ಗೃಹಲಕ್ಷ್ಮೀ ಯೋಜನೆ 7 ನೇ ಕಂತಿನ 2,000 ರೂ. ಹಣ ಜಮಾ ಆಗಿದೆ | Gruhalakshmi 7th Installment Credited, Gruhalakshmi DBT Status Check

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಬ್ಯಾಂಕ್ ಖಾತೆಗೆ 7 ನೇ ಕಂತಿನ ಹಣ (Gruhalakshmi 7th Installment Credited) ಜಮಾ ಆಗಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿರಿ.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು ಜನ ಮೆಚ್ಚುಗೆಯನ್ನು ಪಡೆದಿದೆ. ಮಹಿಳಾ ಸಬಲೀಕರಣಕ್ಕಾಗಿ ಅನುಷ್ಠಾಣಕ್ಕೆ ತರಲಾಗಿರುವ ಈ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಜಮಾ ಮಾಡಲಾಗುತ್ತಿದೆ.

ಈ ವರ್ಷ ಮಳೆಯಾಗದ ಕಾರಣದಿಂದ ಅನೇಕ ಬಡ ಕುಟುಂಬಗಳಿಗೆ ಸಮಸ್ಯೆ ಆಗಿತ್ತು, ಆದರೆ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ವರದಾನವಾಗಿದೆ. ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತಿದೆ.

Gruhalakshmi 7th Installment Credited:

ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯನ್ನು ಕರ್ನಾಟಕ ಸರ್ಕಾರವು ಆಗಸ್ಟ 30, 2023 ರಿಂದ ಜಾರಿಗೆ ತರಲಾಗಿದ್ದು, ಅಂದಿನಿಂದ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಖಾತೆಗಳಿಗೆ 6 ಕಂತುಗಳ ಹಣ ವರ್ಗಾವಣೆ ಮಾಡಲಾಗಿದೆ. ಜಿಲ್ಲಾವರು 7 ನೇ ಕಂತಿನ 2,000 ರೂಪಾಯಿ ಹಣವನ್ನು ಕೂಡ ಜಮಾ ಮಾಡಲಾಗಿದೆ.

ಸರ್ಕಾರ ಈ ಹಿಂದೆ ಹೇಳಿದಂತೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡುವುದಾಗಿದೆ ತಿಳಿಸಿತ್ತು ಆದರೆ ಮಾರ್ಚ್ 24 ರ ನಂತರ ಹಣ ಜಮಾ ಮಾಡಲಾಗಿದೆ.

Gruhalakshmi Scheme 7th Installment Credited SMS

ಅದರಂತೆ ಅರ್ಹ ಮನೆ ಯಜಮಾನಿಯರಿಗೆ 7 ಕಂತುಗಳ ಒಟ್ಟು 14 ಸಾವಿರ ರೂ. ಹಣ GruhaLakshmi DBT ಮೂಲಕ ವರ್ಗಾವಣೆ ಮಾಡಬಹುದು.

ಇನ್ನೂವೆಗೆ ನಿಮ್ಮ ಖಾತೆಗೆ ಒಂದೂ ಕಂತಿನ ಹಣ ಬರದೆ ಇದ್ದಲ್ಲಿ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಗೃಹಲಕ್ಷ್ಮಿ DBT Status Check ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇತರೆ ಮಾಹಿತಿಗಳನ್ನು ಓದಿ:

ಅನ್ನಭಾಗ್ಯ ಯೋಜನೆ: DBT Status Check ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment