ಎಲ್ಲರಿಗೂ ನಮಸ್ಕಾರ, ಸರ್ಕಾರವು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB) ಮೂಲಕ ರೈತರಿಗೆ ಹಲವಾರು ಸಬ್ಸಿಡಿ ಯೋಜನೆ (Govt Subsidy Scheme) ಗಳನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ, ರೈತರು ಶೇಡ್ ನೆಟ್, ಹಸಿರು ಮನೆ, ಹಣ್ಣಿನ ಕೃಷಿ, ಪಾಲಿಹೌಸ್ ಕೃಷಿ, ಶೀತಲೀಕರಣ ಘಟಕ ಮತ್ತು ಅಣಬೆ ಕೃಷಿ ಸ್ಥಾಪನೆಗೆ ಶೇಕಡಾ 50 ರವರೆಗೆ ರೈತರು ಸಬ್ಸಿಡಿ ಪಡೆಯಲು ಅರ್ಹ ಮತ್ತು ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು.
ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು:
ಶೇಡ್ ನೆಟ್, ಹಸಿರು ಮನೆ ಮತ್ತು ಪಾಲಿಹೌಸ್ ಕೃಷಿ: ಈ ರೀತಿಯ ಕೃಷಿಗೆ ಶೇಕಡಾ 50 ರವರೆಗೆ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿದೆ.
ಶೀತಲೀಕರಣ ಘಟಕ ಮತ್ತು ಅಣಬೆ ಕೃಷಿ: ಶೀತಲೀಕರಣ ಘಟಕ ಸ್ಥಾಪನೆಗೆ ಶೇಕಡಾ 30 ರಿಂದ 50 ರ ವರೆಗೆ ಮತ್ತು ಅಣಬೆ ಕೃಷಿಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಕೃಷಿ ಸಂಬಂಧಿತ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಹಣ್ಣು ಮತ್ತು ಹೂವುಗಳ ಕೃಷಿಯ ಜೊತೆಗೆ ಸಂಬಾರ ಪದಾರ್ಥಗಳು, ಆರೊಮ್ಯಾಟಿಕ್ ಮತ್ತು ಔಷಧೀಯ ಸಸ್ಯಗಳ ಕೃಷಿಗೂ ಸಬ್ಸಿಡಿ ದೊರೆಯಲಿದೆ.
ತೆರೆದ ಜಮೀನಿನಲ್ಲಿ ಹಣ್ಣಿನ ಕೃಷಿ: ನೆಲ್ಲಿಕಾಯಿ, ಮಾವು, ಪೇರಲದಂತಹ ಹಣ್ಣುಗಳನ್ನು ಬೆಳೆಯುವ ರೈತರಿಗೆ ಶೇಕಡಾ 40 ರ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
Govt Subsidy Scheme ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಅರ್ಜಿದಾರರ ಪ್ಯಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಪಾಲುದಾರಿಕೆ ಸಂಸ್ಥೆಯ ನೋಂದಣಿ (ಅನ್ವಯಿಸಿದರೆ)
- ಕಂಪನಿ, ಸೊಸೈಟಿ, ಟ್ರಸ್ಟ್ ಇತ್ಯಾದಿಗಳ ನೋಂದಣಿ (ಅನ್ವಯಿಸಿದರೆ)
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ರೈತರು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್ www.nhb.gov.in ಗೆ ಭೇಟಿ ನೀಡುವ ಮೂಲಕ Govt Subsidy Scheme ಅರ್ಜಿ ಸಲ್ಲಿಸಬಹುದು. ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಆಸಕ್ತ ರೈತರು ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.
ಅಥವಾ, ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಸರ್ಕಾರ ಇತರೆ ಯೋಜನೆಗಳು:

