ಗೃಹಲಕ್ಷ್ಮೀ ಯೋಜನೆಯ DBT Status ಚೆಕ್‌ ಮಾಡಿ | Gruhalakshmi Scheme DBT Status Check Online @ DBT Karnataka App

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್, ಗೃಹಲಕ್ಷ್ಮೀ ಯೋಜನೆಯ 2,000 ರೂ. (Gruhalakshmi Scheme DBT Status) ಹಣವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯಾ ಎಂಬುದನ್ನು ಚೆಕ್‌ ಮಾಡಿಕೊಳ್ಳಿ.

ಕರ್ನಾಟಕ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಯಜಮಾನಿ ಮಹಿಳೆಯರ ಖಾತೆಗಳಿಗೆ ಪ್ರತಿ ತಿಂಗಳು 2,000 ರೂ. ಹಣವನ್ನು ಸಂದಾಯ ಮಾಡುತ್ತಿದ್ದಾರೆ.

Gruhalakshmi Scheme Amount Credited SMS

ಗೃಹಲಕ್ಷ್ಮೀ ಯೋಜನೆಯ ಹಣವನ್ನು ಹಂತ ಹಂತವಾಗಿ ಜಿಲ್ಲಾವಾರು ಜಮಾ ಮಾಡುತ್ತಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಗೂ ಹಣ ಜಮಾ ಆಗಿದೆಯಾ ಎಂಬುದನ್ನು DBT Status ಚೆಕ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

Gruhalakshmi Scheme DBT Status Check:

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ವರ್ಗಾವಣೆ ಆಗಿರುವ ಮಾಹಿತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ DBT Karnataka App ಮೂಲಕ ಈ ಕೇಳಗೆ ನೀಡಲಾಗಿರುವ ವಿಧಾನವನ್ನು ಅನುಸರಿಸಿ ನಿಮ್ಮ Gruha Lakshmi DBT Status Check ಮಾಡಬಹುದು.

Step-1: ಮೊದಲನೆಯದಾಗಿ ಕೇಳಗೆ ನೀಡಿರುವ ಲಿಂಕ್‌ ಮೂಲಕ DBT Karnataka ಅಧಿಕೃತ App ಡೌನ್‌ಲೋಡ್‌ ಮಾಡಿಕೊಳ್ಳಿ.

DBT Karnataka App

Step-2: App ಓಪನ್‌ ಮಾಡಿ. ಅಲ್ಲಿ Enter Aadhaar Number ಎಂಬಲ್ಲಿ ಫಲಾನುಭವಿಯ ಆಧಾರ ಸಂಖ್ಯೆಯನ್ನು ಎಂಟರ್‌ ಮಾಡಿ. GET OTP ಎಂಬುದರ ಮೇಲೆ ಕ್ಲಿಕ್‌ ಮಾಡಿ.

Gruhalakshmi-DBT-Status-Check-Step-3

Step-3: ಫಲಾನುಭವಿಯ ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. Enter OTP ಎಂದಿರುವಲ್ಲಿ ಆರು ಸಂಖ್ಯೆಗಳ OTP ಎಂಟರ್‌ ಮಾಡಿ. Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-4: ಫಲಾನುಭವಿಯ ವಯಕ್ತಿಕ ವಿವರ ನಿಮ್ಮ ಮುಂದೆ ಕಾಣುತ್ತದೆ. ಅಲ್ಲಿ ಮೊಬೈಲ್ ನಂಬರ್‌ ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ. ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-5: ನಂತರ Create mPIN ಎಂದಿರುತ್ತದೆ. ನಿಮ್ಮ ನೆನಪಿನಲ್ಲಿ ಉಳಿಯುವ ನಾಲ್ಕು ಅಂಕಿಗಳ mPIN ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-6: ನಂತರ ಅಲ್ಲಿ Select Beneficiary ಎಂದು ಬರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.

Gruhalakshmi Scheme DBT Status

Step-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ ನೀವು Create ಮಾಡಿದ mPIN ಅನ್ನು ಎಂಟರ್‌ ಮಾಡಿ. LOGIN ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-8: ಮೊದಲನೇ ಆಯ್ಕೆ Payment Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-9: ಅಲ್ಲಿ ನಿಮ್ಮ ಮುಂದೆ Gruhalakshmi DBT Status Check ಮಾಡುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

Step-10: ನಿಮ್ಮ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2000 ರೂ. ಜಮಾ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ‌, ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುತ್ತದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.

Gruhalakshmi DBT Status Check Online 2024
Gruhalakshmi Scheme DBT Status Check

Gruhalakshmi DBT Status Check ಪ್ರಮುಖ ಲಿಂಕ್‌ಗಳು:
DBT Karnataka App Link:‌ Download ಮಾಡಿ

ಇತರೆ ಮಾಹಿತಿ ಓದಿ:

ಅನ್ನಭಾಗ್ಯ ಯೋಜನೆಯ DBT ಹಣ ಜಮಾ ಆಗಿದೆ

PM Kisan DBT: PM ಕಿಸಾನ್ ಯೋಜನೆಯ 2,000 ರೂ. ಹಣ ಬಿಡುಗಡೆ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment