ಅನ್ನಭಾಗ್ಯ ಯೋಜನೆಯ DBT Status Check ಮಾಡಿ | AnnaBhagya DBT Status Check 2023-24 @ahara.kar.nic.in

ಎಲ್ಲರಿಗೂ ನಮಸ್ಕಾರ.. ಅನ್ನಭಾಗ್ಯ ಯೋಜನೆಯ ಈ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. ನಿಮ್ಮ ರೇಷನ್‌ ಕಾರ್ಡ್‌ನ ಹಣ ಜಮಾ ಆಗಿದೆಯಾ? ಮತ್ತು ಎಷ್ಟು ಹಣ ಎಂದು ವರ್ಗಾವಣೆ ಆಗಿದೆ..? ಎಂಬುದನ್ನು AnnaBhagya DBT Status Check ಮಾಡುವ ಸುಲಭ ವಿಧಾನನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ‌ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ವಿತರಿಸುವುದಾಗಿದೆ ತಿಳಿಸಲಾಗಿತ್ತು. ಅನ್ನ ಭಾಗ್ಯ ಯೋಜನೆಯನ್ನು ಜಾರಿ ಮಾಡಿ 5 ಕೆಜಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ಕೆ.ಜಿ ಗೆ 34 ರೂ. ರಂತೆ ಪ್ರತಿಯೊಬ್ಬರಿಗೆ 170 ರೂ. ನೀಡಲಾಗುತ್ತಿದೆ.

BPL ಕಾರ್ಡ್‌ ಮತ್ತು ಅಂತ್ಯೋದಯ ಪಡಿತರ ಚೀಟಿ ಇರುವವರ ಬ್ಯಾಂಕ್‌ ಖಾತೆಗೆ AnnaBhagya DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಅದರಂತೆ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಸರ್ಕಾರ ಹಣ ಜಮಾ ಮಾಡುತ್ತಿದೆ. ನಿಮ್ಮ ಬ್ಯಾಂಕ್‌ ಖಾತೆಗೂ ಹಣ ಜಮಾ ಆಗಿದೇಯಾ ಚೆಕ್‌ ಮಾಡಿ.

Ration Card Amount ಲೆಕ್ಕಾಚಾರ

2023 ರ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ವಿತರಿಸುವ ಭರವಸೆ ನೀಡಿತ್ತು. ಆದರೆ ಬೇಕಾಗುವಷ್ಟು ಅಕ್ಕಿ ಲಭ್ಯವಾಗದ ಕಾರಣ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಅನ್ನಭಾಗ್ಯ ಹಣ ನೀಡುವ ಯೋಜನೆ ರೂಪಿಸಿದೆ. ಅದರಂತೆ BPL Card ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 170 ರೂ. ರಂತೆ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮಾ ಮಾಡಲಾಗುತ್ತಿದೆ.

Annabhagya DBT Status Check Online

ಅನ್ನಭಾಗ್ಯ ಯೋಜನೆಯ ಈ ತಿಂಗಳ ಹಣ ನಿಮ್ಮ ಖಾತೆಗೆ ಬಂದಿದೆಯಾ ಹಾಗೂ ಎಷ್ಟು ಹಣ ಜಮಾ ಆಗಲಿದೆ ಎಂಬುದನ್ನು ತಿಳಿಯಲು ಈ ಕೇಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ.

  • Step-1: ಮೊದಲಿಗೆ ಕೇಳಗೆ ನೀಡಿರುವ ಆಹಾರ ಇಲಾಖೆಯ ವೆಬ್‌ಸೈಟ್‌ (ahara.kar.nic.in/lpg) ಲಿಂಕ್ ಮೇಲೆ ಕ್ಲಿಕ್‌ ಮಾಡಿ.
  • Step-2: ಅಲ್ಲಿ ಮೂರು ಲಿಂಕ್‌ಗಳಿರುವ‌ ಒಂದು ಪೆಜ್‌ ಒಪನ್‌ ಆಗುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಉದಾ. ONLY FOR BENGALURU DISTRICTS CLICK HERE ಎಂದಿರುತ್ತದೆ.
Annabhagya DBT Status Check Online 2023 @ahara.kar.nic.in
Annabhagya DBT Payment Status Check
  • Step-3: ನೇರ ನಗದು ವರ್ಗಾವಣೆಯ ಸ್ಥಿತಿ (Status Of DBT) ಎಂಬ Option ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. (ಕೇಳಗಿನ ಚಿತ್ರದಲ್ಲಿ ಕೊನೆಯ ಆಯ್ಕೆ ಇದೆ ಗಮನಿಸಿ)
ahara kar nic in dbt status
  • Step-4: ನಂತರ Status of DBT ಪುಟ ಓಪನ್‌ ಆಗುತ್ತದೆ ಅದರಲ್ಲಿ Select Year, Select Month ಅಂತ ಇರುತ್ತದೆ. ನೀವು ಯಾವ ತಿಂಗಳ DBT Status ನೋಡ ಬಯಸುತ್ತಿರಿ ಆ ತಿಂಗಳನ್ನು ಆಯ್ಕೆ ಮಾಡಿ. ನಂತರ Enter RC Number/RC No. ಎಂದಿರುತ್ತದೆ ಅಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. GO ಬಟನ್‌ ಮೇಲೆ ಕ್ಲಿಕ್‌ ಮಾಡಿ.
Annabhagya DBT Status Check Online
Anna Bhagya Amount Status
  • Step-5: ಅಂತಿಮವಾಗಿ ನಿಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಅಲ್ಲಿ ಕಾಣುತ್ತದೆ, ಅವರ ಆಧಾರ ಸಂಖ್ಯೆಯ ಕೊನೆಯ 4 ಸಂಖ್ಯೆ, ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ, ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಮೊತ್ತದ ವಿವರ ಅಲ್ಲಿ ಇರುತ್ತದೆ. ನೀವು Annabhagya DBT Status Check ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಬರಲಿದೆ ನೋಡಬಹುದು.
Annabhagya DBT Status Check Online 2023 @ahara.kar.nic.in
November Month Annabhagya DBT Status Check
  • Step-6: ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಮುಖ್ಯಸ್ಥರ ಆಧಾರ ಕಾರ್ಡ್‌ ಲಿಂಕ್‌ ಇರುವ ಅವರ ಬ್ಯಾಂಕ್‌ ಖಾತೆಗೆ ಸರ್ಕಾರ ಹಣ ವರ್ಗಾವಣೆ ಮಾಡಿರುವ ಮಾಹಿತಿ ಈ ಕೇಳಗಿನಂತೆ ಲಭ್ಯವಾಗುತ್ತದೆ.
ahara kar nic in dbt status

ಪ್ರಮುಖ ಲಿಂಕ್‌ಗಳು:
AnnaBhagya DBT Status Check Link:‌
Check Online
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/, ahara.kar.nic.in/status2/status_of_dbt.aspx

ಕೊನೆಯ ಮಾತು: ಅನ್ನಭಾಗ್ಯ ಯೋಜನೆಯ Anna Bhagya DBT Status ಅನ್ನು ನೀವು ಪರಿಶೀಲಿಸಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ Subscribe ಆಗಿರಿ. ಧನ್ಯವಾದಗಳು.

ಇತರೆ ಮಾಹಿತಿಗಳನ್ನು ಓದಿ

BPL ಕಾರ್ಡ್ ಇದ್ದವರು ಈ ಕೆಲಸ ಮಾಡಿ, ರದ್ದಾಗುತ್ತದೆ ನಿಮ್ಮ ರೇಷನ್ ಕಾರ್ಡ್‌..!

ಹೊಸ ರೇಷನ್‌ ಕಾರ್ಡ್‌ ಅರ್ಜಿದಾರರಿಗೆ ಗುಡ್‌ ನ್ಯೂಸ್

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಗೃಹಲಕ್ಷ್ಮೀ ಯೋಜನೆಯ 4ನೇ ಕಂತಿನ ಹಣ ಜಮಾ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment