ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್, ಗೃಹಲಕ್ಷ್ಮೀ ಯೋಜನೆಯ (Gruhalakshmi Scheme Amount) 4,000 ರೂ. ಹಣವು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜೂನ್ 9 ರಂದು ಜಮಾ ಆಗಿದೆ. ನಿಮಗೂ ಬಂದಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂ. ನೀಡುವುದಾಗಿ ಘೋಷಿಸಿದ್ದರು. ಅದರಂತೆ ಮನೆ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ 2,000 ರೂ. ಹಣವನ್ನು ವರ್ಗಾವಣೆ ಮಾಡುತ್ತಿದ್ದಾರೆ.
Gruhalakshmi Scheme Amount Credited:
ಗೃಹಲಕ್ಷ್ಮೀ ಯೋಜನೆಯ 19 ನೇ ಕಂತಿನ ಹಣವು ತಾಂತ್ರಿಕ ಕಾರಣದಿಂದಾಗಿ ಕೆಲವರಿಗೆ ಜಮಾ ಆಗಿರಲಿಲ್ಲ ಆದರೆ ಇಂದು 19 ಮತ್ತು 20 ಕಂತಿನ 4,000 ರೂ. ಹಣವು ಒಟ್ಟಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯವಾಗಿದೆ.
ಕೆಲವು ಜಿಲ್ಲೆಯ ಫಲಾನುಭವಿಗಳಿಗೆ ಖಾತೆಗೆ 09-06-2025 ರಂದು ಗೃಹಲಕ್ಷ್ಮೀ ಯೋಜನೆಯ ಎರಡು ಕಂತುಗಳ 4,000 ರೂ. ಒಟ್ಟಿಗೆ ಜಮಾ ಆಗಿದ್ದು, ಇನ್ನುಳಿದ ಜಿಲ್ಲೆಯ ಮಹಿಳೆಯರಿಗೆ ಹಂತ ಹಂತವಾಗಿ ಜಮಾ ಆಗಲಿದೆ. ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಹಣ ಜಮಾ ಆಗಿದೆಯಾ ಎಂಬುದನ್ನು DBT Status ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದರು ಯಾರಿಗೆ ಈ ಯೋಜನೆಯ ಹಣವು ಜಮಾ ಆಗಿರುವುದಿಲ್ಲ ಅಂತವರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಅಗಿದೇಯಾ ಎಂಬುದನ್ನು ಚೆಕ್ ಮಾಡಿಸಿಕೊಳ್ಳಿ. ಹಾಗೂ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳು ಇದ್ದರೆ ಅದನ್ನು ಬ್ಯಾಂಕ್ಗಳಲ್ಲಿ ಪರಿಹರಿಸಿಕೊಳ್ಳಬೇಕು. ಈ ಸಮಸ್ಯೆಗಳನ್ನು ಪರಿಹರಿಸಿಕೊಂಡಲ್ಲಿ ನಿಮ್ಮ ಖಾತೆಗೆ ಈ ಯೋಜನೆಯ ಹಣವು ಜಮಾ ಆಗಲಿದೆ.
Gruhalakshmi Scheme DBT Status Check: ಚೆಕ್ ಮಾಡಿ
ಇತರೆ ಮಾಹಿತಿಗಳು:

