ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅಧಿಸೂಚನೆ ಪ್ರಕಟ | Karnataka TET Exam 2022 Notification

Telegram Group Join Now
WhatsApp Group Join Now

Karnataka TET Exam 2022 Notification: 2022 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (KAR TET 2022) ಸಂಬಂಧಿಸಿದಂತೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಗುರುವಾರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌-ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನವೆಂಬರ್ 06 ರಂದು ನಡೆಸಲಿದ್ದು, ಸೆಪ್ಟೆಂಬರ್ 30 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು . KARTET Exam 2022 ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

Karnataka TET Exam 2022 Notification

ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೇಳಗೆ ಅಧಿಕೃತ ಅಧಿಸೂಚನೆ ನೀಡಲಾಗಿದೆ ಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಂಡು, ಕೂಲಂಕಷವಾಗಿ ಓದಿ ಅರ್ಥೈಸಿಕೊಂಡು, ಅದರಂತೆ ಸೂಕ್ತ ಸಿದ್ಧತೆಯೊಂದಿಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿ.

1 ರಿಂದ 5ನೇ ತರಗತಿ (ಪ್ರಾಥಮಿಕ ಹಂತ) ಶಿಕ್ಷಕರಾಗಲು ಅರ್ಹತೆ

 • ಪಿಯುಸಿ/ ಸೀನಿಯರ್ ಸೆಕೆಂಡರಿ / ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.50 ಅಂಕಗಳಿಸಿರಬೇಕು. ಜೊತೆಗೆ ಈ ಕೆಳಗಿನ ವಿದ್ಯಾರ್ಹತೆಗಳಿರಬೇಕು.
 • ಎರಡು ವರ್ಷಗಳ D.El.Ed ಕೋರ್ಸ್ ಪಾಸಾದವರು ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು. ಅಥವಾ
 • ನಾಲ್ಕು ವರ್ಷದ B.El.Ed ತೇರ್ಗೆಡೆ ಹೊಂದಿರುವವರು ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅಥವಾ
 • ಎರಡು ವರ್ಷಗಳ ಡಿಪ್ಲೊಮ ಇನ್‌ ಎಜುಕೇಶನ್ ತೇರ್ಗಡೆ ಹೊಂದಿರುವವರು ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅಥವಾ
 • ಪದವಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ D.L.Ed ಕೋರ್ಸಿನ ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊಂದಿರುವವರು ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

6 ರಿಂದ 8ನೇ ತರಗತಿ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಅರ್ಹತೆ

 • ಪದವಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸರಬೇಕು ಜೊತೆಗೆ ಈ ಕೆಳಗಿನ ವಿದ್ಯಾರ್ಹತೆಗಳನ್ನು ಪಡೆದಿರಬೇಕು
 • ಎರಡು ವರ್ಷಗಳ D.El.Ed ಕೋರ್ಸಿನ (ಯಾವ ಹೆಸರಿನಿಂದ ಕರೆಯುವರೋ ಆ ಹೆಸರಿನ) ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊಂದಿರುವವರು ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅಥವಾ
 • ಎರಡು ವರ್ಷದ B.Ed ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಅಂತಿಮ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು. ಅಥವಾ
 • ಪಿಯುಸಿ/ ಸೀನಿಯರ್ ಸೆಕೆಂಡರಿ ವಿದ್ಯಾರ್ಹತೆಯಲ್ಲಿ ಶೇ.50 ಅಂಕಗಳಿಸಿರಬೇಕು. ಹಾಗೂ 4 ವರ್ಷಗಳ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್‌ನಲ್ಲಿ (B.El.Ed) ತೇರ್ಗಡೆ ಹೊಂದಿರುವವರು ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅಥವಾ
 • 4 ವರ್ಷಗಳ ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅಥವಾ
 • ಪದವಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷದ ಬಿ.ಇಡಿ(ವಿಶೇಷ ಶಿಕ್ಷಣ) ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಟಿಇಟಿ ಪರೀಕ್ಷೆ ಬರೆಯಬಹುದು.

ಅರ್ಜಿ ಶುಲ್ಕ:

ಪ್ರವರ್ಗಪತ್ರಿಕೆ-1 ಅಥವಾ ಪತ್ರಿಕೆ-2 (ಯಾವುದಾದ್ರೆ ಒಂದು ಮಾತ್ರ)ಪತ್ರಿಕೆ-1 ಹಾಗೂ ಪತ್ರಿಕೆ-2 (ಎರಡೂ ಪತ್ರಿಕೆ)
ಸಾಮಾನ್ಯವರ್ಗ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ರೂ. 700ರೂ. 1000
ಪ.ಜಾ./ಪ.ವರ್ಗ/ಪ್ರವರ್ಗ-1 ಅಭ್ಯರ್ಥಿಗಳಿಗೆ  ರೂ. 350ರೂ. 500
ವಿಶೇಷ ಅಗತ್ಯವುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

Karnataka TET Exam 2022 Notification ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 01-09-2022
 • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-09-2022
 • ಶುಲ್ಕ ಪಾವತಿಸಲು ಕೊನೆ ದಿನಾಂಕ : 30-09-2022
 • ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವ ಅವಧಿ : 21-10-2022
 • ಪರೀಕ್ಷಾ ದಿನಾಂಕ : 06-11-2022

KAR-TET 2022 ಪರೀಕ್ಷಾ ದಿನಾಂಕ

ಪರೀಕ್ಷಾ ದಿನಾಂಕಪತ್ರಿಕೆಸಮಯ
06-11-2022ಪತ್ರಿಕೆ-1ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆವರೆಗೆ.
06-11-2022ಪತ್ರಿಕೆ-2ಮಧ್ಯಾಹ್ನ 2 ರಿಂದ 4.30 ರ ವರೆಗೆ.

Karnataka TET Exam 2022 Notification ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್‌ ಮಾಡಿ
ಪ್ರಕಟಣೆಇಲ್ಲಿ ಕ್ಲಿಕ್‌ ಮಾಡಿ
ಆಭ್ಯರ್ಥಿಗಳಿಗೆ ಸೂಚನೆಗಳುಆಭ್ಯರ್ಥಿಗಳಿಗೆ ಸೂಚನೆಗಳು 
ಆನ್‌ಲೈನ್ ಅರ್ಜಿಇಲ್ಲಿ ಕ್ಲಿಕ್‌ ಮಾಡಿ

Telegram Group Join Now
WhatsApp Group Join Now

Leave a Comment

error: Content is protected !!