ಸ್ವಯಂ ಉದ್ಯೋಗ ಯೋಜನೆ 2023, ಅರ್ಹತೆ, ಬೇಕಾಗುವ ದಾಖಲೆ ಇತರೆ ಮಾಹಿತಿ ಇಲ್ಲಿದೆ | Self Employment Direct Loan Scheme 2023 Apply @ sevasindhu.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ.. ಸ್ವಯಂ ಉದ್ಯೋಗ ಆರಂಭಿಸಲು ಸರ್ಕಾರ ನೀಡುವ ಸಹಾಯಧನದ ಕುರಿತು ಮಾಹಿತಿ ಈ ಲೇಖನದಲ್ಲಿ ಒದಗಿಸಲಾಗಿದೆ. ಅರ್ಹ ಅಭ್ಯರ್ಥಿಗಳು Self Employment Direct Loan Scheme 2023 ಯೋಜನೆಯ ಮಾಹಿತಿಯನ್ನು ಪಡೆದು ಯೋಜನೆಯ ಲಾಭ ಪಡೆದುಕೊಳ್ಳಬೇಕು.

ಸ್ವಯಂ ಉದ್ಯೋಗ ಕೈಗೊಳ್ಳಲು ಸಾಂಪ್ರದಾಯಿಕ ವೃತ್ತಿಗಳಲ್ಲದೆ ಇತರೆ ವೃತ್ತಿಗಳಾದ ತರಕಾರಿ, ಹಣ್ಣು, ಹಂಪಲು, ಮೀನು, ಮಾಂಸ ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಮುಂತಾದ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಅವಶ್ಯವಿರುವ ಸಾಲ ಮತ್ತು ಸಹಾಯಧನವನ್ನು ನಿಗಮಗಳಿಂದ ಮಂಜೂರು ಮಾಡುತ್ತಾರೆ.

Self Employment Direct Loan Scheme 2023 ಮಾಹಿತಿ:

ಯೋಜನೆಯ ಹೆಸರು: ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಸಹಾಯಧನ ಮೊತ್ತ: ಘಟಕ ವೆಚ್ಚ ರೂ.1 ಲಕ್ಷ, ರೂ. 50 ಸಾವಿರ ಸಹಾಯಧನ ನೀಡುತ್ತಾರೆ ಹಾಗೂ ರೂ. 50 ಸಾವಿರ ಸಾಲ ಸೌಲಭ್ಯ
ಅರ್ಜಿದಾರರ ವಯಸ್ಸು: 21 ವರ್ಷ ರಿಂದ 50 ವರ್ಷದವರೆಗಿನವರು

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ವೈಶಿಷ್ಟ್ಯಗಳು:

 • ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.
 • ಯೋಜನೆಯ ಘಟಕ ವೆಚ್ಚ ರೂ.1 ಲಕ್ಷ, ರೂ. 50 ಸಾವಿರ ಸಹಾಯಧನ ನೀಡುತ್ತಾರೆ ಹಾಗೂ ರೂ. 50 ಸಾವಿರ ಸಾಲ ಸೌಲಭ್ಯ
 • ಸಾಲದ ಮೊತ್ತವನ್ನು ಶೇ.4 ರ ಬಡ್ಡಿ ದರದಲ್ಲಿ 30 ಸಮಾನ್ಯ ಕಂತುಗಳಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ.

Self Employment Direct Loan Scheme 2023 ಬೇಕಾಗುವ ದಾಖಲೆಗಳು:

 • ಭಾವಚಿತ್ರ
 • ಜಾತಿ ಪ್ರಮಾಣಪತ್ರ  (RD ಸಂಖ್ಯೆ ಹೊಂದಿರಬೇಕು)
 • ಆದಾಯ ಪ್ರಮಾಣಪತ್ರ  (RD ಸಂಖ್ಯೆ ಹೊಂದಿರಬೇಕು)
 • ಆಧಾರ್ ಕಾರ್ಡ್
 • ಬ್ಯಾಂಕ್ ಪಾಸ್ ಬುಕ್‌

ಯಾರು ಅರ್ಜಿ ಸಲ್ಲಿಸಬಹುದು?
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

 • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
 • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
 • ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
 • ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
 • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.

Swayam Udyoga Nera Sala Yojane ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.

2023-2024ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅರ್ಜಿ ಆಹ್ವಾನಿಸಲಾಗುತ್ತಿದೆ.

ಪ್ರಮುಖ ದಿನಾಂಕಗಳು:
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-12-2023

Swayam Udyoga Nera Sala Yojane 2023 Karnataka Application Link:
ಆನ್‌ಲೈನ್‌ ಅರ್ಜಿ ಲಿಂಕ್‌:
ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ sevasindhu.karnataka.gov.in

ವಿಷೇಶ ಸೂಚನೆಗಳು:

 • ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೊರ್ಟಲ್ ಮೂಲಕವೇ ಸಲ್ಲಿಸುವುದು.
 • ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
 • ಫಲಾಪೇಕ್ಷಿಗಳು ‘ಗ್ರಾಮ ಒನ್ʼ, ʼಬೆಂಗಳೂರು ಒನ್ʼ, ʼಕರ್ನಾಟಕ ಒನ್ʼ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ನಿಯಮಗಳು:

 • ಫಲಾನುಭವಿಗಳು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು.
 • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ರೂ.1.50 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ.2 ಲಕ್ಷಗಳ ಮಿತಿಯೊಳಗಿನವರಾಗಿರಬೇಕು.
 • ಅರ್ಜಿದಾರರು 21 ವರ್ಷದಿಂದ 50 ವರ್ಷದೊಳಗಿನ ವಯೋಮಾನದವರಾಗಿರಬೇಕು.
 • ಉದ್ದೇಶಿತ ವ್ಯಾಪಾರ ಅಥವಾ ಚಟುವಟಿಕೆ ಆಧಾರದ ಮೇಲೆ ಸಾಲಮತ್ತು ಸಹಾಯಧನ ಮಂಜೂರು ಮಾಡಲಾಗುತ್ತದೆ.
 • ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ.
 • ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುತ್ತದೆ.

ಇತರೆ ಮಾಹಿತಿಗಳನ್ನು ಓದಿ

New Ration Card: ಹೊಸ ರೇಷನ್‌ ಕಾರ್ಡ್‌ ವಿತರಣೆ; ಸರ್ಕಾರದಿಂದ ಗುಡ್‌ ನ್ಯೂಸ್

ಪ್ರೇರಣಾ ಯೋಜನೆ 2023, ಮಹಿಳೆಯರಿಗೆ ರೂ.2.5 ಲಕ್ಷ ಸಹಾಯಧನ & ಸಾಲ ಸೌಲಭ್ಯ

ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ

ವಾಹನ ಖರೀದಿಸಲು 4 ಲಕ್ಷ ರೂ. ಸಹಾಯಧನ

ಗೃಹಲಕ್ಷ್ಮಿ: 2ನೇ ಕಂತಿನ 2,000 ರೂ. ಹಣ ಬಿಡುಗಡೆ ಯಾವಾಗ?

Telegram Group Join Now
WhatsApp Group Join Now

1 thought on “ಸ್ವಯಂ ಉದ್ಯೋಗ ಯೋಜನೆ 2023, ಅರ್ಹತೆ, ಬೇಕಾಗುವ ದಾಖಲೆ ಇತರೆ ಮಾಹಿತಿ ಇಲ್ಲಿದೆ | Self Employment Direct Loan Scheme 2023 Apply @ sevasindhu.karnataka.gov.in”

Leave a Comment

error: Content is protected !!