ಎಲ್ಲರಿಗೂ ನಮಸ್ಕಾರ, ನೀವು ಕೂಡಾ ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾ..? ನಿಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಲು ಸರ್ಕಾರದಿಂದ ಸಹಾಯಧನ ಪಡೆಯಬೇಕೆ? Ganga Kalyana Scheme 2025 ಎಷ್ಟು ಸಹಾಯಧನ ಸಿಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
Karnataka Ganga Kalyana Scheme 2025:
ಯೋಜನೆಯ ಹೆಸರು: ಗಂಗಾ ಕಲ್ಯಾಣ ಯೋಜನೆ
ಸಹಾಯಧನ ಮೊತ್ತ: 3.75 ಲಕ್ಷ ರೂ. ಮತ್ತು 4.75 ಲಕ್ಷ ರೂ.
ಗಂಗಾ ಕಲ್ಯಾಣ ಯೋಜನೆ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೈಯಕ್ತಿಕ ಕೊಳವೆ ಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಿ ರೈತರಿ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಯೋಜನೆಯಾಗಿದ್ದು, ಈ ಯೋಜನೆಯ ಅಡಿಯಲ್ಲಿ ಸಂಪೂರ್ಣ ಸಹಾಯಧನ ಪಡೆಯಬಹುದಾಗಿದೆ.
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ ಜನರಿಗೆ ವೈಯಕ್ತಿಕ ಕೊಳವೆ ಬಾವಿ ಕೊರೆಸಲು ಘಟಕ ವೆಚ್ಚ 4.75 ಲಕ್ಷ ರೂ. ಗಳಲ್ಲಿ 4.25 ಲಕ್ಷ ರೂ.ಗಳ ಸಹಾಯಧನ ನೀಡುತ್ತಾರೆ. ಹಾಗೂ ಇದರಲ್ಲಿ 75,000 ರೂ. ಗಳನ್ನು ವಿದ್ಯುದ್ದೀಕರಣಕ್ಕೆ ಎಸ್ಕಾಂಗಳಿಗೆ ಪಾವತಿ ಮಾಡುತ್ತಾರೆ. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂ. ಗಳ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ಮಂಜೂರು ಮಾಡುತ್ತಾರೆ.
ಇನ್ನುಳಿದ ಜಿಲ್ಲೆಗಳ ಜನರಿಗೆ ಘಟಕ ವೆಚ್ಚ 3.75 ಲಕ್ಷ ರೂ. ಗಳಲ್ಲಿ ಇದರಲ್ಲಿ 3.25 ಲಕ್ಷ ರೂ. ಸಹಾಯಧನವನ್ನು ಸರ್ಕಾರ ನೀಡುತ್ತದೆ. ಹಾಗೂ ಸಹಾಯಧನ ಮೊತ್ತದಲ್ಲಿ ಪ್ರತಿ ಕೊಳವೆ ಬಾವಿಗೆ 75,000 ರೂ. ಗಳನ್ನು ವಿದ್ಯುದ್ದೀಕರಣಕ್ಕೆ ಎಸ್ಕಾಂಗಳಿಗೆ ಪಾವತಿಸುತ್ತಾರೆ. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂ. ಗಳ ಸಾಲವನ್ನು ಶೇ.4 ಬಡ್ಡಿದರದಲ್ಲಿ ಮಂಜೂರು ಮಾಡುತ್ತಾರೆ. ಈ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಲು 1.2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ Farmer’s FRUIT ID ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು.
ತೆರೆದ ಬಾವಿ: ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ತೆರೆದ ಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
- ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
- ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ
ಸೂಚನೆ:
- ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
- ಅರ್ಜಿದಾರರು ಸಣ್ಣ /ಅತಿ ಸಣ್ಣ ಹಿಡುವಳಿದಾರ ರೈತರಾಗಿರಬೇಕು.
ಬೇಕಾಗುವ ದಾಖಲೆಗಳು:
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
- ಇತ್ತೀಚಿನ ಆರ್‌ಟಿಸಿ ಪ್ರತಿ
- ಸಣ್ಣ/ ಅತಿ ಸಣ್ಣ ಹಿಡುವಳಿದಾರ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಭೂ-ಕಂದಾಯ ಪಾವತಿಸಿದ ರಸೀದಿ
- ಸ್ವಯಂ ಘೋಷಣೆ ಪತ್ರ
- ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ
Karnataka Ganga Kalyana Scheme ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ಲಿಂಕ್‌ನ್ನು ಕೇಳಗೆ ನೀಡಲಾಗಿದೆ. ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
Karnataka Ganga Kalyana Scheme Online Application Link:
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sevasindhu.karnataka.gov.in, sevasindhuservices.karnataka.gov.in
Karnataka Ganga Kalyana Scheme Last Date 2025:
2025-2026 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
Free Borewell Scheme In Karnataka 2025 ಪ್ರಮುಖ ದಿನಾಂಕಗಳು:
- ಸಮಾಜ ಕಲ್ಯಾಣ ಇಲಾಖೆ ಅರ್ಜಿ ಸಲ್ಲಿಕೆ ಆರಂಭ: 07-08-2025
- ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅರ್ಜಿ ಸಲ್ಲಿಕೆ ಆರಂಭ: 18-08-2025
- ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-09-2025
- ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಯೋಜನೆಗಳ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-09-2025
Ganga Kalyana Scheme Karnataka Application Link 2025:
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sevasindhu.karnataka.gov.in
2023-24 ಮತ್ತು 2024-25 ಸಾಲಿನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ವಿಷೇಶ ಸೂಚನೆಗಳು:
- ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೊರ್ಟಲ್ ಮೂಲಕವೇ ಸಲ್ಲಿಸುವುದು.
- ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
- ಫಲಾಪೇಕ್ಷಿಗಳು ‘ಗ್ರಾಮ ಒನ್ʼ, ʼಬೆಂಗಳೂರು ಒನ್ʼ, ʼಕರ್ನಾಟಕ ಒನ್ʼ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಸಹಾಯವಾಣಿ ಸಂಖ್ಯೆ 9482-300-400 ಗೆ ಸಂಪರ್ಕಿಸಬಹುದು.
ಇತರೆ ಮಾಹಿತಿಗಳನ್ನು ಓದಿ:
ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ

