New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ

ಎಲ್ಲರಿಗೂ ನಮಸ್ಕಾರ, ನೀವು ಕೂಡ ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಸಿಹಿ‌ ಸುದ್ದಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಿದ್ದು, ಯಾರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಾ ಅಂತವರು ಕೂಡಲೇ ಹೋಗಿ ಅರ್ಜಿ ಸಲ್ಲಿಸಿ.

ರೇಷನ್ ‌ಹೊಂದಿರುವ ಫಲಾನುಭವಿಗಳ ಕುಟುಂಬಕ್ಕೆ ಸರ್ಕಾರವು ನೀಡುತ್ತಿರುವ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು. ಹಾಗೂ ಪಡಿತರ ಚೀಟಿ ಇರುವವರಿಗೆ ವೈದ್ಯಕೀಯ ಸೇವೆಗಳು ಸಹ ಉಚಿತವಾಗಿ ದೊರೆಯಲಿದೆ. ಜೊತೆಗೆ ಪ್ರತಿ ತಿಂಗಳು ಉಚಿತವಾಗಿ ಪಡಿತರವನ್ನು ನೀಡುತ್ತಾರೆ.

ಬಿಪಿಎಲ್, ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು 01-05-2025 ರಿಂದ 05-05-2025 ರ ವರೆಗೆ ಆಹಾರ ಇಲಾಖೆಯು ಕಾಲಾವಕಾಶ ನೀಡಿದ್ದು, ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಸಲ್ಲಿಸಲು ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಮಧ್ಯಾಹ್ನ 1 ರಿಂದ 3 ಗಂಟೆ ವರೆಗೆ ಅರ್ಜಿ ಸಲ್ಲಿಸಬಹುದು.

ಹೊಸ APL ಹಾಗೂ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ರೇಷನ್ ಕಾರ್ಡ್ ಇಲ್ಲದವರು ಅರ್ಜಿ ಸಲ್ಲಿಸಬಹುದು.
ಹೊಸದಾಗಿ ಮದುವೆಯಾದ ದಂಪತಿಗಳು, ಅರ್ಜಿ ಸಲ್ಲಿಸಬಹುದು.
ಅರ್ಜಿದಾರರ ಕುಟುಂಬದ ಆದಾಯದ ಮೇಲೆ ಪಡಿತರ ಚೀಟಿ ಬಿಪಿಎಲ್, ಎಪಿಎಲ್‌ ಎಂಬುದು ನಿರ್ಧರಿತವಾಗಿರಲಿದೆ.

New Ration Card ಅಗತ್ಯ ದಾಖಲೆಗಳು:

ಎಲ್ಲಾ ಸದಸ್ಯರ‌ ಆಧಾರ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಒಬ್ಬರದು)
6 ವರ್ಷ ಒಳಗಿನ ಮಕ್ಕಳ ಜನನ ಪ್ರಮಾಣ ಪತ್ರ
ಮೊಬೈಲ್ ನಂಬರ್

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. Check Link

New Ration Card Online Application: Check Link

SSLC ಫಲಿತಾಂಶ 2025 ಪ್ರಕಟ, ಹೀಗೆ ಚೆಕ್‌ ಮಾಡಿ

ನಮ್ಮ ಮೆಟ್ರೋ ನೇಮಕಾತಿ 2025: ವೇತನ 59,060 ರೂ.

10th Pass ಆದವರಿಗೆ ಗೃಹರಕ್ಷಕ ದಳದಲ್ಲಿ ಉದ್ಯೋಗ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment