ಗೃಹಲಕ್ಷ್ಮಿ ಯೋಜನೆ: ಈ ಕಂತಿನ 2,000 ರೂ. ಹಣ ಜಮಾ ಯಾವಾಗ…? | Gruhalakshmi 7th Installment Amount Credit Date

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಬ್ಯಾಂಕ್ ಖಾತೆಗೆ 7 ನೇ ಕಂತಿನ ಹಣ (Gruhalakshmi 7th Installment) ಯಾವಾಗ ಜಮಾ ಆಗುತ್ತದೆ ಎಂಬ ಸುದ್ದಿಯನ್ನು ಇಲ್ಲಿ ನೀಡಲಾಗಿದೆ ಓದಿರಿ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಜನ ಮೆಚ್ಚಿದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು. ಮಹಿಳಾ ಸಬಲೀಕರಣದ ದೃಷ್ಠಿಯಿಂದ ಈ ಯೋಜನೆಯನ್ನು ಅನುಷ್ಠಾಣಕ್ಕೆ ತರಲಾಗಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ಕಡುಬಡವ ಕುಟುಂಬಗಳಿಗೆ ಬರಗಾಲ ಮತ್ತು ಬೆಲೆ ಏರಿಕೆ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ವರದಾನವಾಗಿದೆ. ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಲಗುತ್ತಿದೆ.

Gruhalakshmi 7th Installment Amount:

ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯನ್ನು 2023 ರ ಆಗಸ್ಟ 30 ರಿಂದ ಅನುಷ್ಠಾಣಕ್ಕೆ ತರಲಾಗಿದ್ದು, ಅವತ್ತಿನಿಂದ ಈವರೆಗೆ 6 ಕಂತುಗಳ 1,2000 ರೂ. ಹಣವನ್ನು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. 7 ನೇ ಕಂತಿನ 2,000 ರೂಪಾಯಿ ಹಣವನ್ನು ಕೂಡ ಜಮಾ ಮಾಡಲಿದ್ದಾರೆ.

ಸರ್ಕಾರದ ಈ ಹಿಂದೆ ಹೇಳಿದಂತೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಬಹುತೇಕ ಅರ್ಹ ಮನೆ ಯಜಮಾನಿಯರಿಗೆ 6 ಕಂತುಗಳ ಒಟ್ಟು 12 ಸಾವಿರ ರೂ. ಹಣ ಜಮಾ ಆಗಿದೆ.

ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಯೋಜನೆಯ (Gruhalakshmi 7th Installment) ಹಣ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಗೃಹಲಕ್ಷ್ಮೀಯರ ಖಾತೆಗಳಿಗೆ GruhaLakshmi DBT ಮೂಲಕ ವರ್ಗಾವಣೆ ಮಾಡಬಹುದು.

ನಿಮಗೆ ಹಣ ಬರದೆ ಇದ್ದಲ್ಲಿ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಗೃಹಲಕ್ಷ್ಮಿ DBT Status Check ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇತರೆ ಮಾಹಿತಿಗಳನ್ನು ಓದಿ:

ಅನ್ನಭಾಗ್ಯ ಯೋಜನೆ: DBT Status Check ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಹೊಸ ರೇಷನ್‌ ಕಾರ್ಡ್‌ ಅರ್ಜಿ ಆರಂಭ

Telegram Group Join Now
WhatsApp Group Join Now

1 thought on “ಗೃಹಲಕ್ಷ್ಮಿ ಯೋಜನೆ: ಈ ಕಂತಿನ 2,000 ರೂ. ಹಣ ಜಮಾ ಯಾವಾಗ…? | Gruhalakshmi 7th Installment Amount Credit Date”

Leave a Comment