ಎಲ್ಲರಿಗೂ ನಮಸ್ಕಾರ, ನೀವು ಕೂಡ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆ..? ಯಾರು Swavalambi Sarathi Scheme 2025 ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು..? ಅರ್ಜಿ ಸಲ್ಲಿಸಿದವರಿಗೆ ನಿಗಮದ ವತಿಯಿಂದ ಎಷ್ಟು ಸಹಾಯಧನ ಸಿಗಲಿದೆ..? ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವಾಗ..? ಎಂಬ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.
ಹಿಂದುಳಿದ ವರ್ಗಗಳಿಗೆ ಸೇರಿದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು.
Karnataka Swavalambi Sarathi Scheme 2025:
ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್ಗಳು ಮಂಜೂರು ಮಾಡುವ ಘಟಕ ವೆಚ್ಚದ ಶೇ.50 ರಷ್ಟು ಗರಿಷ್ಠ 3 ಲಕ್ಷ ರೂ. ಗಳ ಸಹಾಯಧನವನ್ನು (ಸಬ್ಸಿಡಿ) ನಿಗಮದಿಂದ ಬಿಡುಗಡೆ ಮಾಡುತ್ತಾರೆ.
ಸ್ವಾವಲಂಬಿ ಸಾರಥಿ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ 98,000 ರೂ. ಗಳು ಹಾಗೂ ಪಟ್ಟಣ ಪ್ರದೇಶದವರಿಗೆ 1,20,000 ರೂ. ಗಳ ಒಳಗಿರಬೇಕು.
Swawalambi Sarathi Yojana ವಯೋಮಿತಿ:
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು ಹಾಗೂ ಅರ್ಜಿದಾರರು ಲಘು ವಾಹನ ಚಾಲನ ಪರವಾನಗಿಯನ್ನು ಹೊಂದಿರಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2025
Swawalambi Sarathi Scheme Karnataka Application Link:
ಪ್ರಕಟಣೆ: ಡೌನ್ಲೋಡ್
Online Application: Apply ಮಾಡಿ
ಅಧಿಕೃತ ವೆಬ್ಸೈಟ್: dbcdc.karnataka.gov.in, sevasindhu.karnataka.gov.in
ಇತರೆ ಮಾಹಿತಿಗಳು:

