BPL ರೇಷನ್‌ ಕಾರ್ಡ್‌ ರದ್ದಾಗಲ್ಲ: ಸಚಿವರಿಂದ ಸ್ಪಷ್ಟನೆ | No BPL Card Cancellation in karnataka : KH Muniyappa

Telegram Group Join Now
WhatsApp Group Join Now

No BPL Card Cancellation in karnataka: ಹಲವು ದಿನಗಳಿಂದ ಬಿಪಿಎಲ್ ರೇಷನ್‌ ಕಾರ್ಡ್‌ ರದ್ದಾಗಲಿದೆ ಎಂದು ಊಹಾಪೊಹಗಳು ಹರಿದಾಡುತ್ತಿದ್ದು, ಈ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ 1.28 ಕೋಟಿ ಜನರು ರೇಷನ್‌ ಕಾರ್ಡ್‌ ಹೊಂದಿದ್ದಾರೆ. ಪರಿಶೀಲನೆ ಮಾಡಿ ಅನ್ನ ಭಾಗ್ಯ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ಯಾರು ಅರ್ಹರಿದ್ದಾರೆ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ, ಅವರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಯಾವುದೇ ಬಿಪಿಎಲ್ ಪಡಿತರ ಚೀಟಿಯನ್ನು​ ರದ್ದು ಮಾಡುವುದಿಲ್ಲ ಎಂದು ಸಚಿವ ಕೆ. ಹೆಚ್​ ಮುನಿಯಪ್ಪ ತಿಳಿಸಿದ್ದಾರೆ.

No BPL Card Cancellation in karnataka

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ 3 ಲಕ್ಷ ಜನರು ಅರ್ಜಿ ಹಾಕಿದ್ದರು. ಅರ್ಜಿ ಪರಿಶೀಲನೆ ಮಾಡಿ ಅನುಮೋದನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮೂರು ತಿಂಗಳಲ್ಲಿ ಅರ್ಹತೆ ಹೊಂದಿರುವವರಿಗೆ ಬಿಪಿಎಲ್​, ಎಪಿಎಲ್​​ ಕಾರ್ಡ್ ನೀಡಲಾಗುವುದು. ಕಾರ ಇದ್ದರೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಚಾರವಾಗಿ ಮಾತನಾಡಿದ ಸಚಿವರು, ಈ ನಿಯಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿದ್ದು, ಸದ್ಯಕ್ಕೆ ಈ ವಿಚಾರದಲ್ಲಿ ಯಾವುದೆ ತೀರ್ಮಾನ ಮಾಡಿಲ್ಲ.

ಪರಿಶೀಲನೆ ಮಾಡಿ ಎಲ್ಲರಿಗೂ ಅಕ್ಕಿ ವಿತರಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾರು BPL, ಅಂತ್ಯೋದಯ ಕಾರ್ಡ್‌ಗೆ ಅರ್ಹರಿರುತ್ತಾರೆ ಅವರಿಗೆ ತೊಂದರೆ ಆಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಭರವಸೆ ನೀಡಿದ್ದಾರೆ.

ಇತರೆ ಮಾಹಿತಿಗಳನ್ನು ಓದಿ

ಸಣ್ಣ ವ್ಯಾಪಾರ ಆರಂಭಿಸಲು 50,000 ರೂ. ಸಾಲ ಮತ್ತು ಸಹಾಯಧನ

ವಾಹನ ಖರೀದಿಸಲು 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಸಲ್ಲಿಸಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ

ಅನ್ನಭಾಗ್ಯ ಯೋಜನೆ: DBT Status ಚೆಕ್‌ ಮಾಡಿ

ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಮುಹೂರ್ತ ಫಿಕ್ಸ್, ಹೊಸ ದಿನಾಂಕ ನಿಗದಿ

ರೇಷನ್ ಕಾರ್ಡ್ Status ಅನ್ನು ಮೊಬೈಲ್‌ನಲ್ಲೇ ಚೆಕ್‌ ಮಾಡಿ

ಗೃಹಲಕ್ಷ್ಮಿ ಯೋಜನೆ

Telegram Group Join Now
WhatsApp Group Join Now

Leave a Comment