ಪದವೀಧರ ಪ್ರಾಥಮಿಕ ಶಿಕ್ಷಕರ 1:2 ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟ | GPSTR Document Verification List 2022

GPSTR Document Verification List 2022: ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಸಂಬಂಧ ದಿನಾಂಕ: 21-05-2022 ಮತ್ತು 22-05-2022 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ವೈಯಕ್ತಿಕ ಅಂಕ ಮತ್ತು ಪದವಿ, ಬಿ.ಇಡಿ/ಡಿ.ಎಲ್.ಇಡಿ/TET/CTET ಅಂಕಗಳನ್ನು ಹಾಗೂ CET ಅಂಕಗಳನ್ನು ನಿಯಮಾನುಸಾರ ಪರಿಗಣಿಸಿ, Derived Percentage ನೊಂದಿಗೆ ದಿನಾಂಕ 17.08.2022 ರಂದು ಪ್ರಕಟಿಸಲಾಗಿತ್ತು.

ನೇಮಕಾತಿ ಅಧಿಸೂಚನೆಯಲ್ಲಿರುವಂತೆ ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿದ ಅಭ್ಯರ್ಥಿಯ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ತಂದೆ ಮತ್ತು ತಾಯಿಯ ಹೆಸರು, ಜನ್ಮದಿನಾಂಕ, ಪದವಿ, ಬಿ.ಇಡಿ/ಡಿ.ಎಲ್.ಇಡಿ ಮತ್ತು CTET/TET ಅಂಕಗಳಿಗೆ ಸಂಬಂಧಿಸಿದಂತೆ ಮಾತ್ರ ತಿದ್ದುಪಡಿಗೆ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಖುದ್ದಾಗಿ ಈ ಕಛೇರಿಯಲ್ಲಿ ಮನವಿ ಸಲ್ಲಿಸಲು ದಿನಾಂಕ:18.08.2022 ರಿಂದ 24.08.2022 ಅವಕಾಶ ಕಲ್ಪಿಸಲಾಗಿತ್ತು.

GPSTR Document Verification List 2022

ಅದರಂತೆ ಅಭ್ಯರ್ಥಿಗಳಿಂದ ತಿದ್ದುಪಡಿ ಕೋರಿ ಪೂರಕ ದಾಖಲೆಗಳೊಂದಿಗೆ ಸಲ್ಲಿಕೆಯಾದ ಮನವಿಗಳನ್ನು (ನೇಮಕಾತಿ ಅಧಿಸೂಚನೆಯಲ್ಲಿ ತಿದ್ದುಪಡಿಗೆ ಅವಕಾಶವಿರುವ ಅಂಶಗಳ ಕುರಿತಾಗಿರುವ ಮನವಿಗಳು ಮಾತ್ರ) ಪರಿಗಣಿಸಿ, ಸಿ.ಎ.ಸಿ ದತ್ತಾಂಶದಲ್ಲಿ ಇಂದೀಕರಿಸಲಾಗಿದೆ. ಅಭ್ಯರ್ಥಿಗಳ ಮನವಿಗಳಂತೆ ಸಿ.ಎ.ಸಿ ತಂತ್ರಾಂಶದಲ್ಲಿ ಇಂದೀಕರಿಸಿದ್ದರಿಂದ ಒಟ್ಟು 1325 ಅಭ್ಯರ್ಥಿಗಳ Derived Percentage ನಲ್ಲಿ ವ್ಯತ್ಯಾಸವಾಗಿರುತ್ತದೆ. ಅರ್ಜಿ ಸಂಖ್ಯೆ : 5184412 ಮತ್ತು 5139093 ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿಯಲ್ಲಿ CTET ಅಂಕಗಳನ್ನು ತಪ್ಪಾಗಿ ನಮೂದಿಸಿದ್ದರಿಂದ ಹಾಗೂ ಅಭ್ಯರ್ಥಿಗಳ ಮನವಿಯಂತೆ ಪ್ರಮಾಣಪತ್ರದಂತೆ ಅಂಕಗಳನ್ನು ದತ್ತಾಂಶದಲ್ಲಿ ಇಂದೀಕರಿಸಿದ ನಂತರ ನಿಯಮಾನುಸಾರ ಕನಿಷ್ಠ ಅರ್ಹತಾ ಅಂಕಗಳಿಂತ ಕಡಿಮೆಯಾದ ಕಾರಣ Reject ಆಗಿರುತ್ತಾರೆ.

ನೇಮಕಾತಿ ಪರೀಕ್ಷೆಯ ಪತ್ರಿಕೆ-2 ಮತ್ತು ಪತ್ರಿಕೆ-3ರ ವಿವರಣಾತ್ಮಕ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಮರುಎಣಿಕೆ / ಮರುಪರಿಶೀಲನೆ / ಮರುಮೌಲ್ಯಮಾಪನ ಮಾಡುವಂತೆ ಖುದ್ದಾಗಿ ಮತ್ತು ಅಂಚೆ ಮೂಲಕ 1213 ಮನವಿಗಳು ಸಲ್ಲಿಕೆಯಾಗಿದ್ದು, ಸದರಿ ಮನವಿಗಳನ್ನು ಪರಿಗಣಿಸಲು ಅಧಿಸೂಚನೆಯಂತೆ ನಿಯಮಗಳಲ್ಲಿ ಅವಕಾಶವಿಲ್ಲದ ಕಾರಣ ಪರಿಗಣಿಸಿರುವುದಿಲ್ಲ.

ಉತ್ತರಪತ್ರಿಕೆಗಳಲ್ಲಿ ತಮ್ಮ ವೈಯಕ್ತಿಕ ಗುರುತುಗಳನ್ನು ಬಹಿರಂಗಪಡಿಸಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಇನ್ನಿತರ ಕಾರಣಗಳಿಗಾಗಿ 60 ಅಭ್ಯರ್ಥಿಗಳನ್ನು 12 ಅನುಪಾತದ ಪಟ್ಟಿಗೆ ಪರಿಗಣಿಸದೇ ಕೈಬಿಡಲಾಗಿದೆ. ಈ ಮೇಲ್ಕಂಡ ಅಂಶಗಳನ್ನು ಪರಿಗಣಿಸಿ, ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮೂರೂ ಪತ್ರಿಕೆಗಳಲ್ಲಿ

ಅಭ್ಯರ್ಥಿಗಳು ಗಳಿಸಿದ ಅಂಕಗಳು ಮತ್ತು ಶೈಕ್ಷಣಿಕ ಅರ್ಹತೆಯ ಅಂಕಗಳನ್ನು ನಿಯಮಾನುಸಾರ ಮೆರಿಟ್‌ಗೆ ಪರಿಗಣಿಸಿ, ಪ್ರಚಲಿತ ಆಯ್ಕೆ ನಿಯಮಗಳು ಮತ್ತು ಮಾನದಂಡಗಳನ್ನು ಅನುಸರಿಸಿ, ಸಿದ್ಧಪಡಿಸಿರುವ 1:2 ಅನುಪಾತದ ಪರಿಶೀಲನಾ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ದಿನಾಂಕ:27-09-2022 ರಂದು ಬೆಂಗಳೂರು ವಿಭಾಗದ ಜಿಲ್ಲೆಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಿದೆ.

ಉಳಿದಂತೆ ದಿನಾಂಕ:28-09-2022ರ ಸಂಚ ಬೆಳಗಾವಿ ವಿಭಾಗದ ಜಿಲ್ಲೆಗಳ ಪಟ್ಟಿ ದಿನಾಂಕ:29-09-2022ರ ಸಂಜೆ ಮೈಸೂರು ಹಾಗೂ ಕಲ್ಬುರ್ಗಿ ವಿಭಾಗದ ಜಿಲ್ಲೆಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗುವುದು.

1:2 ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರ ಕಛೇರಿಯಲ್ಲಿ ತಮ್ಮ ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗುವುದು. ಈ ಸಂಬಂಧ ವೇಳಾಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ದಿನಾಂಕ:30-09-2022ರಂದು ಪ್ರಕಟಿಸಲಾಗುವುದು.

Leave a Comment