PM Ujjwala Yojana: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ. ಇಂತಹ ಯೋಜನೆಗಳ ಲಾಭವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಯಾವುದು ಈ ಯೋಜನೆ..? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು..? ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಓದಿರಿ.
ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳಿಗೆ ಸೇರಿದ ಮಹಿಳೆಯರಿಗೆ ಉಚಿತವಾಗಿ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಾರೆ ಮತ್ತು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಭರ್ತಿ ಮಾಡಿಕೊಳ್ಳಬಹುದು.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ LPG ಸಂಪರ್ಕ ಪಡೆಯುವ ಫಲಾನುಭವಿಗಳಿಗೆ ಎರಡು ಬರ್ನರ್ ಸ್ಟೌವ್, 14.2 KG ಸಿಲಿಂಡರ್ ಮತ್ತು ಎರಡು 5 kg ಸಿಲಿಂಡರ್, ಒಂದು ರೆಗ್ಯುಲೇಟರ್, ಹಾಗೂ ಡಿ.ಜಿ.ಸಿ.ಸಿ ಬುಕ್ಗಳನ್ನು ಉಚಿತವಾಗಿ ನೀಡುತ್ತಾರೆ.
PM Ujjwala Yojana ಗೆ ಅರ್ಹತೆಗಳೇನು?
- ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ಕ್ಕಿಂತ ಹೆಚ್ಚಿರಬೇಕು.
- ಅರ್ಜಿದಾರರ ಕುಟುಂಬದ ಯಾವೊಬ್ಬ ಸದಸ್ಯರ ಹೆಸರಿನಲ್ಲಿಯೂ LPG ಗ್ಯಾಸ್ ಕನೆಕ್ಷನ್ ಇರಬಾರದು.
- ನೀವು ಈಗಾಗಲೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ, ನಿಮಗೆ ಈ ಯೋಜನೆಯ ಪ್ರಯೋಜನ ದೊರೆಯುವುದಿಲ್ಲ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- BPL ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ಬುಕ್ನ ಪ್ರತಿ
- ಪಾಸ್ಪೋರ್ಟ್ ಗಾತ್ರದ ಫೋಟೋ
ಅಧಿಕೃತ ವೆಬ್ಸೈಟ್: Apply Online
ಇತರೆ ಮಾಹಿತಿಗಳು:

