 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

2024-25ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 62.14% ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ (ಶೇ.91.12), ಉಡುಪಿ ಜಿಲ್ಲೆ (ಶೇ.89.96), ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ.

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ‍ಪಡೆದರೆ, ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಪಡೆದಿದೆ. ಉಡುಪಿ ದ್ವಿತೀಯ ಸ್ಥಾನ, ಉತ್ತರ ಕನ್ನಡ ಮೂರು ಸ್ಥಾನ ಹಾಗೂ ಶಿವಮೊಗ್ಗ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿವೆ.

SSLC ಫಲಿತಾಂಶ 2025 ಪ್ರಕಟ, ಹೀಗೆ ಚೆಕ್‌ ಮಾಡಿ

ಜಿಲ್ಲಾವಾರು SSLC Result 2025:

ಜಿಲ್ಲೆಶೇಕಡವಾರು ಫಲಿತಾಂಶ
ದಕ್ಷಿಣ ಕನ್ನಡ91.12
ಉಡುಪಿ89.96
ಉತ್ತರ ಕನ್ನಡ83.19
ಶಿವಮೊಗ್ಗ82.29
ಕೊಡಗು82.21
ಹಾಸನ82.12
ಶಿರಸಿ80.47
ಚಿಕ್ಕಮಗಳೂರು77.9
ಬೆಂಗಳೂರು ಗ್ರಾಮಾಂತರ74.02
ಬೆಂಗಳೂರು ದಕ್ಷಿಣ72.3
ಬೆಂಗಳೂರು ಉತ್ತರ72.27
ಮಂಡ್ಯ69.27
ಹಾವೇರಿ69.03
ಕೋಲಾರ68.47
ಮೈಸೂರು68.39
ಬಾಗಲಕೋಟೆ68.29
ಗದಗ67.72
ಧಾರವಾಡ67.62
ವಿಜಯನಗರ67.62
ತುಮಕೂರು67.03
ದಾವಣಗೆರೆ66.09
ಚಿಕ್ಕಬಳ್ಳಾಪುರ63.64
ಚಿತ್ರದುರ್ಗ63.21
ರಾಮನಗರ63.12
ಬೆಳಗಾವಿ62.16
ಚಿಕ್ಕೋಡಿ62.12
ಚಾಮರಾಜನಗರ61.45
ಮಧುಗಿರಿ60.65
ಬಳ್ಳಾರಿ60.26
ಕೊಪ್ಪಳ57.32
ಬೀದರ್53.25
ರಾಯಚೂರು52.05
ಯಾದಗಿರಿ51.6
ವಿಜಯಪುರ49.58
ಕಲಬುರಗಿ42.43

SSLC Result 2025 Online Link:

ಫಲಿತಾಂಶ ವೆಬ್‌ಸೈಟ್:‌ karresults.nic.in
ಇಲಾಖೆಯ ಅಧಿಕೃತ ವೆಬ್‌ಸೈಟ್:‌ kseeb.kar.nic.in

ನಮ್ಮ ಮೆಟ್ರೋ ನೇಮಕಾತಿ 2025: ವೇತನ 59,060 ರೂ.

10th Pass ಆದವರಿಗೆ ಗೃಹರಕ್ಷಕ ದಳದಲ್ಲಿ ಉದ್ಯೋಗ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment