ಎಲ್ಲರಿಗೂ ನಮಸ್ಕಾರ, ಬಿಪಿಎಲ್ ಕಾರ್ಡ್ ಪಡೆದಿರುವ ಅನರ್ಹ ಫಲಾನುಭವಿಗಳಿಗೆ ಬಿಗ್ ಶಾಕ್. ಸುಳ್ಳು ದಾಖಲೆ ನೀಡಿ BPL ಕಾರ್ಡ್ (BPL Ration Card Cancellation) ಪಡೆದವರ ಪತ್ತೆ ಮಾಡಲು ಸರ್ಕಾರದಿಂದ ಸಮಿತಿ ರಚನೆ..! ಆಹಾರ ಸಚಿವರಾದ ಕೆ.ಎಚ್. ಮುನಿಯಪ್ಪ ಅವರಿಂದ ಮಹತ್ವದ ಮಾಹಿತಿ.
ಆರ್ಥಿಕವಾಗಿ ಸಧೃಡವಾಗಿದ್ದರು ಸಹ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಅನರ್ಹ BPL ಕಾರ್ಡ್ ಗಳನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ, ನೇರವಾಗಿ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
BPL Ration Card Cancellation:
BPL ಕಾರ್ಡ್ ಹೊಂದಿರುವರಲ್ಲಿ ಸುಮಾರು 20 ಲಕ್ಷ ಅನರ್ಹ ಫಲಾನುಭವಿಗಳಿದ್ದಾರೆ, ಇವರೆಲ್ಲರೂ ಎಪಿಎಲ್ ಕಾರ್ಡ್ ಹೊಂದಿರಬೇಕಿತ್ತು. ಆದರೆ ಈ ಹಿಂದೆ ಅನರ್ಹ BPL ರೇಷನ್ ಕಾರ್ಡ್ (BPL Ration Card Cancellation) ಗಳನ್ನು ಪತ್ತೆ ಹಚ್ಚಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಯಿತು. ಹಾಗಾಗಿ, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ, ಗ್ರಾಮ ಲೆಕ್ಕಿಗ ಸೇರಿದಂತೆ ಮುಂತಾದವರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಇವರುಗಳ ಮೂಲಕ ಖುದ್ದಾಗಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 91 ಸಾವಿರ ಅರ್ಜಿಗಳನ್ನು ಪರಿಶೀಲಿಸಿ ರೇಷನ್ ಕಾರ್ಡ್ ನೀಡುವುದು ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ BPL ರೇಷನ್ ಕಾರ್ಡ್ ವಿತರಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಕೇಂದ್ರ ಸರ್ಕಾರದ ಮಾನದಂಡಗಳನ್ನು ಮುಂದಿಟ್ಟುಕೊಂಡು ಪರಿಷ್ಕರಣೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ್ ಇರುವುದಾಗಿ ಅಂದಾಜಿಸಲಾಗಿದೆ. ಅನರ್ಹ ಪಡಿತರ ಚೀಟಿ ಹೊಂದಿರುವವರನ್ನು ಪತ್ತೆ ಹಚ್ಚಲು ಈ ಹಿಂದೆ ಅನರ್ಹ ಬಿಪಿಎಲ್ ಕಾರ್ಡುದಾರರ ಚೀಟಿ ಪರಿಷ್ಕರಣೆ ಪ್ರಾರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು ಇದೀಗ ಹೊಸದಾಗಿ ಮನೆಮನೆ ಪರಿಶೀಲಿಸಲು ಸರ್ಕಾರ ನಿರ್ಧಾರ ಮನೆ ಮನೆಗೆ ತೆರಳಿ ಅವರು ಹೊಂದಿರುವ ಸೌಕರ್ಯಗಳನ್ನು ಆಧರಿಸಿ ಅವರ ಬಿಪಿಎಲ್ ಅರ್ಹತೆ ನಿರ್ಧಾರ ಒಂದು ವೇಳೆ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ BPL ಬದಲಾಗಿ APL ಕಾರ್ಡ್ ವಿತರಣೆ ಮಾಡಲಾಗುವುದು. ತದನಂತರ ಹೊಸದಾಗಿ BPL ರೇಷನ್ ವಿತರಣೆ ಆರಂಭ ಎಂದು ಸಚಿವರಾದ ಮುನಿಯಪ್ಪನವರು ತಿಳಿಸಿದ್ದಾರೆ.
ಸರ್ಕಾರ ಇತರೆ ಯೋಜನೆಗಳು:
Today Gold Rate: ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಗಮನಿಸಿ..?

