Army Free ಕೋಚಿಂಗ್‌ಗಾಗಿ ಅರ್ಜಿ ಆಹ್ವಾನ | Army Free Coaching 2023 Karnataka Application Form

Army Free Coaching 2023 Karnataka: ಭಾರತೀಯ ಸೇನೆ/ಇತರ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. (ಬಾಲಕರಿಗೆ ಮಾತ್ರ).

Army Free Coaching 2023 Karnataka ಸಾಮಾನ್ಯ ಅರ್ಹತೆಗಳು:

1. ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಮಿತಿ: (ಪವರ್ಗ-1 ಕ್ಕೆ ರೂ.2.50 ಲಕ್ಷಗಳು ಹಾಗೂ ಪುವರ್ಗ-2(ಎ), 3(ಎ) ಮತ್ತು 3(ಬಿ) ಗಳಿಗೆ ರೂ.1.00 ಲಕ್ಷಗಳು)

2. ಕನಿಷ್ಠ ವಿದ್ಯಾರ್ಹತೆ: ಅಭ್ಯರ್ಥಿಯು 10ನೇ ತರಗತಿಯನ್ನು ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಕ 33 ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು.

3. ವಯೋಮಿತಿ: ಜನ್ಮ ದಿನಾಂಕ ಮತ್ತು ವಯಸ್ಸು (10ನೇ ತರಗತಿಯ ಅಂಕ ಪಟ್ಟಿಯಲ್ಲಿರುವಂತೆ) ಡಿಸೆಂಬರ್ 31, 2023 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸನ್ನು ಪರಿಗಣಿಸಲಾಗುವುದು. ಅಭ್ಯರ್ಥಿಯು 01 ಜನವರಿ 2003 ರಿಂದ 01 ಜುಲೈ
2006 (17 ವರ್ಷದಿಂದ 21 ವರ್ಷ) ರ ದಿನಾಂಕಗಳ ನಡುವೆ ಜನಿಸಿರಬೇಕು.

4. ತರಬೇತಿ ನೀಡುವ ಸ್ಥಳಗಳು: ತರಬೇತಿಯನ್ನು ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುವುದು, ಅಭ್ಯರ್ಥಿಗಳು ಸದರಿ ಮೂರು ಜಿಲ್ಲೆಗಳಲ್ಲಿ ತರಬೇತಿಗೆ ಆಯ್ಕೆ ಮಾಡಿಕೊಳ್ಳುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಅರ್ಜಿಯನ್ನು ಖುದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬಹುದು.

5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ನೇ ಸೆಪ್ಟೆಂಬರ್ 2023

Army Free Coaching 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 21-08-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-09-2023

ಪ್ರಮುಖ ಲಿಂಕ್’ಗಳು:
ಸಂಕ್ಷೀಪ್ತ ಅಧಿಸೂಚನೆ: ಡೌನ್‌ಲೋಡ್
ಅಭ್ಯರ್ಥಿಗಳಿಗೆ ಸೂಚನೆಗಳು: ಡೌನ್‌ಲೋಡ್
ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: bcwd.karnataka.gov.in

ಸಹಾಯವಾಣಿ:
1) ದಕ್ಷಿಣ ಕನ್ನಡ ಜಿಲ್ಲೆ: ದೂ.ಸಂ. 0824-2225078.
2) ಉಡುಪಿ ಜಿಲ್ಲೆ: ದೂ.ಸಂ. 0820-2574881.
3) ಉತ್ತರ ಕನ್ನಡ: ದೂ.ಸಂ. 08382-226589.
4) ಕೇಂದ್ರ ಕಛೇರಿ: 8050770004.

(ಸಮಯ ಬೆಳಗ್ಗೆ 10.00 ರಿಂದ ಸಂಜೆ 5.30ರ ವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ).

ಸರ್ಕಾರ ಇತರೆ ಯೋಜನೆಗಳು

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ಅನ್ನಭಾಗ್ಯ: ಆಗಸ್ಟ್‌ ತಿಂಗಳ ಹಣ ಬಿಡುಗಡೆ, DBT Status ಚೆಕ್‌ ಮಾಡಿ

✅ರೇಷನ್‌ ಕಾರ್ಡ್‌ ತಿದ್ದುಪಡಿ, ಸದಸ್ಯರ ಸೇರ್ಪಡೆಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment