ಗೃಹಲಕ್ಷ್ಮಿ ಯೋಜನೆ: 2,000 ರೂ. ಜಮಾ ಆಗಿದೇಯೆ..? ಚೆಕ್‌ ಮಾಡಿ | Mahiti Kanaja Gruhalakshmi Status 2024 Check @ mahitikanaja.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದಿರಾ? ನಿಮ್ಮ ಅರ್ಜಿ Approve ಆಗಿದೆಯಾ ಅಥವಾ Reject ಆಗಿದೆಯಾ ಎಂಬುದನ್ನು ತಿಳಿಯ ಬೇಕೆ? ಹಾಗಿದ್ದರೆ ಈ ಮಾಹಿತಿಯನೊಮ್ಮೆ ಓದಿ. Mahiti Kanaja Gruhalakshmi Status ಮಾಡುವ ಸುಲಭ ವಿಧಾನ ಇಲ್ಲಿ ನೀಡಲಾಗಿದೆ.

ಸರ್ಕಾರ ರಚನೆಯಾದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಕಾಂಗ್ರೇಸ್ ಪಕ್ಷ ತಿಳಿಸಿತ್ತು, ಅದರಂತೆ ಒಂದೊಂದಾಗಿ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಗೃಹಲಕ್ಷ್ಮೀ ಯೋಜನೆಯ ನಾಲ್ಕೈದು ಕಂತುಗಳ ಹಣ ಜಮ ಮಾಡಲಾಗಿದೆ. ನಿಮ್ಮ ಖಾತೆಗೆ ಎಷ್ಟು ಹಣ ಬಂದಿದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದು.

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿದೆ. ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಪ್ರತಿ ತಿಂಗಳು 2,000 ರೂ. ಜಮಾ ಮಾಡಲಾಗುತ್ತಿದೆ.

ವಿಧಾನ-1: Mahiti Kanaja Gruhalakshmi Status Check Online

ಆದಾಗ್ಯೂ ಕೆಲವು ಜನಮಾನಿ ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆ 2 ಸಾವಿರ ರೂ. ಹಣ ಬರದ ಕಾರಣ ಗೊಂದಲಗಿಡಾಗಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಈ ಕೇಳಗೆ ನೀಡಿರುವ ಸುಲಭ ವಿಧಾನದ ಮೂಲಕ ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್‌ ಮಾಡಿಕೊಳ್ಳಿ.

How To Check Mahiti Kanaja Gruhalakshmi Status?

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರು ಈ ಕೇಳಗಿನ ವಿಧಾನವನ್ನು ಅನುಸರಿಸಿ ಅರ್ಜಿ ಸ್ಟೇಟಸ್‌ ಚೆಕ್‌ ಮಾಡಿಕೊಳ್ಳಬಹುದು. ಅರ್ಜಿ Approve ಆಗಿದೆಯಾ ಅಥವಾ Reject ಆಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬಹುದು. ಹಾಗೂ ಗೃಹಲಕ್ಷ್ಮೀ ಯೋಜನೆಯ ಎಷ್ಟು ಕಂತಿನ 2000 ರೂ. ಹಣ ನಿಮಗೆ ಬಂದಿದೆ ಎಂಬುದಾಗಿ ತಿಳಿಯಬಹುದು.

Step-1: ಮೊದಲಿಗೆ ನಾವು ಕೇಳಗೆ ನೀಡಿರುವ Mahiti Kanaja Gruhalakshmi Status ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Step-2: Search Department ಎಂದಿರುತ್ತದೆ. ನೀವು Department of Women and Child Development ಎಂದು ಸರ್ಚ್‌ ಮಾಡಿ.

Step-3: ನಂತರ Department of Women and Child Development ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.

Step-4: ಮುಂದಿನ ಪುಟದಲ್ಲಿ ಎರಡು ಆಯ್ಕೆಗಳಿರುತ್ತದೆ Women and Child Department ಎಂಬುದನ್ನು ಆಯ್ಕೆ ಮಾಡಿ.

Step-5: ನಂತರ Gruhalakshmi Application Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-6: ಮತ್ತೊಂದು ಹೊಸ ಪುಟ ಓಪನ್‌ ಆಗುತ್ತದೆ. ಅಲ್ಲಿ Details of Gruhalakshmi Status ಎಂದಿರುತ್ತದೆ. ಅಲ್ಲಿ ನಿಮ್ಮ Ration Card Number ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-7: ಆಗ ನಿಮ್ಮ ಮುಂದೆ Gruhalakshmi Application Status ಕಾಣುತ್ತದೆ. ಅದರಲ್ಲಿ Approve ಅಥವಾ Reject ಆಗಿದೇಯಾ ಎಂಬುದನ್ನು ತಿಳಿದುಕೊಳ್ಳಬಹುದು. ಅಲ್ಲಿಯೇ Details ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-8: ನಿಮ್ಮ ಬ್ಯಾಂಕ್‌ ಖಾತೆಗೆ ಎಷ್ಟು ಕಂತುಗಳ ಹಣ ಜಮಾ ಆಗಿದೆ ಎಂಬ ಮಾಹಿತಿ ನಿಮ್ಮ ಮುಂದೆ ಕಾಣುತ್ತದೆ. ನಾಲ್ಕು ಕಂತುಗಳನ್ನು ಬಿಡುಗಡೆ ಮಾಡಲಾಗಿದೆ ಆದರೆ ಇದರಲ್ಲಿ 3 ಕಂತಿನ ಮಾಹಿತಿ ಮಾತ್ರ ಇದೆ. ಬೇರೆ ವಿಧಾನದ ಮೂಲಕ DBT Status ಚೆಕ್‌ ಮಾಡಬಹುದು. ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಚೆಕ್‌ ಮಾಡಬಹುದು. –> GruhaLakshmi DBT Status Check

Mahiti Kanaja Gruhalakshmi Status

ವಿಧಾನ-2: Gruhalakshmi DBT Status Check By DBT Karnataka App

ಗೃಹಲಕ್ಷ್ಮೀ ಯೋಜನೆಯ 2000 ಹಣ ವರ್ಗಾವಣೆ ಆಗಿರುವ ಮಾಹಿತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ DBT Karnataka App ಮೂಲಕ ಈ ಕೇಳಗೆ ನೀಡಲಾಗಿರುವ ವಿಧಾನವನ್ನು ಅನುಸರಿಸಿ ನಿಮ್ಮ Gruha Lakshmi DBT Status Check ಮಾಡಬಹುದು.

Step-1: ಮೊದಲನೆಯದಾಗಿ ಕೇಳಗೆ ನೀಡಿರುವ ಲಿಂಕ್‌ ಮೂಲಕ DBT Karnataka ಅಧಿಕೃತ App ಡೌನ್‌ಲೋಡ್‌ ಮಾಡಿಕೊಳ್ಳಿ.

DBT Karnataka App

Step-2: App ಓಪನ್‌ ಮಾಡಿ. ಅಲ್ಲಿ Enter Aadhaar Number ಎಂಬಲ್ಲಿ ಫಲಾನುಭವಿಯ ಆಧಾರ ಸಂಖ್ಯೆಯನ್ನು ಎಂಟರ್‌ ಮಾಡಿ. GET OTP ಎಂಬುದರ ಮೇಲೆ ಕ್ಲಿಕ್‌ ಮಾಡಿ.

Step-3: ಫಲಾನುಭವಿಯ ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. Enter OTP ಎಂದಿರುವಲ್ಲಿ ಆರು ಸಂಖ್ಯೆಗಳ OTP ಎಂಟರ್‌ ಮಾಡಿ. Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-4: ಫಲಾನುಭವಿಯ ವಯಕ್ತಿಕ ವಿವರ ನಿಮ್ಮ ಮುಂದೆ ಕಾಣುತ್ತದೆ. ಅಲ್ಲಿ ಮೊಬೈಲ್ ನಂಬರ್‌ ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ. ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-5: ನಂತರ Create mPIN ಎಂದಿರುತ್ತದೆ. ನಿಮ್ಮ ನೆನಪಿನಲ್ಲಿ ಉಳಿಯುವ ನಾಲ್ಕು ಅಂಕಿಗಳ mPIN ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-6: ನಂತರ ಅಲ್ಲಿ Select Beneficiary ಎಂದು ಬರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.

Step-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ ನೀವು Create ಮಾಡಿದ mPIN ಅನ್ನು ಎಂಟರ್‌ ಮಾಡಿ. LOGIN ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-8: ಮೊದಲನೇ ಆಯ್ಕೆ Payment Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-9: ಅಲ್ಲಿ ನಿಮ್ಮ ಮುಂದೆ Gruhalakshmi DBT Status Check ಮಾಡುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

Step-10: ನಿಮ್ಮ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2000 ರೂ. ಜಮಾ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ‌, ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುತ್ತದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.

Gruhalakshmi DBT Status Check Online 2024

Gruha Lakshmi Status Check Link 2023-24:

Mahiti Kanaja Gruhalakshmi Status 2024 Link: Check ಮಾಡಿ
DBT Karnataka App Link:‌ Download ಮಾಡಿ
Gruhalakshmi Amount Check Link ಅಧಿಕೃತ ವೆಬ್‌ಸೈಟ್:‌
https://mahitikanaja.karnataka.gov.in/, https://mahitikanaja.karnataka.gov.in/department

ಕೊನೆಯ ಮಾತು: GruhaLakshmi Status Check ಮಾಡಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ Subscribe ಆಗಿರಿ. ಧನ್ಯವಾದಗಳು.

Telegram Group Join Now
WhatsApp Group Join Now

Leave a Comment