New Rules: ಅಕ್ಟೋಬರ್ 1 ರಿಂದ ಎಲ್‌ಪಿಜಿ ಗ್ಯಾಸ್, ರೈಲು ಟಿಕೆಟ್, ಯುಪಿಐನಲ್ಲಿ ಬದಲಾವಣೆ ಹೊಸ ನಿಯಮಗಳು ಜಾರಿ

ಬೆಂಗಳೂರು: ಸೆಪ್ಟೆಂಬರ್ ಮುಗಿಯಲು ದಿನಗಳು ಎಣಿಕೆ ಶುರುವಾಗಿದೆ. ಅಕ್ಟೋಬರ್ 1, 2025 ರಿಂದ ದೇಶದಲ್ಲಿ ಹಲವಾರು ಆರ್ಥಿಕ ಹಾಗೂ ಜೀವನೋಪಾಯ ಸಂಬಂಧಿತ ಹೊಸ ನಿಯಮಗಳು (New Rules) ಜಾರಿಗೆ ಬರಲಿವೆ. ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಿಂದ ಹಿಡಿದು ಯುಪಿಐ (UPI) ಸೇವೆಗಳ ತನಕ ಬದಲಾವಣೆಗಳು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

ಎಲ್‌ಪಿಜಿ ಗ್ಯಾಸ್ ದರ ಪರಿಷ್ಕರಣೆ:

ಪ್ರತಿ ತಿಂಗಳ ಮೊದಲ ದಿನದಂದೇ ಎಲ್‌ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಿಸುವ ಪದ್ಧತಿ ಇದೆ. ವಾಣಿಜ್ಯ ಸಿಲಿಂಡರ್‌ ದರಗಳು ಕಳೆದ ಕೆಲವು ತಿಂಗಳುಗಳಿಂದ ಇಳಿಕೆಯಾದರೂ, ಗೃಹಬಳಕೆ ಸಿಲಿಂಡರ್ ದರದಲ್ಲಿ ಬದಲಾವಣೆ ಕಾಣಲಾಗಿಲ್ಲ. ಅಕ್ಟೋಬರ್‌ನಲ್ಲಿ ದರ ಏರಿಕೆಯಾಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎಂಬುದರ ನಿರೀಕ್ಷೆಯಲ್ಲಿ ಗ್ರಾಹಕರು ಕಾದು ಕುಳಿತಿದ್ದಾರೆ.

New Rules: ರೈಲು ಟಿಕೆಟ್ ಬುಕಿಂಗ್‌ನಲ್ಲಿ ಆಧಾರ್ ಪ್ರಯೋಜನ:

ಅಕ್ಟೋಬರ್ 1ರಿಂದ ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ವಿಶೇಷ ಆದ್ಯತೆ ಸಿಗಲಿದೆ. ಇಂತಹ ಪ್ರಯಾಣಿಕರು ಟಿಕೆಟ್ ಬುಕಿಂಗ್ ಆರಂಭಕ್ಕೂ 15 ನಿಮಿಷ ಮುಂಚಿತವಾಗಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಉಳಿದ ಪ್ರಯಾಣಿಕರಿಗೆ ಬುಕಿಂಗ್ ಅವಕಾಶ 15 ನಿಮಿಷಗಳ ನಂತರ ಲಭ್ಯವಾಗಲಿದೆ. ಈ ನಿಯಮ ಪ್ರಯಾಣಿಕರಿಗೆ ಸುಗಮ ಸೇವೆ ನೀಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ.

ಯುಪಿಐನಲ್ಲಿ ಬದಲಾವಣೆ – ಕಲೆಕ್ಟ್ ರಿಕ್ವೆಸ್ಟ್ ಸೌಲಭ್ಯಕ್ಕೆ ಬ್ರೇಕ್:

ದೇಶದಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ಪಾವತಿ ವಿಧಾನ ಯುಪಿಐ (UPI)ಯಲ್ಲಿ ಪ್ರಮುಖ ಬದಲಾವಣೆ ಅಕ್ಟೋಬರ್‌ನಲ್ಲಿ ನಿರೀಕ್ಷಿಸಲಾಗಿದೆ. ಪಿಯರ್‌ ಟು ಪಿಯರ್ (P2P) ಸೇವೆಯಡಿಯಲ್ಲಿ ಇರುವ ‘ಕಲೆಕ್ಟ್ ರಿಕ್ವೆಸ್ಟ್’ ಫೀಚರ್ ಅನ್ನು ಎನ್‌ಪಿಸಿಐ ತೆಗೆದುಹಾಕುವ ಸಾಧ್ಯತೆ ಇದೆ.

  • ಇದರ ಮೂಲಕ ಒಬ್ಬ ಬಳಕೆದಾರ ಇನ್ನೊಬ್ಬರಿಗೆ ಹಣಕ್ಕಾಗಿ ಮನವಿ ಸಲ್ಲಿಸಬಹುದಾಗಿತ್ತು.
  • ಆದರೆ, ಈ ವಿಧಾನವನ್ನು ದುರುಪಯೋಗಪಡಿಸಿಕೊಂಡು ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಆರ್‌ಬಿಐ ಮಾನಿಟರಿ ಪಾಲಿಸಿ ನಿರ್ಧಾರಗಳು:

ಆರ್‌ಬಿಐ ಮಾನಿಟರಿ ಪಾಲಿಸಿ ಕಮಿಟಿ (MPC) ಸಭೆ ಪ್ರತಿ ಎರಡು ತಿಂಗಳಿಗೆ ಒಮ್ಮೆ ನಡೆಯುತ್ತದೆ. ಆಗಸ್ಟ್‌ನಲ್ಲಿ ನಡೆದ ಸಭೆಯ ಬಳಿಕ, ಸೆಪ್ಟೆಂಬರ್ 29 ರಿಂದ ಮೂರು ದಿನ ಸಭೆ ನಡೆಯಲಿದೆ. ಇದರ ನಿರ್ಧಾರಗಳು ಅಕ್ಟೋಬರ್ 1ರಂದು ಹೊರಬೀಳಲಿದ್ದು, ಬಡ್ಡಿದರ ಸೇರಿದಂತೆ ಆರ್ಥಿಕ ನೀತಿಗಳಲ್ಲಿ ಬದಲಾವಣೆಗಳ ಸಾಧ್ಯತೆ ಇದೆ.

ಒಟ್ಟಾರೆ, ಅಕ್ಟೋಬರ್ 2025 ರಿಂದ ಗೃಹಬಳಕೆ ವೆಚ್ಚ, ಡಿಜಿಟಲ್ ಪಾವತಿ ಪದ್ಧತಿ, ರೈಲು ಪ್ರಯಾಣ ಹಾಗೂ ಆರ್ಥಿಕ ನೀತಿಗಳಲ್ಲಿ (New Rules) ಬದಲಾವಣೆಗಳು ನಿಮ್ಮ ಜೀವನಶೈಲಿಯ ಮೇಲೆ ನೇರವಾಗಿ ಪರಿಣಾಮ ಬೀರುವಂತಿದೆ.

ಇತರೆ ಮಾಹಿತಿಗಳನ್ನು ಓದಿ:

ವಾಹನ ಖರೀದಿಸಲು 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಸಲ್ಲಿಸಿ

ಶೇ.50% ಸಬ್ಸಿಡಿ: ವೃತ್ತಿ ಪ್ರೋತ್ಸಾಹ ಯೋಜನೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿ

SBI ವಿದ್ಯಾರ್ಥಿವೇತನ 2025, ಅರ್ಜಿ ಸಲ್ಲಿಸಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment